23/12/2024
IMG-20241111-WA0011

ಬೆಳಗಾವಿ-೧೨:ಸೋಮವಾರ ನಡೆದ ಬೆಳಗಾವಿ ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳ್ಳತನ ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು ವಶಪಡಿಸಕೊಂಡು ವಸ್ತುಗಳನ್ನು ಮಾಲಿಕರಿಗೆ ಹಸ್ತಾಂತರಿಸಿದ್ದಾರೆ.

IMG 20241111 WA0009 - IMG 20241111 WA0010 - IMG 20241111 WA0007 -

 

ಒಂದು ವರ್ಷದಲ್ಲಿ ಬೆಳಗಾವಿ ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಚಿನ್ನಾಭರಣ, ಹಣ ಕಳ್ಳತನ, ಬೈಕ್ ಕಳ್ಳತನ, ಮೋಟರ್ ಕಳ್ಳತನ ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು, ಇಂದು ನಗರದ ಡಿಆರ್ ಗ್ರೌಂಡ್ ನಲ್ಲಿ ಮಾಲಿಕರಿಗೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟನ್ ಅವರ ನೆತೃತ್ವದಲ್ಲಿ ಹಸ್ತಾಂತರಿಸಿದರು.

ಒಂದು ವರ್ಷದಲ್ಲಿ ಒಟ್ಟು 33 ರಷ್ಟು ಪ್ರಾಪರ್ಟಿ ರಿಕವರಿ ಮಾಡಲಾಗಿದೆ. ಮುಂದೆಯೂ ಕೂಡಾ ಹೆಚ್ಚು ರಿಕವರಿ ಮಾಡಬೇಕು‌. ಈ ವರ್ಷ ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅನೇಕ ಕಳ್ಳತನಗಳ ಬಗ್ಗೆ ನಮ್ಮ ಕಡೆ ಮಾಹಿತಿ ಇದೆ. ಮುಂದಿನ 15 ದಿನದಲ್ಲಿ 10-15 ಕೇಸ್ ಗಳನ್ನು ರಿಕವರಿ ಮಾಡುತ್ತೇವೆ. ಈ ರಿಕವರಿ ಮಾಡಲು ನಮ್ಮ ಪೊಲೀಸರು ಸಾಕಷ್ಟು ಶ್ರಮಪಟ್ಟಿದ್ದಾರೆ. ಜನರಿಂದ ಕೂಡಾ ಸಹಕಾರ ಸಿಗುತ್ತಿದೆ. ಜನರಲ್ಲಿ ಎನೇ ಮಾಹಿತಿ ಇದ್ದರು ನಮ್ಮ ಕಡೆ ಹಂಚಿಕೊಳ್ಳಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

error: Content is protected !!