ಬುಡ ಕಟ್ಟು ಜನಾಂಗದವರು ಸರ್ಕಾರದ ಸೌಲಭ್ಯಗಳನ್ನು ಪಡೆದು ಆರ್ಥಿಕ, ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರಬೇಕು:ಈರಣ್ಣ ಕಡ್ಡಾಡಿ
ಬೆಳಗಾವಿ-೧೫: ಬುಡಕಟ್ಟು ಜನಾಂಗದವರನ್ನು ಮುಖ್ಯ ವಾಹಿನಿಗೆ ತರಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರುವಂತೆ ರಾಜ್ಯ ಸಭೆ ಸದಸ್ಯರಾದ ಈರಣ್ಣ ಕಡ್ಡಾಡಿ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಇವರುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ (ನ. ೧೫) ರಂದು ನಗರದ ಕುಮಾರ ರಂಗ ಮಂದಿರದಲ್ಲಿ ನಡೆದ ಧರ್ತಿ ಅಲಾ ಭಗವಾನ ಬಿರ್ಸಾ ಮುಂಡಾರಿ ಅವರ ೧೫೦ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.ಬಿರ್ಸಾ ಮುಂಡಾರಿ ಅವರನ್ನು ಬುಡಕಟ್ಟು ಜನಾಂಗದವರು ಭಗವಾನ್ ಎಂದು ಪೂಜಿಸುತ್ತಾರೆ. ಅನೇಕ ಬುಡ್ ಕಟ್ಟು ಜನರಿಗೆ ಮುಖ್ಯ ವಾಹಿನಿಗಳ ಬಗ್ಗೆ ಗೊತ್ತಿಲ್ಲ ಅಂತ ಬುಡ್ ಕಟ್ಟು ಜನರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಲುಪಿಸುವಂತ ಗಮನ ಸರ್ಕಾರ ಮಾಡುತ್ತಿದೆ. ಇನ್ನು ಸಮಾಜದ ಮುಖ್ಯ ವಾಹಿನಿಗಳಿಗೆ ಯಾವ ಜನಾಂಗದವರು ಬಂದಿಲ್ಲ ಅಂತ ಜನಾಂಗದವರಿಗೆ ಮುಖ್ಯ ವಾಹಿನಿಗೆ ಬರುವಂತೆ ೧೭ ಇಲಾಖೆಗಳಿಂದ ೧೫ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದು, ಬುಡ ಕಟ್ಟು ಜನಾಂಗದ ಜನರ ಅಭಿವೃದ್ಧಿಯ ಜೀವನ ನಡೆಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳಾದ ಬಸವರಾಜ ಹೆಗ್ಗನಾಯಕ ಅವರು ಮಾತನಾಡಿ ಇತಿಹಾಸದ ಪುಟಗಳನ್ನು ಸ್ಮರಣೆ ಮಾಡಿದಾಗ ನೇಕ ಬುಡಕಟ್ಟು ಜನಾಂಗದ ಕುರಿತು ಮಾಹಿತಿ ಪಡೆಯಬಹುದಾಗಿದೆ. ಬುಡಕಟ್ಟು ಜನಾಂಗದವರು ಸ್ವಾತಂತ್ರ ಹೋರಾಟದಲ್ಲಿ ಮುಂದೆ ಇದ್ದು ಬುಡಕಟ್ಟು ಜನಾಂಗದ ಭಗವಾನ್ ಬಿರ್ಸಾ ಅವರು ಸ್ವಾತಂತ್ರ ಹೋರಾಟದ ಕಿಚ್ಚನ್ನು ಹಚ್ಚಿದವರು ಎಂದು ತಿಳಿಸಿದರು.ಬುಡಕಟ್ಟು ಸಮುದಾಯದ ನಾಯಕ, ಸ್ವಾತಂತ್ರö್ಯ ಹೋರಾಟಗಾರ, ಭಗವಾನ್ ಬಿರ್ಸಾ ಮುಂಡಾ ರವರ ೧೫೦ನೇ ವರ್ಷದ ಜನ್ಮದಿನಾಚರಣೆಯನ್ನು ಜನಜಾತಿಯ ಗೌರವ ದಿನವನ್ನಾಗಿ ದೇಶಾದ್ಯಂತ ಅತ್ಯಂತ ಸಂಭ್ರದಿAದ ಆಚರಣೆ ಮಾಡಲಾಗುತ್ತಿದೆ. ಭಾರತ ಬುಡಕಟ್ಟು ಸಮುದಾಯದ ಶ್ರೀಮಂತ ಸಾಂತ್ಕçತಿಕ ಪರಂಪರೆ, ಸಾಂಪ್ರದಾಯಿಕ ಕಲಾಕೃತಿಗಳು ಕರಕುಶಲ ಸಂಪನ್ಮೂಲಗಳನ್ನು ಇವತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ಗುರ್ತಿಸಿ ಗೌರವಿಸಲಾಗುತ್ತಿದೆ.ಇತ್ತೀಚಿನ ದಶಕಗಳಲ್ಲಿ ಬುಡಕಟ್ಟು ಸಮುದಾಯಗಳನ್ನು ಸಾಮಾಜಿವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಉನ್ನತ್ತೀಕರಣಗೊಳಿಸಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇವರ ಸಂಸ್ಕçತಿ ಸಂಪ್ರದಾಯಗಳನ್ನು ಗುರುತಿಸಿ ಇವರು ತಯಾರಿಸುವ ಉತ್ಪನ್ನಗಳಿಗೆ ಭೌಗೋಳಿಕ ಸೂಚಕ ನೀಡಲಾಗುತ್ತಿದೆ. ಆಸ್ಸಾಂನ ಜಾಪಿ ಬಿದಿರಿನ ಟೋಪಿ ಓಡಿಶಾನ ಡೊಂಗ್ರಿಯಾ ಕೊಡ್ ಶಾಲು ಮುಂತಾದವು ಸೇರಿವೆ. ಸ್ವಾತಂತ್ರö್ಯ ಸಂಗ್ರಾಮದಲ್ಲಿ ಭಾಗವಹಿಸಿದ ಬಿರ್ಸಾ ಮುಂಡಾ, ರಘುನಾಥ, ಬಾದರ್ ಬೋಮ್ ಇವರ ಹೆಸರಿನಲ್ಲಿ ವಸ್ತು ಸಂಗ್ರಹಾಯಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಒಟ್ಟಾರೆಯಾಗಿ ಇವರನ್ನು ಸರ್ವಾಂಗೀಣವಾಗಿ ಸಮಾಜದ ಮೇಲು ಸ್ಥಳಕ್ಕೆ ಕೊಂಡೋಯುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಯತ್ನಿಸುತ್ತಿವೆ ಬುಡಕಟ್ಟು ಜನಾಂಗದವರು ಸರ್ಕಾರದಿಂದ ಸಿಗುವ ಅನೇಕ ಸೌಲಭ್ಯಗಳನ್ನು ಪಡೆದು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಮಾಜದ ಮುಖ್ಯ ವಾಹಿನಿಗಳಿಗೆ ಬರುವಂತೆ ತಿಳಿಸಿದರು.ಕಾರ್ಯಕ್ರಮದಲ್ಲಿ ಬಿತ್ತನೆ ಬೀಜ ಹಾಗೂ ಮಣ್ಣಿನ ಗುಣಮಟ್ಟ ಪರೀಕ್ಷಾ ಚೀಟಿ ವಿತರಣೆ ಮಾಡಲಾಯಿತು. ತವಗ ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆ ಏಕಲವ್ಯ ಮಾದರಿ ವಸತಿ ಶಾಲೆ ಹಾಗೂ ಹಾಲಭಾವಿ ಮುರಾರ್ಜಿ ವಸತಿ ಶಾಲೆ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ರಾಮನಗೌಡ ಕನ್ನೋಳಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ಬಸವರಾಜ ಕುರಿಹೊಳಿ, ಕೃಷಿ ಇಲಾಖೆ ಉಪ ನಿರ್ದೇಶಕರಾದ ಸಲೀಮ್ ಅಹ್ಮದ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಗಿರಿಧರ ಜಾಧವ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಬಂಗಾರಪ್ಪನವರ, ತಾಲೂಕಾ ಆರೋಗ್ಯ ಅಧಿಕಾರಿಗಳಾದ ರಾಜಶ್ರೀ ಪಾಟೀಲ, ಕರ್ನಾಟಕ ಆದಿ ಜಾಂಭವ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರಾದ ಬಸವರಾಜ ಚನ್ನನವರ, ವಾಲ್ಮೀಕಿ ಸಮುದಾಯ ಮುಖಂಡರುಗಳಾದ ಭಾವಕಣ್ಣಾ ಬಂಗ್ಯಾಗೊಳ, ಯಲ್ಲಪ್ಪಾ ಕೊಳೆಕರ, ವಾಲ್ಮೀಕಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಬಸವರಾಜ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ವಾರ್ಡ್ನ ಸೋಮು ಮಾಳಗಿ ಸೇರಿದಂತೆ ಗಣ್ಯರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
