23/12/2024
IMG-20241112-WA0001

ಬೆಳಗಾವಿ-೧೨: ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆಗೈದಿರುವ ಕಂಗ್ರಾಳಿಯ ಬಾಲ ಹನುಮಾನ್ ರೆಸ್ಲಿಂಗ್ ಕೇಂದ್ರದ ಕುಸ್ತಿಪಟುಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಮಂಗಳವಾರ ಬೆಳಗಾವಿಯಲ್ಲಿ ಅಭಿನಂದಿಸಿದರು.

ರಾಷ್ಟ್ರೀಯ ಚಾಂಪಿಯನ್‌ ಷಿಪ್ ನಲ್ಲಿ ಅರ್ಹತೆ ಪಡೆದ ಹಳ್ಯಾಳ ಕಂಠೀರವ ಕೇಸರಿ ಪ್ರಶಸ್ತಿ ವಿಜೇತ ಕಾಮೇಶ್ ಪಾಟೀಲ್ ಅವರನ್ನು ಸಹ ಸಚಿವರು ಅಭಿನಂದಿಸಿ, ಶುಭ ಕೋರಿದರು‌.

ಮೈಸೂರು ದಸರಾದಲ್ಲಿ ಎರಡನೇ ಸ್ಥಾನ ಪ್ರೇಮ್ ಜಾಧವ್ ಹಾಗೂ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿದ ಭಕ್ತಿ ಪಾಟೀಲ್ ಹಾಗೂ ಪ್ರಯಾಗ್ ಪಾಟೀಲ್ ಅವರ ಸಾಧನೆಗೆ ಲಕ್ಷ್ಮೀ ಹೆಬ್ಬಾಳಕರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ‌ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿದ ದ್ರುತ್, ಪ್ರಥಮೇಶ್ ಪಾವಶೆ, ಗೌತಮಿ ಪಾಟೀಲ್, ಶ್ರೀ ಪಾಟೀಲ್ ಅವರುಗಳ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಶುಭ ಹಾರೈಸಿದರು.
ಇವರೆಲ್ಲರೂ ಪ್ರಶಾಂತ್ ಪಾಟೀಲ್ ಹಾಗೂ ಬಾವು ಪಾಟೀಲ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ‌ರಾಷ್ಟ್ರಮಟ್ಟದಲ್ಲಿ ರೆಸ್ಲರ್ ಗಳು ಉತ್ತಮ ಸಾಧನೆ ತೋರಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶುಭಕೋರಿದರು.

error: Content is protected !!