ಬೆಳಗಾವಿ-೨೮:ಗುರುವಾರ ನಡೆದ ಮನವಿ ಮೂಲಕ ಜಿಲ್ಲಾಧಿಕಾರಿ ಅರ್ಪಿಸಿದ ನಗರದಲ್ಲಿ ಡಿ.9ರಂದು ಮಹಾಮೇಳ ಆಯೋಜಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ವತಿಯಿಂದ ಪ್ರತಿಭಟನೆ ನಡೆಯಿತು
ಮಾಜಿ ಶಾಸಕ ಮನೋಹರ್ ಕಿಣೇಕರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕರ್ತರು ಕರ್ನಾಟಕ ಸರಕಾರ ಈ ವಿವಾದಿತ ಪ್ರದೇಶದ ಮೇಲೆ ತನ್ನ ಹಿಡಿತ ಸಾಧಿಸುವ ಸಲುವಾಗಿ ಮರಾಠಿ ಭಾಷಿಕರ ಆಶಯಕ್ಕೆ ವಿರುದ್ಧವಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಸ ಲಾಗುತ್ತಿದೆ. ಇದನ್ನು ವಿರೋಧಿಸಿ ಪ್ರತಿದಿನ ಸಮಾನಾಂತರ ಜನತಾ ಸಭೆ (ಮಹಾ-ಮೇಳ) ಏರ್ಪಡಿಸುವ ಮೂಲಕ ಮರಾಠಿ ಭಾಷಿಕರು ತಮ್ಮ ಇಚ್ಛೆ ಮತ್ತು ಆಶಯವನ್ನು ವ್ಯಕ್ತಪಡಿಸಲಿದ್ದವೆ. ಹೀಗಾಗಿ ಅವಕಾಶ ಕಲ್ಪಿಸಬೇಕು.
ಶಹಾಪೂರದ ಛತ್ರಪತಿ ಶಿವಾಜಿ ಗಾರ್ಡನ್, ಖಡೇ ಬಜಾರ್ ನ ಸಂಯುಕ್ತ ಮಹಾರಾಷ್ಟ್ರ ಚೌಕ್, ಮಹಾದ್ವಾರ ರಸ್ತೆಯ ಧರ್ಮವೀರ ಸಂಭಾಜಿ ಉದ್ಯಾನ,ಬೋಗಾರ್ ವೆಸ್ ನ ಧರ್ಮವೀರ ಸಂಭಾಜಿ ಚೌಕ್, ಹಾಗೂ ಗೋವಾವೆಸ್ ನ ಬಸವೇಶ್ವರ ವೃತ್ತ ಸೇರಿದಂತೆ ಯಾವುದಾದರೂ ಒಂದು ಸ್ಥಳದಲ್ಲಿ ಸಭೆ ಆಯೋಜಿಸಲು ಅಗತ್ಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಎಂಇಎಸ್ ಕಾರ್ಯಕರ್ತರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಮಾಲೋಜಿ ಅಷ್ಟೇಕರ್, ಪ್ರಕಾಶ ಮರಗಾಳೆ, ಎಂ. ಜಿ. ಪಾಟೀಲ, ವಿಕಾಸ ಕಲಘಟಗಿ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದರು.