ಬೆಳಗಾವಿ-೨೯: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠ ಬೆಳಗಾವಿ, ಬೆಳಗಾವಿ ವೈದ್ಯಕೀಯ ಮಹಾವಿದ್ಯಾಲಯದ ರಾಷ್ರೀಯ ಸೇವಾ ಯೋಜನೆ ಮತ್ತು ನ್ಯಾಷನಲ್ ಮೇಡಿಕೋಸ್ ಅಸೋಸಿಯೆಶನ್ ವತಿಯಿಂದ ಶುಕ್ರವಾರ ನವೆಂಬರ್ ೨೯,೨೦೨೪ ರಂದು ಭೂತರಾಮನಹಟ್ಟಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ನೀತಿಕತೆಯ ಮೂಲಕ ಎಲ್ಲ ವಿದ್ಯಾರ್ಥಿಗಳಿಗೆ ಆರೋಗ್ಯದ ಮಹತ್ವವನ್ನು ವಿವರಿಸುತ್ತಾ ಮಕ್ಕಳು ಸರಿಯಾದ ಸಮಯಕ್ಕೆ ಊಟ, ವ್ಯಾಯಾಮ, ನಿದ್ದೆ ಮಾಡಿ ಹೊರಗಿನ ಆಹಾರ ಕಡಿಮೆ ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳುವದು ಇವತ್ತಿನ ದಿನಮಾನಗಳಲ್ಲಿ ಬಹಳ ಮುಖ್ಯವಾಗಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಸಿ. ಎಂ. ತ್ಯಾಗರಾಜ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೀವನದಲ್ಲಿ ಪ್ರತಿಯೊಬ್ಬರು ಶಿಸ್ತು, ಶುಚಿತ್ವ, ಸಂಯಮದಿಂದ ಕಲಿಕೆ ಕಡೆ ಗಮನ ಕೊಡಬೇಕು ಮತ್ತು ಆರೋಗ್ಯವನ್ನು ಕಾಪಾಡಿಕೊಂಡು ಸದಾ ಯಶಸ್ಸಿನೆಡೆಗೆ ಸಮಾಜದ ಒಳಿತಿಗಾಗಿ ಜೀವನ ನಡೆಸುವದು ಅವಶ್ಯ ಎಂದು ತಿಳಿಸಿದರು. ಸರಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಭೂತರಾಮನಹಟ್ಟಿ ಮಕ್ಕಳ ಸಂಗೀತದ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ವಿವಿಧ ಆರೋಗ್ಯ ತಪಾಸಣಾ ಕಾರ್ಯಗಳ ಕುರಿತಾದ ಸವಿಸ್ತಾರ ಮಾಹಿತಿ ನೀಡಲಾಯಿತು. ಬೆಳಗಾವಿ ವೈದ್ಯಕೀಯ ಮಹಾವಿದ್ಯಾಲಯದ ಹಿರಿಯ ವ್ಯದ್ಯರಾದ ಡಾ. ಎ. ಎಸ್. ನಾಗಲಿಕರ, ಡಾ. ಕಿರಣ ಪಡಿಯಪ್ಪನವರ, ಎನ್.ಎಸ್.ಎಸ್. ಸಂಯೋಜಕರಾದ ಡಾ. ಮಂಜುನಾಥ ಕಾಂಬಳೆ ಹಾಗೂ ಪದವಿ ಮತ್ತು ಸ್ನಾತ್ತಕೊತ್ತರ ಪದವಿಯ ೪೫ ಜನ ವೈದ್ಯರ ತಂಡ ಸರಿಸುಮಾರು ೩೧೮ ಚಿಕ್ಕ ಮಕ್ಕಳ ಮತ್ತು ೧೮೬ ಜನ ಗ್ರಾಮಸ್ಥರ ಆರೋಗ್ಯ ತಪಾಸಣೆ ಕೈಗೊಳ್ಳಲಾಯಿತು. ನೇತ್ರ. ಕಿವಿ, ಮೂಗು, ಗಂಟಲು, ಎಲುವು ಮತ್ತು ಕೀಲು, ಚರ್ಮ,ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗಗಳ ವೈದ್ಯರ ತಂಡ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿದರು. ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕರಾದ ಡಾ. ಶಿವಲಿಂಗಯ್ಯ ಗೋಠೆ ಕಾರ್ಯಕ್ರಮ ನಿರೂಪಿಸಿದರು. ಮತ್ತು ದೀನದಯಾಳ ಅದ್ಯಯನ ಪೀಠದ ನಿರ್ದೇಶಕರಾದ ಪ್ರೊ. ಬಿ. ಎಸ್. ನಾವಿ ವಂದಿಸಿದರು. ಭೂತರಾಮನಹಟ್ಟಿ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ. ಬಸವರಾಜ ಸುಂಗಾರಿ. ಎಸ್.ಡಿ.ಎಮ್.ಸಿ, ಅಧ್ಯಕ್ಷರು ಪರಸಪ್ಪ ಪಾಟೀಲ, ಸದಸ್ಯರಾದ ಈರಪ್ಪ ಪಾಟೀಲ, ಅನೀಲ, ಅಧ್ಯಯನ ಪೀಠದ ಸಹಾಯಕ ಸಂಶೋಧಕ ಯಲ್ಲಪ್ಪ ಮೂಡಲಗಿ ಹಾಗೂ ಶಾಲೆಯ ಶಿಕ್ಷಕ ವೃಂದ, ಗ್ರಾಮಸ್ಥರು ಮತ್ತು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಜರಿದ್ದರು.