ಬೆಳಗಾವಿ-೦೯:ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ಯರಡಾಲ, ನೇಗಿನಹಾಳ, ಕುರಗುಂದ, ಹೊಳಿಹೊಸೂರ, ಮತ್ತು ಇನ್ನು ಕೆಲ ಗ್ರಾಮಗಳಲ್ಲಿ ಪಾನ ಶಾಪ ಅಂಗಡಿಕಾರರು ಮತ್ತು ಹೊಟೇಲಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ. ಹಾಗೂ ಇಸ್ಟಿಟ್. ಮಟ್ಕಾ ಇನ್ನಿತರ ಚಟುವಟಿಕೆಗಳಿಂದ ಹೆಚ್ಚಾಗಿ ಮರ್ಡರ ಸಾವು ನೋವು ಸಂಬವಿಸುತ್ತಿವೆ ಹಾಗಾಗಿ ತಮ್ಮ ಲಾಭಕ್ಕಾಗಿ ಬಾರಗಳಿಂದ ಅನಧಿಕೃತವಾಗಿ ಪಾನ ಶಾಪ ಅಂಗಡಿಕಾರರು ಮತ್ತು ಹೊಟೇಲಗಳಲ್ಲಿ ಸಾರಾಯಿ ತಂದು ಮಾರಾಟ ಮಾಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗ್ರಾಮದ ಯುವಕರು ಈ ರೀತಿಯಾದ ದುಶ್ಚಟಕ್ಕೆ ಬಿದ್ದು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಅಂತಹ ಅಂಗಡಿ ಮುಗ್ಗಟ್ಟುಗಳ ಮೇಲೆ ದಾಳಿ ನಡೆಸಿ, ಎಫ್.ಆಯ್.ಆರ್ .ದಾಖಲಿಸಿ ಜೈಲಿಗೆ ಕಳುಹಿಸುವ ಕೆಲಸ ತಾವು ತಮ್ಮ ಪೋಲಿಸ್ ಅಧಿಕಾರಿಗಳಿಂದ ಈ ಕೂಡಲೇ ಮಾಡಬೇಕೆಂದು ಯುವ ಕರ್ನಾಟಕ ಭೀಮ ಸೇನೆ ಯುವಶಕ್ತಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ, ಶ್ರೀಯುತ ಪ್ರವೀಣ್ ಆರ್ ಮಾದರ್ ಮಾನ್ಯ ಸಿ.ಪಿ. ಆಯ್ ಸಾಹೆಬರಿಗೆ ಮನವಿ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಕರ್ನಾಟಕ ಭೀಮ್ ಸೇನೆ ಯುವ ಶಕ್ತಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ, ಮಲಪ್ಪ ಅಕ್ಕಮಡಿ, ಬೆಳಗಾವಿ ಜಿಲ್ಲಾ ಅಧ್ಯಕ್ಷ ಉದಯ ಬಸೋಜಿ, ಬೈಲಹೊಂಗಲ ತಾಲೂಕು ಅಧ್ಯಕ್ಷರಾದ, ಗಂಗಾಧರ ಮಾದರ, ಸದಾನಂದ ಆರ್.ಕೆಸರಗೋಪ್ಪ ಹಾಗೂ ಅನೇಕ ಈ ಸಂದರ್ಭದಲ್ಲಿ ಮುಖಂಡರು ಹಾಜರಿದ್ದರು.