23/12/2024
IMG-20241109-WA0028

ಬೈಲಹೊಂಗಲ-೦೯: ಯುವಸಮುದಾಯ ದುಶ್ಚಟಕ್ಕೆ ಬಲಿಯಾಗದೆ ದೈಹಿಕ ಸಾಮರ್ಥ್ಯಕ್ಕೆ ಒಲವು ಕೊಡುವ ಉದ್ದೇಶದಿಂದ ಗ್ರಾಮದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರ ಅನುದಾನದಲ್ಲಿ ಸೈನಿಕ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದು ಗಣೇಶ ಪಿಕೆಪಿಎಸ್ ಅಧ್ಯಕ್ಷ ಗುರುಪಾದ ಕಳ್ಳಿ ಹೇಳಿದರು.

ಸಮೀಪದ ಹೊಸೂರ ಗ್ರಾಮದಲ್ಲಿ ರಾಜ್ಯಸಭಾ ಸದಸ್ಯರ ಅನುದಾನದಲ್ಲಿ ಮಾಜಿ ಸೈನಿಕರ ಸಂಘದ ಕಾರ್ಯಲಯ ನಿರ್ಮಾಣಕ್ಕಾಗಿ ಸೈನಿಕ ಭವನದ ಭೂಮಿ ಪೂಜಾ ನೆರವೆರಿಸಿ ಮಾತನಾಡಿ, ಇಂದಿನ ಯುವ ಸಮುದಾಯ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೊಗಿ ದುಶ್ಚಟಕ್ಕೆ ಬಲಿಯಾಗಿ ತಮ್ಮ ಪ್ರಾಣಗಳಿಗೆ ಕುತ್ತು ತಗೆದುಕೊಳ್ಳುತಿದ್ದಾರೆ. ವಾಹನ ಅಪಘಾತದಲ್ಲಿ 35 ವರ್ಷದೊಳಗಿನ ಯುವಕರ ಸಾವಿನ ಸಂಖ್ಯೆ ಪ್ರತಿಶತ 85ರಷ್ಟಿದೆ. ಕುಡಿತ, ಗಾಂಜಾ, ಗುಡ್ಕಾ ಮಟ್ಕಾ, ಜುಜೂ, ಬೆಟ್ಟಿಂಗ್ ದಂತಹ ಚಟಗಳು ಮನೆ ಮಾಡುತ್ತಿವೆ. ಇಂತವುಗಳಿಂದ ಯುವಕರನ್ನು ರಕ್ಷಿಸುವ ಕಾರ್ಯ ನಾಗರಿಕ‌ ಸಮಾಜದಲ್ಲಿರುವ ಪ್ರಜ್ಞಾವಂತರ ಕರ್ತವ್ಯವಾಗಿದೆ.
ಈ ಉದ್ದೇಶದಿಂದ ಮಾಜಿ ಸೈನಿಕರಿಗೆ ಸೈನಿಕ ಭವನ ನಿರ್ಮಿಸಿ ಗ್ರಾಮದ ಯುವಕರಿಗೆ ದೈಹಿಕ ಸಾಮರ್ಥದ ಕಸರತ್ತುಗಳನ್ನು ಕಲಿಸಲು ಅನಕೂಲಕರವಾಗುವಂತೆ ಗ್ರಾಮದ ಹೊರ ವಲಯದಲ್ಲಿ ಸೈನಿಕ ಭವನ ನಿರ್ಮಿಸಲಾಗುತ್ತಿದೆ. ಸೈನಿಕರ ಶಿಸ್ತು ಸಂಯಮ, ದೈಹಿಕ ದೃಡತೆ ಹಾಗೂ ಸಮಯಪಾಲನೆಯನ್ನು ಯುವಕರಲ್ಲಿ ಅಳವಡಿಕೊಳ್ಳಲು ಅನುಮಾಡಿಕೊಡಲಾಗಿದೆ ಎಂದು ಹೇಳಿದರು.
ಮಾಜಿ ಎಪಿಎಂಸಿ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ, ಮಾಜಿ ತಾಪಂ‌ ಸದಸ್ಯ ಜಗದೀಶ ಬೂದಿಹಾಳ,
ಗ್ರಾಪಂ ಅಧ್ಯಕ್ಷೆ ಶ್ರೀದೇವಿ ತಳವಾರ, ಮಾಜಿ ಸೈನಿಕರಾದ ಮಲ್ಲಿಕಾರ್ಜುನ ಇಂಗಳಗಿ, ಈಶ್ವರ ಹುಡೇದ, ಮಹೇಶ ಬೋಳೆತ್ತಿನ,ಶಿವಾನಂದ ಶಿಂತ್ರಿ, ಸೋಮನಿಂಗ ಸೋಮನಟ್ಟಿ, ಮಲ್ಲಿಕಾರ್ಜುನ ಹಪ್ಪಳ್ಳಿ, ಮಡಿವಾಳಪ್ಪ ಬಾಗೇವಡಿ, ಫಕೀರಪ್ಪ ಕುರಿ, ಮಡಿವಾಳಪ್ಪ ಚಳಕೊಪ್ಪ, ಸೋಮು ವಣ್ಣೂರ,
ಶಿವಾಜಿ ಪಾಟೀಲ, ಬಸಪ್ಪ ಹುಂಡೆಕಾರ, ಈರಣ್ಣ ಬೆಂಡಿಗೇರಿ, ಸುರೇಶ ರೊಟ್ಟಿ, ಗ್ರಾಪಂ‌ ಸದಸ್ಯರಾದ ಈರಣ್ಣ ಸಂಪಗಾಂವ, ಮಲ್ಲಿಕಾರ್ಜುನ ಕರಡಿಗುದ್ದಿ, ಬಸವರಾಜ ಬಾಳೆಕುಂದರಗಿ, ಮುನೀರ ಶೇಖ, ಮುಶೆಪ್ಪ ಜಡಿ, ಸಂಜು ಪಾಟೀಲ, ಮಡಿವಾಳಪ್ಪ ಕಮತಗಿ, ಮಲ್ಲವ್ವ ಬಾರಿಗಿಡದ, ದೀಪಾ ಪಾಟೀಲ, ಗೌಡಪ್ಪ ಹೊಸಮನಿ, ಸಾಗರ ವಣ್ಣೂರ, ಮೊಹನ ವಕ್ಕುಂದ ಉಪಸ್ಥಿತಿರಿದ್ದರು.

error: Content is protected !!