ಬೆಳಗಾವಿ-೧೨:ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಧೂಪದಾಳ ಎಂಬ ಗ್ರಾಮದ ಕಿರಣ ಲಹು ಶೇವಾಳೆ (40) ಅವರನ್ನು ಚಿಕ್ಕೋಡಿ ವಿಭಾಗಿಯ ಅಧ್ಯಕ್ಷರನ್ನಾಗಿ ಬೆಳಗಾವಿಯ ಛಲವಾದಿ ಮಹಸಭಾ ಜಿಲ್ಲಾ ಅಧ್ಯಕ್ಷರಾದ ದುರ್ಗೇಶ ಗೋವಿಂದ ಮೇತ್ರಿ ಇವರು ನೇಮಕಾತಿ ಮಾಡಿ ಆದೇಶವನ್ನು ಮಾಡಿರುತ್ತಾರೆ.
ಕಿರಣ ಶೇವಾಳೆ ಇವರು ಒಂದು ತಿಂಗಳೊಳಗಾಗಿ ಛಲವಾದಿ ಜನಾಂಗದವರನ್ನು ಸದಸ್ಯರನ್ನಾಗಿ ಮಾಡಬೇಕು ಹಾಗೂ ಚಿಕ್ಕೋಡಿ ವಿಭಾಗಕ್ಕೆ ಸಂಬಂಧಪಟ್ಟ ತಾಲೂಕಗಳಲ್ಲಿ ಸಂಚರಿಸಿ ತಂಡ ರಚಿಸಿ, ಜಿಲ್ಲಾ ಕೇಂದ್ರ ಕಚೇರಿಗೆ ವರದಿ ನೀಡಬೇಕು ಎಂದು ಬೆಳಗಾವಿ ಜಿಲ್ಲೆಯ ಛಲವಾದಿ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ದುರ್ಗೇಶ ಗೋವಿಂದ ಮೇತ್ರಿ ಅವರು ಸೂಚಿಸಿರುತ್ತಾರೆ.