23/12/2024
IMG_20241001_105049

ಬೆಳಗಾವಿ-೦೧: ಸತೀಶ ಜಾರಕಿಹೊಳಿ ಪೌಂಡೇಶನ್‌ ದಿಂದ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸಹಾಯ- ಸಹಕಾರ ಪಡೆದು ರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ  ಹೇಳಿದರು.

ಭಾನುವಾರ ನಡೆದ ಸತೀಶ ಅಣ್ಣಾ ಪ್ಯಾನ್ಸ್‌ ಕ್ಲಬ್‌ ವತಿಯಿಂದ ಆಯೋಜಿಸಿದ್ದ ಸತೀಶ ಜಾರಕಿಹೊಳಿ ಓಪನ್‌ ಚೆಸ್‌ ಟೋರ್ನಾಮೆಂಟ್‌ ಕಾರ್ಯಕ್ರಮದಲ್ಲಿ ಚೆಸ್‌ ವಿಜೇತರಾಗಿ, ಪ್ರಥಮ ಬಹುಮಾನ ಮುಡಿಗೇರಿಸಿಕೊಂಡ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಫುಟ್ಬಾಲ್, ಕಬ್ಬಡ್ಡಿ ಸೇರಿದಂತೆ ದೇಸಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ. ಸಮಾಜಮುಖಿ ಕಾರ್ಯಗಳನ್ನು ಮಾಡುವ ಜನರು ಸಹ ಮಕ್ಕಳಿಗೆ ಪ್ರೋತ್ಸಾಹಿಸಿ ಅವರಲ್ಲಿನ ಪ್ರತಿಭೆ ಬೆಳಕಿಗೆ ತರುವ ಪ್ರಯತ್ನ ಮಾಡಬೇಕು.

ಪೋಷಕರು ತಮ್ಮ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡಿಸಬೇಕು. ಕ್ರೀಡೆ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ. ಹೀಗಾಗಿ ಬಾಲ್ಯದಿಂದಲೇ ಮಕ್ಕಳನ್ನು ಕ್ರೀಡಾಸಕ್ತರನ್ನಾಗಿ ರೂಪಿಸಬೇಕು ಎಂದು ಕಿವಿಮಾತು ಹೇಳಿದರು.

ಬೆಳಗಾವಿಯ ಚೆಸ್‌ ಟೋರ್ನಾಮೆಂಟ್‌ ದಲ್ಲಿ ರಾಷ್ಟೀಯ ಮಟ್ಟದ ಚೆಸ್‌ ಸ್ಪರ್ಧಾಳುಗಳು ಭಾಗವಹಿಸಿರುವುದು ಹೆಮ್ಮೆಯ ಪಡುವ ವಿಷಯ, 400 ವಿದ್ಯಾರ್ಥಿಗಳು ಹೊರರಾಜ್ಯದಿಂದ ಆಗಮಿಸಿರುವುದು ಸತೀವ ಸಂತಸವಾಗಿದೆ. ಇಲ್ಲಿ ಸ್ಪರ್ಧಿಸಿದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಬೇಕು ಅಂದಾಗಲೇ ಸತೀಶ ಜಾರಕಿಹೊಳಿ ಚೆಸ್‌ ಟೋರ್ನಾಮೆಂಟ್‌ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಈಗಾಗಲೇ ಸತೀಶ ಜಾರಕಿಹೊಳಿ ಪೌಂಡೇಶನ್‌ ದಿಂದ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಘಟಪ್ರಭಾದಲ್ಲಿ ಪೊಲೀಸ್‌, ಆರ್ಮಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಅಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಪೊಲೀಸ್‌ ಹುದ್ದೆಗೆ, ಸೇನೆಗೆ ಸೇರ್ಪಡೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಸತೀಶ ಜಾರಕಿಹೊಳಿ ಪೌಂಡೇಶನ್‌ ದಿಂದ ಬೃಹತ್‌ ಚೆಸ್‌ ಚೆಸ್‌ ಟೋರ್ನಾಮೆಂಟ್‌ ಕಾರ್ಯಕ್ರಮ ನಡೆಯಲಿ, ಮುಂದಿನ ವರ್ಷವೂ ವಿದ್ಯಾರ್ಥಿಗಳು ಸ್ಪರ್ಧಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳಬೇಕು ಎಂದು ಪ್ರಶಸ್ತಿ ಪಡೆದ ವೀಜೆತರಿಗೆ ರಾಹುಲ್‌ ಜಾರಕಿಹೊಳಿ ಶುಭಾಶಯಗಳು ಕೋರಿದರು.

ಪ್ರಶಸ್ತಿ ವೀಜೆತರು: ಚೆನ್ನೈ ರಾಜ್ಯದ ಚೆಸ್‌ ಸ್ಪರ್ಧಿ ಹರಿಕೃಷ್ಣಾ ಎ. ಆರ್.‌ ಪ್ರಥಮ ಬಹುಮಾನ 1 ಲಕ್ಷ ರೂ. ನಗದು. ಮುಂಬೈ ರಾಜ್ಯದ ಚೆಸ್‌ ಸ್ಪರ್ಧಿ ಮೊಮಹ್ಮದ ಸೈಕ್‌ ಎರಡನೇಯ ಬಹುಮಾನ 50 ಸಾವಿರ ರೂ., ಗೋವಾದ ರಾಜ್ಯದ ಚೆಸ್‌ ಸ್ಪರ್ಧಿ ವಜ್‌ ಇತನ್‌ ಮೂರನೇಯ ಬಹುಮಾನ 25 ಸಾವಿರ ರೂ. ಪ್ರಶಸ್ತಿಯನ್ನು ಮುಡಿಗೇಡಿಸಿಕೊಂಡರು.

ಚೆಸ್‌ ಸ್ಪರ್ಧೆಯಲ್ಲಿ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಗುಜರಾತ್‌ , ರಾಜಸ್ಥಾನ, ಗೋವಾ ಸ್ಪರ್ಧಾಳುಗಳು ಭಾಗಿವಹಿಸಿ ಪ್ರಶಸ್ತಿ ಸ್ವೀಕರಿಸಿದ ವಿದ್ಯಾರ್ಥಿಗಳು , ಸತೀಶ ಜಾರಕಿಹೊಳಿ ಓಪನ್‌ ಚೆಸ್‌ ಟೋರ್ನಾಮೆಂಟ್‌ ಆಯೋಜಿಸಿದ್ದು, ಬಹಳಷ್ಟು ಸಂತಸವಾಗಿದೆ, ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಬಹಳಷ್ಟು, ಅನೂಕುಲವಾಗಿದೆ ಬಡಮಕ್ಕಳಿಗೆ ಸಹಕಾರ ನೀಡಿದಂತಾಗಿದೆ ಎಂದು ಸತೀಶ ಜಾರಕಿಹೊಳಿ ಪೌಂಡೇಶನ್‌ ಅಭಿನಂದನೆ ಸಲ್ಲಸಿದರು.

ಈ ಸಂದರ್ಭದಲ್ಲಿ ಖ್ಯಾತ ವೈದ್ಯರಾದ ಗೀರೀಶ ಸೋನವಾಲಕರ್‌, ಕೆಪಿಸಿಸಿ ಸದಸ್ಯರಾದ ಮಲಗೌಡ ಪಾಟೀಲ, ಸತೀಶ ಪ್ಯಾನ್ಸ್‌ ಕ್ಲಬ್‌ ಅಧ್ಯಕ್ಷ ಇಮ್ರಾನ್‌ ತಪ್ಪಕೀರ, ದಿಕ್ಷಾ ಪೂಜಾರಿ, ನಿಕಿತಾ ತಾರಡೆ, ಪ್ರಶಾಂತ ಅನ್ವೇಕರ್, ಆಕಾಶ ಮಡಿವಾಳ, ಅಜೇಯ ದಾಮಣೆಕರ್, ಅಕ್ಬರ್ ಸರ್ಡೆಕರ್, ಶಾನವಾಜ್ ಕೀಲ್ಲೇದಾರ್ ಸೇರಿದಂತೆ ಇತರರು ಹಾಜರಿದ್ದರು.

error: Content is protected !!