ಬೆಳಗಾವಿ-೦೯:ಬೆಳಗಾವಿಯ ಕಾರಂಜಿಮಠದ ಶ್ರೀ ಮ.ನಿ.ಪ್ರ ಗುರುಸಿದ್ಧ ಮಹಾಸ್ವಾಮಿಗಳು ಅವರ ಅಮೃತ ಮಹೋತ್ಸವ ಸಮಾರಂಭವು ೧೧-೧೧-೨೦೨೪ ಸೋಮವಾರ ಮುಂಜಾನೆ ೧೦-೩೦ ಗಂಟೆಗೆ ಡಾ. ಜಿ. ಎಸ್. ಜೀರಗೆ ಸಭಾಭವನ, ಜೆಎನ್‌ಎಂಸಿ, ಬೆಳಗಾವಿಯಲ್ಲಿ ಜರುಗಲಿದೆ. ದಿವ್ಯ ಸಾನ್ನಿಧ್ಯ ಪೂಜ್ಯಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ, ಪೂಜ್ಯಶ್ರೀ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಜಗದ್ಗುರು ದುರದುಂಡೀಶ್ವರಮಠ, ನಿಡಸೋಸಿ ಇವರು ವಹಿಸಲಿದ್ದಾರೆ.
ಸಾನಿಧ್ಯವನ್ನು ಮ.ನಿ.ಪ್ರ. ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಮುರುಘಾಮಠ, ಧಾರವಾಡ, ಸಮ್ಮುಖವನ್ನು ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ನಾಗನೂರು ರುದ್ರಾಕ್ಷಿಮಠ, ಬೆಳಗಾವಿ, ಪೂಜ್ಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಗುರುಶಾಂತೇಶ್ವರ ಹಿರೇಮಠ, ಹುಕ್ಕೇರಿ-ಬೆಳಗಾವಿ ಪೂಜ್ಯ ಶಿವಾನಂದ ಗುರೂಜಿ, ಅಲೌಕಿಕ ಧ್ಯಾನ ಮಂದಿರ, ನಿಲಜಿ ಹಾಗೂ ಪೂಜ್ಯ ಶ್ರೀ ಡಾ. ಶಿವಯೋಗಿ ದೇವರು. ಉತ್ತರಾಧಿಕಾರಿಗಳು, ಕಾರಂಜಿಮಠ, ಬೆಳಗಾವಿ, ಪೂಜ್ಯ ಶ್ರೀ ಗಂಗಾಮಾತಾಜಿ, ರೇಣುಕಾಶ್ರಮ, ಬೆಳಗಾವಿ ಇವರು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ಪ್ರಭಾಕರ ಕೋರೆ ಕಾರ್ಯಾಧ್ಯಕ್ಷರು. ಕೆ.ಎಲ್.ಇ. ಸಂಸ್ಥೆ, ಬೆಳಗಾವಿ ಇವರು ವಹಿಸಲಿದ್ದಾರೆ.
‘ಅನುಭಾವ ಕಾರಂಜಿ’ ಅಭಿನಂದನ ಸಂಪುಟ ಲೋಕಾರ್ಪಣೆಯನ್ನು ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು, ಬೆಂಗಳೂರು ಇವರು ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಜಗದೀಶ ಶೆಟ್ಟರ ಮಾಜಿ ಮುಖ್ಯಮಂತ್ರಿಗಳು, ಸಂಸದರು ಬೆಳಗಾವಿ, ಶ್ರೀ ಅಭಯ ಪಾಟೀಲ, ಶಾಸಕರುಬೆಳಗಾವಿ ದಕ್ಷಿಣ. ಅತಿಥಿಗಳಾಗಿ ಶ್ರೀ ಫಿರೋಜ ಶೇಠ ಮಾಜಿ ಶಾಸಕರು ಬೆಳಗಾವಿ, ಶ್ರೀ ಮಹಾಂತೇಶ ಕವಟಗಿಮಠ, ಕಾರ್ಯದರ್ಶಿಗಳು, ಅಮೃತ ಮಹೋತ್ಸವ ಅಭಿನಂದನ ಸಂಪುಟ ಸಂಪಾದಕರಾದ ಡಾ ಬಸವರಾಜ ಜಗಜಂಪಿ, ಪ್ರಕಾಶ ಗಿರಿಮಲ್ಲನವರ; ವಿಶೇಷ ಆಹ್ವಾನಿತರಾಗಿ ಶ್ರೀಮತಿ ಮಂಗಲಾ ಸುರೇಶ ಅಂಗಡಿ, ಶ್ರೀ ರಮೇಶ ಕುಡಚಿ, ಸಂಜಯ ಪಾಟೀಲ, ಅನಿಲ ಬೆನಕೆ, ಶಂಕರಗೌಡ ಪಾಟೀಲ, ಶ್ರೀಕಾಂತ ಕದಂ, ರಾಘವೇಂದ್ರ ಕಾಗವಾಡ, ಚಂದ್ರಶೇಖರ ಸಿದ್ದರಾಮಪ್ಪ ಬೆಂಬಳಗಿ, ಪಂಚಾಕ್ಷರಿ ಚೊಣ್ಣದ, ಡಾ. ರವಿ ಪಾಟೀಲ, ಶಿವನಗೌಡ ಪಾಟೀಲ, ಎಂ. ಬಿ. ಝಿರಲಿ, ಪ್ರಕಾಶ ಬಾಳೇಕುಂದ್ರಿ, ಬಾಳಣ್ಣ ಕಗ್ಗಣಗಿ, ಗಿರೀಶ, ಕತ್ತಿಶೆಟ್ಟಿ, ಶ್ರೀಮತಿ ರತ್ನಪ್ರಭಾ ಬೆಲ್ಲದ, ಶ್ರೀಮತಿ ಸರಳಾ ಹೆರೇಕರ್ ಉಪಸ್ಥಿತರಿರುವರು ಎಂದು ಪೂಜ್ಯರ ಅಮೃತ ಮಹೋತ್ಸವ ಸ್ವಾಗತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.