23/12/2024
IMG-20241205-WA0005

ಬೆಳಗಾವಿ-೦೫:ಗುರುವಾರ ನಗರದಲ್ಲಿ ಐ ಟಿ ಉದ್ಯಮಿಗಳನ್ನು ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ಆಮ್ ಆದ್ಮಿ ಪಕ್ಷ  ಬೈಕ್  ರ್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿ ಗೆ  ಮನವಿ ಸಲ್ಲಿಸಲಾಯಿತು.

ನಗರದ ಸಿವಿಲ್ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸೇವೆ ಆರಂಭಿಸಬೇಕು. ಜಿಲ್ಲೆಯಲ್ಲಿ ಪೌಂಡ್ರಿ ಮತ್ತು ಮಷೀನಿಂಗ್ ಪಾರ್ಕ ಸ್ಥಾಪನೆ, ಐಟಿ, ಜವಳಿ ಪಾರ್ಕ್ ಹಾಗೂ ವೈದ್ಯಕೀಯ ಪಾರ್ಕ್ ಗಳನ್ನು ಸ್ಥಾಪಿಸುವ ಮೂಲಕ ಯುವಕರಿಗೆ ಹೆಚ್ಚಿನ ಉದ್ಯೋಗಾವ ಕಾಶವನ್ನು ಕಲ್ಪಿಸಬೇಕು ಎಂದರು‌.

ಯುವಕರು ಹೊರ ರಾಜ್ಯಗಳಿಗೆ ಹೋಗಿ ಕೆಲಸ ನಿರ್ವಹಿಸುವ ಪರಿಸ್ಥಿತಿ ಇದೆ. ಜಿಲ್ಲೆಯಲ್ಲಿ ಐಟಿ ಉದ್ಯಮಿಗಳನ್ನು ಸ್ಥಾಪಿಸಿ ವಿದ್ಯಾವಂತ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅನೇಕರು ಪ್ರತಿಭಟನೆ ಯಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!