ಬೈಲಹೊಂಗಲ-೧೫:ಗ್ರಾಮೀಣ ಪ್ರದೇಶದ ರೈತರ ಭವಣೆಯನ್ನು ಹೊಗಲಾಡಿಸಲು ರೈತರಿಂದ ರೈತರಿಗಾಗಿ 1905ರಲ್ಲಿ ಏಷ್ಯಾ ಖಂಡದಲ್ಲಿಯೆ ಪ್ರಥಮ ಕೃಷಿ ಸಹಕಾರಿ ಸಂಘ ಕಟ್ಟಿದ ಸಹಕಾರಿ ರಂಗದ ಪಿತಾಮಹ ಸಿದ್ದನಗೌಡ ಪಾಟೀಲರ ಕಾರ್ಯ ಪ್ರಪಂಚವೆ ಮೆಚ್ಚಿದೆ ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.
ಪಟ್ಟಣದ ಕಾರ್ಯನಿರತ ನ್ಯಾಯವಾದಿಗಳ ಸಹಕಾರಿ ಸಂಘದಲ್ಲಿ ಗುರವಾರ ಹಮ್ಮಿಕೊಂಡಿದ್ದ 71ನೆ ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಸಹಕಾರಿ ಸಂಘವು ಜನರದ್ದೆ ಒಡೆತನದ ಮತ್ತು ಜನರೇ ನಡೆಸುವ ಸಂಸ್ಥೆಯಾಗಿದೆ. ಈ ಸಂಸ್ಥೆಯಿಂದ ಜನರಿಗೆ ಸರಕು ಮತ್ತು ಆರ್ಥಿಕ ಸಾಹಯದೊಂದಿಗೆ ಇತರೆ ಅವಶ್ಯಕ ಸೇವೆಗಳನ್ನು ನೀಡುವ ಕಾರ್ಯ ಸಹಕಾರಿ ಸಂಘಗಳು ಕೆಲಸ ಮಾಡುತ್ತವೆ. ಸಂಸ್ಥೆಯ ಸದಸ್ಯರು ಇದರ ಪ್ರಯೋಜನ ಪಡೆಯುತ್ತಾರೆ ಮತ್ತು ಪ್ರಗತಿಗಾಗಿ ಸಂಪನ್ಮೂಲಗಳನ್ನು ಒಟ್ಟುಗೂಡಿಸಲು ಸಹಕಾರದಿಂದ ಕೆಲಸ ಮಾಡುತ್ತಾರೆ.
ಇಂತಹ ಸಹಕಾರಿ ಸಂಘವನ್ನು
ಕರ್ನಾಟಕದ ಗದಗ ಜಿಲ್ಲೆ ಯ ಕಣಗಿನಹಾಳ ಎಂಬ ಪುಟ್ಟ ಗ್ರಾಮದಲ್ಲಿ ಸನ್ 1905 ರಲ್ಲಿ ಏಷ್ಯಾ ಖಂಡದಲ್ಲೇ ಪ್ರಪ್ರಥಮ ಸಹಕಾರಿ ಸಂಘ ಸ್ಥಾಪನೆ ಮಾಡಿದ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲರ ಕಾರ್ಯದಿಂದ ರಾಜ್ಯ ಮತ್ತು ರಾಷ್ಟ್ರದಲ್ಲಿ ಸಹಕಾರಿ ರಂಗ ಉನ್ನತ ಮಟ್ಟದಲ್ಲಿ ಬೆಳೆದು ಸರ್ಕಾರದಿಂದಾಗದ ಕಾರ್ಯ ಸಹಕಾರದಿಂದ ಸಾಧ್ಯ ಎಂದು ತೊರಿಸಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷ. ವಿ.ಸಿ.ಸಂಗೊಳ್ಳಿ ಮಾತನಾಡಿ, ಸಹಕಾರಿ ಸಂಘಗಳ ಏಳಿಗೆಯಲ್ಲಿ ನಿರ್ದೇಶಕರ ಮತ್ತು ಸದಸ್ಯರ ಸಹಕಾರದಿಂದ ಪ್ರಗತಿಯತ್ತ ಸಾಗುತ್ತವೆ ಸಂಘಗಳ ಮುನ್ನೆಡೆಗೆ ಎಲ್ಲರೂ ಶ್ರಮಿಸೋಣ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮನೋಜ ಹುದ್ದಾರ, ನಿರ್ದೇಶಕರಾದ ಡಿ.ವಾಯ್.ಗರಗದ, ಚಂದ್ರಶೇಖರ ವನ್ನುರ, ಎಸ್.ಬಿ.ಲದ್ದಿಗಟ್ಟಿ, ಬಿ.ಆರ್.ಹರಿದಾಸ, ಆರ್.ಕೆ ಪತ್ತಾರ, ಬಿ.ವಾಯ್.ಸಿದ್ದನಗೌಡರ, ಐ.ಬಿ.ಸಿದ್ದನ್ನವರ, ಡಿ.ಎಸ್.ದೊಡಮನಿ, ಗೀರಿಶ ಪತ್ತಾರ ಇದ್ದರು.