ಬೆಳಗಾವಿ-೦೮:* ಬಹುಗ್ರಾಮ ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಈ ಮೊದಲಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಿಳಿಸಿದಂತೆ, ಬಹುಗ್ರಾಮ ಕುಡಿಯುವ ನೀರು ಸರಬರಾಜು ಕಾಮಗಾರಿಗಳ ಪ್ರಗತಿ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಬೆಳಗಾವಿ ವಿಭಾಗದಲ್ಲಿ 4 ಕಾಮಗಾರಿಗಳು ಹಾಗೂ ಚಿಕ್ಕೋಡಿ ವಿಭಾಗಗಳಲ್ಲಿ 8 ಕಾಮಗಾರಿಗಳಿದ್ದು, ಈ ಕಾಮಗಾರಿಯ ಪ್ರಕ್ರಿಯೆಗಗಳಲ್ಲಿ ಏನಾದರು ಸಮಸ್ಯೆ ಬಂದಲ್ಲಿ, ಅವುಗಳನ್ನು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಬಗೆಹರಿಸಿಕೊಂಡು ಗ್ರಾಮಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಪಂ ಸಿಇಒ ರಾಹುಲ್ ಶಿಂಧೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಬೆಳಗಾವಿ ಹಾಗೂ ಚಿಕ್ಕೋಡಿ ವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಪಂ ಸಿಇಒ ರಾಹುಲ್ ಶಿಂಧೆ ಇವರು ಬೆಳಗಾವಿ ವಿಭಾಗದಲ್ಲಿ ಅವರಾದಿ, ದೇಗಾಂವ, ಯರಝರ್ವಿ ಮತ್ತು ಹಾಲಬಾಂವಿ ಹಾಗೂ ಚಿಕ್ಕೋಡಿ ವಿಭಾಗದಲ್ಲಿ ಸತ್ತಿ, ಕೆಂಪಟ್ಟಿ, ಬಿರನಾಳ, ಮೆಳವಂಕಿ, ಅಪ್ಪಾಚಿವಾಡಿ, ದಡ್ಡಿ, ಪಾಚ್ಚಾಪೂರ ಮತ್ತು ಚಿಕ್ಕೂಡ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಿ, ಇನ್ನೂ ಹೆಚ್ಚಿನ ಆರ್ಥಿಕ ಮತ್ತು ಭೌತಿಕವಾಗಿ ಪ್ರಗತಿ ಸಾಧಿಸಲು ಕಾರ್ಯಪಾಲಕ ಅಭಿಯಂತರರು ಬೆಳಗಾವಿ/ಚಿಕ್ಕೋಡಿ ವಿಭಾಗದವರಿಗೆ ನಿರ್ದೇಶನ ನೀಡಿದರು. ಸದರಿ ಕಾಮಗಾರಿಗಳಲ್ಲಿ ಇತರೆ ಇಲಾಖೆಗಳ (ಅರಣ್ಯ, ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ, ನೀರಾವರಿ) ಅನುಮೋದನೆಗಳ ಕುರಿತು ಚರ್ಚಿಸಿ ಸಭೆಯಿಂದಲೇ ಸಂಬಂದಪಟ್ಟ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ತ್ವರಿತವಾಗಿ ಅನುಮೋದನೆ ನೀಡುವಂತೆ ಕೋರಿದರು.
ಚಿಕ್ಕೋಡಿ ವಿಭಾಗದ ಅಪ್ಪಾಚಿವಾಡಿ, ಕೆಂಪಟ್ಟಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ವಿನ್ಯಾಸ ಅನುಮೋದನೆ ತೆಗೆದುಕೊಂಡು ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸದೆ ಇದ್ದ ಸಂದರ್ಭದಲ್ಲಿ ಅಂತಹ ಟೆಂಡರ ಗಳನ್ನು ರಿಸ್ಕ್ & ಕಾಸ್ಟ್ ಆಧಾರದ ಮೇಲೆ ರದ್ದುಗೊಳಿಸಲಾಗುವುದೆಂದು ಗುತ್ತಿಗೆದಾರರಿಗೆ ಮಾನ್ಯರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನ್ನವರ ಜಿಪಂ ಬೆಳಗಾವಿ, ಕಾರ್ಯಪಾಲಕ ಅಭಿಯಂತರರು ಶಶಿಕಾಂತ ನಾಯಕ ಬೆಳಗಾವಿ ವಿಭಾಗ, ಕಾರ್ಯಪಾಲಕ ಅಭಿಯಂತರರು ಪಾಂಡುರಂಗ ರಾವ್ ಚಿಕ್ಕೋಡಿ ವಿಭಾಗ, ಕಾರ್ಯಪಾಕ ಅಭಿಯಂತರರು ಎಸ್.ಬಿ.ಕೋಳಿ(ಪಂಚಾಯತರಾಜ್) ಬೆಳಗಾವಿ ವಿಭಾಗ, ಕಾರ್ಯಪಾಲಕ ಅಭಿಯಂತರರು ಪ್ರವೀಣ ಮಠಪತಿ (ಪಂಚಾಯತರಾಜ್) ಚಿಕ್ಕೋಡಿ ವಿಭಾಗ, ಕಾರ್ಯಪಾಲಕ ಅಭಿಯಂತರರು ಹೆಸ್ಕಾಂ, ಕಾರ್ಯಪಾಲಕ ಅಭಿಯಂತರರು ಕೆ.ಆರ್.ಡಿ.ಸಿ.ಎಲ್, ಕಾರ್ಯಪಾಲಕ ಅಭಿಯಂತರರು ಪಿ.ಎಮ್.ಜಿ.ಎಸ್.ವಾಯ್, ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳು ಪ್ರಾದೇಶಿಕ ವಿಭಾಗ ಬೆಳಗಾವಿ/ಗೋಕಾಕ, ಕಾರ್ಯಪಾಲಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಬೆಳಗಾವಿ/ಚಿಕ್ಕೋಡಿ, ಸಹಾಯಕಅಭಿಯಂತರರು ಬೆಳಗಾವಿ ವಿಭಾಗ, ನೈರುತ್ಯ ರೈಲು ವಲಯ ಬೆಳಗಾವಿ,ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರು ಬೆಳಗಾವಿ/ಚಿಕ್ಕೋಡಿ ಹಾಗೂ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಗಳ ಗುತ್ತಿಗೆದಾರರು, ವಿನ್ಯಾಸ ಸಮಾಲೋಚಕರು ಹಾಗೂ ಪಿ.ಎಮ್.ಸಿ ಯವರು ಹಾಜರಿದ್ದರು.