ಬೆಳಗಾವಿ-೦೯: ವಕ್ಫ್ ಮಂಡಳಿ ರಾಜ್ಯದ ಬಡ ರೈತರ ಮಠ ಮಂದಿರ ಮತ್ತು ಸಾರ್ವಜನಿಕ ಆಸ್ತಿಗಳನ್ನು ಕಬಳಿಸುತ್ತಿರುವುದು ಖಂಡನೀಯವಾಗಿದೆ. ಅದು ಅಲ್ಲದೆ ಈ ಕುಕೃತ್ಯಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿರುವುದು ಸೋಜಿಗದ ಸಂಗತಿ. ಆದ್ದರಿಂದ ಸರ್ಕಾರ ಮತ್ತು ವಕ್ಫ್ ಮಂಡಳಿ ವಿರುದ್ಧ ಜನಜಾಗೃತಿ ಸಭೆಯನ್ನು ಬೆಳಗಾವಿ ನಗರದಲ್ಲಿ ನವೆಂಬರ್ 12ರಂದು ಆಯೋಜಿಸಲಾಗಿದೆ ಎಂದು ನಾಗರಿಕ ಹಿತರಕ್ಷಣಾ ಸಮಿತಿಯ ಸಂಯೋಜಕ ಡಾ. ಬಸವರಾಜ ಭಾಗೋಜಿ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ವಿಜಯಪುರ, ಕಲ್ಬುರ್ಗಿ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಕೃಷಿ, ಮಠ, ಮಂದಿರ ಮತ್ತು ಸಾರ್ವಜನಿಕ ಆಸ್ತಿಗಳ ಉತಾರಾದಲ್ಲಿ ವಕ್ಫ್ ಹೆಸರು ಸೇರ್ಪಡೆಗೊಂಡಿದೆ. ಅನೇಕ ತಲೆಮಾರುಗಳಿಂದ ವಾಸಿಸಿದ ಮನೆ ಮತ್ತು ಬಿತ್ತನೆ ಮಾಡುವ ಕೃಷಿ ಭೂಮಿ ಉತಾರದಲ್ಲಿ ವಕ್ಫ್ ಹೆಸರು ಬಂದಿರುವುದು ಸರ್ಕಾರದ ತುಷ್ಟಿಕರಣ ನೀತಿಗೆ ಸಾಕ್ಷಿಯಾಗಿದೆ. ಅದ್ದರಿಂದ ಬೆಳಗಾವಿ ನಗರದಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂಬರುವ ಮಂಗಳವಾರ ನವೆಂಬರ್ 12ರಂದು ಸಂಜೆ 6 ಘಂಟೆಗೆ ನಗರದ ಧರ್ಮವೀರ ಸಂಭಾಜಿ ಉದ್ಯಾನದಲ್ಲಿ ಬೃಹತ್ ಜನಜಾಗೃತಿ ಸಭೆ ಏರ್ಪಡಿಸಲಾಗಿದೆ. ಆ ಸಭೆಯಲ್ಲಿ ಕನೇರಿಮಠದ ಪರಮ ಪೂಜ್ಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ನಾಗರಿಕ ಹಿತರಕ್ಷಣಾ ಸಮಿತಿಯ ಸದಸ್ಯ ಮತ್ತು ಉದ್ಯಮಿ ರೋಹನ ಜವಳಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಹಳೆ ಹುಬ್ಬಳ್ಳಿ ಠಾಣೆಯ ದಾಳಿ ಪ್ರಕರಣವನ್ನು ಹಿಂಪಡೆಯುತ್ತಿರುವುದು ಸೂಕ್ತವಲ್ಲ. ಪ್ರಕರಣ ಹಿಂಪಡೆಯುವ ದರಿಂದ ಪೊಲೀಸರ್ ಸ್ಥೆöÊರ್ಯ ಕುಸಿಯುತ್ತದೆ.
ಆದ್ದರಿಂದ ರಾಜ್ಯ ಸರ್ಕಾರ ಪ್ರಕರಣ ಹಿಂಪಡೆಯಬಾರದು. ರಾಜ್ಯದಲ್ಲಿ ಯುವತಿಯರ ಕಗ್ಗೊಲೆ, ಲವ್ ಜಿಹಾದ ಪ್ರಕರಣ, ಹಿಂದು ಅಮಾಯಕ ಯುವಕರ ಮೇಲೆ ಪ್ರಕರಣ ದಾಖಲು, ಗಣೇಶ ಮೂರ್ತಿಯನ್ನು ಬಂಧಿಸಿರುವುದು ಹೀಗೆ ಅನೇಕ ಘಟನೆಗಳಲ್ಲಿ ಸರ್ಕಾರದ ನೀತಿಗಳು ದ್ವಂದವಾಗಿದ್ದಾವೆ. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಬಲಪಡಿಸಲು ಮತ್ತು ನಿಸ್ಪಕ್ಷಪಾತವಾಗಿ ಆಡಳಿತ ನಡೆಸುವಂತೆ ತಿಳಿಸಲು ಈ ಜನಜಾಗೃತಿ ಸಭೆ ಏರ್ಪಡಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಅನೇಕ ಸ್ವಾಮೀಜಿಗಳೂ, ಗಣ್ಯರು, ಸಮಾಜದ ವಿವಿಧ ವೃತ್ತಿ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದಾರೆ. ದೀಪಾವಳಿ ಹಬ್ಬದ ಮುನ್ನ ಹಳೆ ಹುಬ್ಬಳ್ಳಿ ಪ್ರಕರಣ ಹಿಂಪಡೆಯುವ ನೀತಿ ಖಂಡಿಸಿ ಬೆಳಗಾವಿಯ 30 ಹೆಚ್ಚು ಸಮಾಜ, ವಿವಿಧ ಗಣೇಶೋತ್ಸವ ಮಂಡಳಿ, ದೇವಸ್ಥಾನಗಳ ಕಮೀಟಿ ಸದಸ್ಯರು ಹಾಗೂ ಮಹಿಳಾ ಮಂಡಳಿ ಸದ್ಯಸರು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಮುಂಬರುವ ದಿನಗಳಲ್ಲಿ ಸಮಾಜದಲ್ಲಿ ಎದುರಾಗುವ ವಿವಿಧ ಸಮಸ್ಯೆಗಳಿಗೆ ಸಮಾಜವೇ ಸ್ವಪ್ರೇರಣೆಯಿಂದ ಪರಿಹಾರ ಕಂಡುಕೊಳ್ಳುವ ಉದ್ದೇಶದ ಅಡಿಯಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ಕಾರ್ಯನಿರ್ವಹಿಸಲಿದೆ ಎಂದರು.
ನಾಗರಿಕ ಹಿತರಕ್ಷಣಾ ಸಮಿತಿಯ ಸಹ ಸಂಯೋಜಕರಾದ ವಿಜಯ ಜಾಧವ, ಶಿವಾಜಿ ಶಹಾಪುರಕರ ಮತ್ತು ರೋಹಿತ ಉಮನಾದಿಮಠ, ರೂಪೇಶ ಗುಂಡಕಲ್ ಉಪಸ್ಥಿತಿರಿದ್ದರು.