23/12/2024
IMG-20241006-WA0006

ಬೆಳಗಾವಿ-೦೬:ಲಿಂಗಾಯತ ಸಂಘಟನೆ ಡಾ. ಫ .ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ 06- 10- 2024 ರಂದು ಸಾಮೂಹಿಕ ಪ್ರಾರ್ಥನೆ ,ಶರಣೆ ಡಾ ಸಾವಿತ್ರಿ ಕಮಲಾಪೂರ ಅವರಿಂದ ಉಪನ್ಯಾಸ ಜರುಗಿತು. ಶರಣೆ ಮಹಾದೇವಿ ಅರಳಿ ಅವರು ಪ್ರಾರ್ಥನೆ ನಡೆಸಿಕೊಟ್ಟರು. ಶರಣ ಬಿ.ಪಿ.ಜವಣಿ ,ವಿ ಕೆ ಪಾಟೀಲ್,ಸುನೀಲ ಸಾಣಿಕೊಪ್ಪ , ಬಸವರಾಜ್ ಗುರನಗೌಡ, ಆನಂದ ಕರ್ಕಿ,ಶ೦ಕರ ಗುಡಸ ಶರಣೆ ರುದ್ರಮ್ಮ ಅಕ್ಕಣ್ಣವರ,ಸುವರ್ಣ ಗುಡಸ, ಮಹಾದೇವಿಯ ಅರಳಿ ವಚನಗಳನ್ನು ಹೇಳಿದರು. ಅಧ್ಯಕ್ಷತೆಯನ್ನು ಸಂಗಮೇಶ ಅರಳಿ ವಹಿಸಿದರೆ ಸುರೇಶ ನರಗುಂದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಎಂ ವೈ ಮೆಣಸಿನಕಾಯಿ ಅವರು ಪರಿಚಯಿಸಿದರು.
ಪುಣ್ಯಸ್ತ್ರೀ ಕಾಳವ್ವೆ ಪತಿ ಉರಿಲಿಂಗ ಪೆದ್ದಿ ಅವರು.
ಕಾಳವ್ವೆಯ ಪತಿ ಉರಿಲಿಂಗಪೆದ್ದಿಯವರು ಒಂದು ಸಲ ಉರಿಲಿಂಗದೇವರ ಮನೆಗೇ ಕಣ್ಣು ಹಾಕಿ, ಅಲ್ಲಿ ಗುರು ಉರಿಲಿಂಗ ದೇವರು ಶಿಷ್ಯ ರಿಗೆ ಲಿಂಗ ದೀಕ್ಷೆಯನ್ನು ಕೊಡುವುದನ್ನು ನೋಡಿ ತನ್ನ ಮನಸ್ಸು ಪರಿವರ್ತನೆ ಆಗಿ, ಕಳ್ಳತನ ಮಾಡುವ ಕಾಯಕ ಬಿಟ್ಟು
ಕೊನೆಗೆ, ಗುರುಗಳಿಂದ ಲಿಂಗದೀಕ್ಷೆ ಪಡೆಯಲು ಕಾಡಿ ಬೇಡಿ ಕೊನೆಗೆ ಗುರುಗಳಿಂದಲೇ ದೀಕ್ಷೆ ಪಡೆದು, ಅದೇ ಕೊರಳಿ ಮಠಕ್ಕೆ ಗುರು ಆದದ್ದು ಭಾರತದ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದು ಇಡುವಂತಹ ವಿಷಯ.
ಈ ಉರಿಲಿಂಗ ಪೆದ್ದಿಯವರ ಪತ್ನಿಯಾದ ಕಾಳವ್ವೆಯು ಸಂಸ್ಕೃತ ಪಂಡಿತೆಯೂ ಆಗಿದ್ದಳು .
ಅವರ ಒಂದು ವಚನದಲ್ಲಿ ಜಾತಿ ನಿಂದನೆ ಮಾಡಿದರೆ ಕೋಟಿ ಜನ್ಮದಲ್ಲಿ ಹಂದಿಯಾಗಿ ಜನಿಸುತ್ತಾರೆ ಎಂದು ಉಲ್ಲೇಖವಿದೆ.
ಪುಣ್ಯಸ್ತ್ರೀ ಅಂದರೆ ಗರತಿ, ಸಾಧ್ವಿ,ಪತಿವೃತೆ ಎಂದಾಗುತ್ತದೆ.ಶರಣರಾದವರಲ್ಲಿ ದಾಸೋಹ ಮಾಡಲು ಅಹಂಕಾರ ಇರಬಾರದು. ಅಣ್ಣ ಬಸವಣ್ಣನವರು ಕೊಟ್ಟು ನೋಡುತ್ತಾರೆ ಕಸಿದುಕೊಂಡು ನೋಡುತ್ತಾರೆ. ಪರಮಾತ್ಮ ಬೇರೆ ಎಲ್ಲಿಯೂ ಇಲ್ಲ .ಶುದ್ಧ ಮನವನ್ನು ಹೊಂದಿದ ಪ್ರತಿ ಶರಣರಲ್ಲಿ ಇರುವನು. ಶರಣರು ಅರಿಷಡ್ವರ್ಗ್ ಗಳನ್ನು ಗೆಲ್ಲಬೇಕು ,ನಡೆ ಮತ್ತು ನುಡಿಗಳನ್ನು ವಂದಾಗಿಸಿಕೊಂಡು ಶರಣರು ನುಡಿದಂತೆ ನಡೆದರು . ಶರಣರಾದವರು ಲಿಂಗಧಾರಣೆಯನ್ನು ಮಾಡಿಕೊಂಡಿರಬೇಕು .ಯಾರು ಲಿಂಗವನ್ನು ಕಟ್ಟಿಕೊಳ್ಳುವುದಿಲ್ಲವೋ ,ಅವರು ಇದ್ದೂ ಸತ್ತಂತೆ .ಲಿಂಗ ಎನ್ನುವ ವೈಜ್ಞಾನಿಕ ಕುರುವುವನ್ನು ಬಸವಣ್ಣನವರು ಪರಿಚಯಿಸಿದರು .

ಕಾಳವ್ವೆಯ ವಚನಗಳು ಜಾತಿ ನಿಂದನೆಯನ್ನು ಮಾಡುವರ ಬಗ್ಗೆ ಸಿಟ್ಟು ಮತ್ತು ಆಕ್ರೋಶವನ್ನು ತನ್ನ ವಚನಗಳ ಮೂಲಕ ಹೊರಹಾಕುತ್ತಾಳೆ .
ವ್ರತ ಎನ್ನುವುದು ಸುಪ್ಪಾಣಿಯ ಮುತ್ತು ಇದ್ದಂತೆ ಕಾಳವ್ವೆಯ ವಚನಗಳು .ಸಮಾಜದಲ್ಲಿಯ ನೋವು ಅಪಮಾನದ ಕಿಚ್ಚನ್ನು ತನ್ನ ವಚನಗಳ ಮೂಲಕ ಹೊರಹಾಕುವ ಧ್ವನಿ ಇದೆ .ಅಂಗವನ್ನೇ ಲಿಂಗಮಯವನ್ನಾಗಿ ಮಾಡಿಕೊಂಡು ವ್ರತಾಚರಣೆಯ ಮಹತ್ವತೆಯನ್ನು ಕಾಳವ್ವೆಯ ವಚನಗಳಲ್ಲಿ ನಾವು ಕಾಣಬಹುದು. ಎಂದು ಡಾ ಸಾವಿತ್ರಿ ಕಮಲಾಪೂರ ಅವರು ಹೇಳಿದರು. ಶಂಕರ ಪಡೆನ್ನವರ ದಾಸೋಹ ಸೇವೆ ನೀಡಿದರು. ಶಾಂತಾ ಕುಂಗಿ, ಬಸವರಾಜ ಬಿಜ್ಜರಗಿ ,ಗದಿಗೆಪ್ಪ ತಿಗಡಿ ,ಗಂಗಪ್ಪ ಉನ್ಕಲ್, ಸದಾಶಿವ ದೇವರಮನಿ, ಶಶಿಭೂಷಣ್ ಪಾಟೀಲ, ಬಾಳಗೌಡ ದೊಡ್ಡ ಬಂಗಿ, ವಿರೂಪಾಕ್ಷ ದೊಡ್ಡಮನಿ, ಶಿವಾನಂದ ತಲ್ಲೂರ ,ಶಿವಾನಂದ ನಾಯಕ ಮುಂತಾದ ಶರಣ ಶರಣೆಯರು ಹಾಜರಿದ್ದರು.

error: Content is protected !!