ಬೆಳಗಾವಿ-೨೮: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಹ್ಯಾದ್ರಿ ನಗರದಲ್ಲಿರುವ ಶ್ರೀ ಮಹಾಬಳೇಶ್ವರ ದೇವಸ್ಥಾನದ ಮೇಲ್ಚಾವಣಿಗೆ ಕಾಂಕ್ರೀಟ್ ಹಾಕುವ ಕಾಮಗಾರಿಗೆ (ಸ್ಲ್ಯಾಬ್) ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಗುರುವಾರ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಕಾಳಜಿ ಹಾಗೂ ಅವರ ಅನುದಾನದಡಿ ದೇವಸ್ಥಾನ ಜೀರ್ಣೋದ್ಧಾರಗೊಳ್ಳಲಿದ್ದು, ಸ್ಥಳೀಯ ನಿವಾಸಿಗಳ ಸಲಹೆ ಸೂಚನೆ ಪಡೆದು, ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಚನ್ನರಾಜ ಹಟ್ಟಿಹೊಳಿ ಸೂಚಿಸಿದರು.
ಈ ವೇಳೆ ಸುರೇಶ ಜಾಡಗಿ, ಮಠಪತಿ, ಪ್ರಭಾಕರ ಮತ್ತಿಕಟ್ಟಿ, ವಿವೇಕ ಹಿರೇಮಠ, ಮನೋಹರ ಸದಲಗಿ, ಕೃಷ್ಣ ಕೊನೇರಿ, ಸೇರಿದಂತೆ ಮುತಂದವರು ಪಾಲ್ಗೊಂಡಿದ್ದರು.