ಬೆಳಗಾವಿ-೨೮:ಗುರುವಾರ ಪತ್ರಿಕಾಗೋಷ್ಠಿಯಲ್ಲಿ ನಡೆದ ಮುಗಳಖೋಡ ಜಿಡಗಾ ಮಠದ ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಸ್ವಾಮೀಜಿ ಅವರ 40ನೇ ಗುರುವಂದನ ಮಹೋತ್ಸವ ಹಾಗೂ ವಿವಿಧ ಕಾರ್ಯಕ್ರಮಗಳು ನವೆಂಬರ್ 30, ಡಿಸೆಂಬರ್ 1 ಮತ್ತು 2 ರಂದು ಮುಗಳಖೋಡದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀ ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗುರುವಾರ(ಇಂದು)ಅವರು ಮಾತನಾಡುತ್ತಾ ನವೆಂಬರ್ 30 ಹಾಗೂ ಡಿಸೆಂಬರ್ 1 ಮತ್ತು 2 ರಂದು ಶ್ರೀಗಳ ಮಹಾಸಂಕಲ್ಪದಂತೆ ಮೂರು ದಿನಗಳ ಕಾಲ ಜೈ ಜವಾನ, ಜೈ ಕಿಸಾನ್, ಜೈ ವಿಜ್ಞಾನ, ಜೈ ಶಿಕ್ಷಣದ ಅಡಿ ರೈತರ ಅನುಕೂಲಕ್ಕಾಗಿ ಕೃಷಿ ಮೇಳ ಆಯೋಜಿಸಲಾಗಿದೆ ಎಂದರು.
ಜೈ ಜವಾನ್ ಘೋಷವಾಕ್ಯದಡಿ ಡಿ.01 ರಂದು ಮಧ್ಯಾಹ್ನ 12.30ರಿಂದ ಸಂಜೆ 5 ಗಂಟೆಯವರೆಗೆ ದೇಶದ ಬೆನ್ನೆಲಬು ರೈತರಿಗೆ ವಿಶೇಷ ಗೌರವ ಸಲ್ಲಿಸುವ ಉದ್ದೇಶದಿಂದ ಒಂದೇ ವೇದಿಕೆಯಲ್ಲಿ 30 ಸಾವಿರ ರೈತರನ್ನು ಒಂದುಗೂಡಿಸಿ ತ್ರಿವರ್ಣ ಗಾಂಧಿ ಟೋಪಿ ಧಾರಣ ಮಾಡಿಸಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಸಲ್ಲಿಸುವ ನೇಗಿಲಯೋಗಿ ಮಹೋತ್ಸವ ಎಂಬ ವಿಶೇಷ ಸಮಾರಂಭ ಆಯೋಜಿಸಲಾಗಿದೆ. ಈ ವೇಳೆ 1 ಗಂಟೆಯಿಂದ 3 ಗಂಟೆಯವರೆ ಸುನೀತಾ ಜೋಗಿ ಮತ್ತು ದಿಯಾ ಹೆಗಡೆ ಅವರಿಂದ ಸಂಗೀತ ಮನರಂಜ ಕಾರ್ಯಕ್ರಮ ಜರುಗಲಿದೆ ಎಂದರು.
ಡಿಸೆಂಬರ್ 1 ರಂದು 400 ಜನ ಭಕ್ತರಿಂದ ಬಡ ಮಕ್ಕಳ ಭವಿಷ್ಯಕ್ಕಾಗಿ ನಾಣ್ಯಗಳಿಂದ ಪೂಜ್ಯ ಶ್ರೀ ಷಡಕ್ಷರಿ ಶಿವಯೋಗಿ ಡಾ :ಮುರುಘರಾಜೇಂದ್ರ ಮಹಸ್ವಾಮಿಗಳಿಗೆ ತುಲಾಭಾರ ಸಮಾರಂಭ ಜರುಗಲಿದೆ,ತುಲಾಭಾರ ಸೇವೆಯಿಂದ ಬಂದ ನಿಧಿಯನ್ನು ಜಿಡಗಾ ಶ್ರೀಮಠದ ಶಿವಯೋಗಿ ಜ್ಞಾನ ಮಂದಿರ ಬಡ ಮಕ್ಕಳ ಉಚಿತ ಶಿಕ್ಷಣದ ಸಲುವಾಗಿ ವಿನಿಯೋಗಿಸಲು ಪೂಜ್ಯರ ದೃಢ ಸಂಕಲ್ಪ್ ವಾಗಿದೆ ಎಂದರು.
ಬಸವರಾಜ ಚಂದ್ರಕಾಂತ ಜೋಪಾಟೆ ಮಾತನಾಡಿ, ಜೈ ವಿಜ್ಞಾನ ಘೋಷವಾಕ್ಯದಡಿಯಲ್ಲಿ ಪ್ರತಿ ವರ್ಷ ಗುರುವಂದನ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ರಾಷ್ಟ್ರಮಟ್ಟದ ಸಿದ್ಧಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡುತ್ತ ಬಂದಿದ್ದೇವೆ. ಈ ಪ್ರಶಸ್ತಿ ಒಂದು ಲಕ್ಷ ರೂ. ನಗದು ಹಾಗೂ 20 ಗ್ರಾಂ ಸುವರ್ಣ ಪದಕವನ್ನು ಒಳಗೊಂಡಿರುತ್ತದೆ. ಈ ವರ್ಷದ ಪ್ರಶಸ್ತಿಯನ್ನು ವೈಜ್ಞಾನಿಕ ಸಂಶೋಧನೆಯಲ್ಲಿ ಸಾಧನೆ ಮಾಡಿರುವ ಇಸ್ರೋ ಸಂಸ್ಥೆಗೆ ಪ್ರದಾನ ಮಾಡಲಾಗುವುದು ಎಂದರು.
ಡಿಸೆಂಬರ್ 2 ರಂದು ಸಂಜೆ 5 ಗಂಟೆಯಿಂದ ಕಾಶಿ ಕ್ಷೇತ್ರದ ಶ್ರೀ ವಿಶ್ವನಾಥನಿಗೆ ತನಾರತಿ ಮಾಡುವ ಬಳಗದಿಂದ ಸದ್ಗುರು ಯಲ್ಲಾಲಿಂಗ ಮಹಾಪ್ರಭುಗಳವರಿಗೆ ತನಾರತಿ ಮಾಡುವ ಮೂಲಕ ಗುರುವಂದನಾ ಮಹೋತ್ಸವ ಜನರುಗಲಿದೆ. ಅದೇದಿನ ಸಂಜೆ ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ ಮತ್ತು ತಂಡದಿಂದ ಸ್ವರ ಸಂಗೀತ ಸಂಭ್ರಮ ಜರುಗಲಿದೆ. ಈಕಾರ್ಯಕ್ರಮದಲಿ 5 ರಾಜ್ಯಗಳಿಂದ ಶ್ರೀಮಠದಲ್ಲಿ 1 ಲಕ್ಷಕ್ಕಿಂತ ಅಧಿಕ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿ.ಎ.ನಾಡಗೌಡ ಸೇರಿದಂತೆ ಮುಂತಾದವರು ಹಾಜರಿದ್ದರು.