23/12/2024
IMG-20241128-WA0003

IMG 20241128 121434 -

*”ಕ್ರಾಂತಿಕಾರಿಗಳ ಜೀವನ ಆದರ್ಶ ಇಂದಿನ ಅವಶ್ಯಕತೆ”*

ಬೆಳಗಾವಿ-೨೮:ಯುವ ಜನರ ಮೇಲೆ ಎಲ್ಲಾ ರೀತಿಯಿಂದಲೂ ದಾಳಿ ನಡೆಯುತ್ತಿದೆ.ಕೊಲೆಗಾರ, ಅತ್ಯಾಚಾರಿ ನಟರನ್ನು, ರಾಜಕಾರಣಿಗಳನ್ನು ಆದರ್ಶವೆಂದು ಬಿಂಬಿಸಲಾಗುತ್ತಿದೆ. ಇಂತಹ ನಿರ್ವಾತ ಪರಿಸರದಲ್ಲಿ ನಮ್ಮ ದೇಶದ ಮಹಾನ್ ಕ್ರಾಂತಿಕಾರಿಗಳ, ನವೋದಯದ ಹರಿಕಾರರ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಅನ್ಯಾಯದ ವಿರುದ್ಧ ಹೋರಾಟದಲ್ಲಿ ಯುವಜನರು ಪಾಲ್ಗೊಳ್ಳಬೇಕು ಎಂದು ಧಾರವಾಡ ಜನಜಾಗೃತಿ ಅಭಿಯಾನದ ಸಲಹೆಗಾರ ರಾಮಾಂಜನಪ್ಪ ಆಲ್ದಳ್ಳಿ ಕರೆ ನೀಡಿದರು.

ಅವರು ಗುರುವಾರ ನಗರದಲ್ಲಿ ನಡೆದ ಆಲ್ ಇಂಡಿಯಾ ಡೆಮೊಕ್ರಟಿಕ್ ಯೂತ್ ಆರ್ಗನೈಸೇಶನ್ (AIDYO) ಏರ್ಪಡಿಸಿದ್ದ ಯುವಜನರ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿ ಉನ್ನತ ನೀತಿ, ಸಂಸ್ಕೃತಿಯನ್ನು ಬೆಳೆಸಲು ನಮ್ಮ ಯುವಜನರು ಮುಂದೆ ಬರಬೇಕು. ಹೊಸ ನೀತಿ, ಹೊಸ ಆದರ್ಶ, ಹೊಸ ಮೌಲ್ಯಗಳೊಂದಿಗೆ ಸಮ ಸಮಾಜವನ್ನು ಕಟ್ಟಲು ಪಣತೊಡಬೇಕಾಗಿದೆ ಎಂದು ಅವರು ಹೇಳಿದರು.

ಬಿಮ್ಸ್ ನರ್ಸಿಂಗ್ ಕಾಲೇಜಿನ ಉಪನ್ಯಾಸಕ ಡಾ.ತನ್ವೀರ್ ನಾಕೋಡಿ ಯುವ ಮನಸ್ಸಿನ ತಲ್ಲಣಗಳು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ ಇಂದು ಬಂಡವಾಳಶಾಹಿ ವ್ಯವಸ್ಥೆಯ ಹುನ್ನಾರದಿಂದಾಗಿ ಅಶ್ಲೀಲ ಚಿತ್ರೋದ್ಯಮವು ವ್ಯಾಪಕವಾಗಿ ಬೆಳೆದು ಯುವಜನರನ್ನು ಹಾಳು ಮಾಡುತ್ತಿದೆ. ಅಂತರ್ಜಾಲದ ಗೀಳಿಗೆ ಬಿದ್ದಿರುವ ಯುವ ಜನರು ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಉತ್ತಮ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಶಿಸ್ತು ಬದ್ಧ ಜೀವನ ನಡೆಸಿದಾಗ ಮಾತ್ರ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಓದುವುದನ್ನು ರೂಢಿಸಿಕೊಂಡಾಗ ಜ್ಞಾನವನ್ನು ಗಳಿಸಿಕೊಳ್ಳ ಬಹುದು ಎಂದು ಅವರು ಅಭಿಪ್ರಾಯಪಟ್ಟರು.

AIDYO ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ವಿನಯ್ ಸಾರಥಿ ಆಶಯ ನುಡಿಗಳನ್ನು ಮಾತನಾಡಿದರು. ರಾಜು ಗಾಣಿಗೇರ ಜಿಲ್ಲಾ ಸಂಚಾಲಕರು ಅಧ್ಯಕ್ಷತೆಯನ್ನು ವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!