23/12/2024
IMG-20241007-WA0010

ಬೆಳಗಾವಿ-೦೭: ನಾಡದೇವಿ ಭುವನೇಶ್ವರಿ”ಯ ಭಾವ ಚಿತ್ರವನ್ನು ಎಲ್ಲಾ ಸರಕಾರಿ ಕಚೇರಿಯಲ್ಲಿ ಅವವಡಿಸಬೇಕು ಸೇರಿದಂತೆ ನಾನಾ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸರ್ವೋದಯ ಸ್ವಯಂ ಸೇವಾ ಸಂಘದ ವತಿಂದ ಸೋಮವಾರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ನಗರದಲ್ಲಿ ಚನ್ನಮ್ಮ ವೃತ್ತ ದಿಂದ ಜಿಲ್ಲಾಧಿಕಾರಿ ಮೂಲಕ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ವಿಧಾನಸೌಧದಲ್ಲಿ “ನಾಡದೇವಿ ಭುವನೇಶ್ವರಿ”ಯ ಭಾವ ಚಿತ್ರವನ್ನು ಅನಾವರಣ ಮಾಡವುದರ ಜೊತೆಗೆ ನಾಡದೇವಿ ಭುವನೇಶ್ವರಿ ಕರ್ನಾಟಕ ಮಾತೆ” ಎಂಬ ಘೋಷವಾಕ್ಯವನ್ನು ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿದರು.

ಬೆಳಗಾವಿ ಸುವರ್ಣಸೌಧದ ಮುಂದೆ “ನಾಡದೇವಿ ಭುವನೇಶ್ವರಿ ಪ್ರತಿಮೆ” ಸ್ಥಾಪಿಸುವಂತೆ ಮನವಿ ಅರ್ಪಿಸಲಾಗಿತ್ತು ನಮ್ಮ ಮನವಿಗೆ ಸ್ಪಂದಿಸಿ ತಾವು ಬೆಂಗಳೂರು ವಿಧಾನಸೌಧದ ಮುಂದೆ ನಾಡದೇವಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸುತ್ತಿರುವದು ನಮಗೆ ಹೆಮ್ಮೆಯ ವಿಷಯವಾಗಿದೆ.

ಈ ವರ್ಷ ತಾವು “ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ” ಎಂಬ ಘೋಷವಾಕ್ಯ ವನ್ನು ನಾಡಿನಾದ್ಯಂತವ ಅನುಷ್ಠಾನ ತಂದಿದ್ದಕ್ಕೆ ನಾಡಿನ ಸಮಸ್ತ ಜನತೆಯ ಹೇಮ್ಮೆಪಡುವಂತ ವಿಷಯವಾಗಿದೆ .

ಕನ್ನಡಪರ ಹೋರಾಟಗಾರ ಅಧ್ಯಕ್ಷರ, ಶ್ರೀನಿವಾಸ ಯ. ತಾಳೂಕರ, ಮಲ್ಲಪ್ಪ ಸೊಂಟಕ್ಕಿ, ಪ್ರಕಾಶ ಶಿರೋಳಕರ, ಹನಮಂತ ಬುಚಡಿ, ಆನಂದ ಲೋಕರಿ, ಉದಯ ವಾಗುಕರ, ಗುರುರಾಜ ಕಳ್ಳಮನಿ, ರವಿ ಕೋಕಟನೂರ ಇತರರು ಹಾಜರಿದ್ದರು.

error: Content is protected !!