ಬೈಲಹೊಂಗಲ-೦೧: ರಾಜ್ಯದ ಆಡಳಿತ ಶಕ್ರಿ ಕೇಂದ್ರ ರಾಜ್ಯದ ದೊಡ್ಡ ಜಿಲ್ಲೆ ಮಹಾರಾಷ್ಟ್ರ ಗಡಿ ಹಂಚಿಕೊಂಡ ಕನ್ನಡ ಮರಾಠಿ ಭಾಷಾ ಸಾಮರಸ್ಯದ ಬೆಳಗಾವಿ ಜಿಲ್ಲೆ ಅಖಂಡವಾಗಿರಲಿ ಇಲ್ಲವೆ ಹುಂಡೆಕಾರ ಆಯೊಗದಡಿ
ಜಿಲ್ಲಾ ವಿಭಜನೆಯಾದರೆ ಜಿಲ್ಲೆಯ ಉಪವಿಭಾಗಗಳಾದ ಬೈಲಹೊಂಗಲ ಮತ್ತು ಚಿಕ್ಕೋಡಿ ಜಿಲ್ಲೆಯಾಗಲಿ ಇದನ್ನು ಮೀರಿ ಜಿಲ್ಲೆಯನ್ನ ವಿಭಜನೆ ಮಾಡಿದ ಹಿಂದಿನ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲರೆ ತಮ್ಮ ಆದೇಶ ಹಿಂಪಡೆದಿರುವದನ್ನು ಜಿಲ್ಲಾ ವಿಭಜನೆಗೆ ಕೈ ಹಾಕುವವರು ಮೊದಲು ಅದನ್ನ ಅರಿತುಕೊಳ್ಳಲಿ. ತಪ್ಪುಗಳು ಮತ್ತೆ ಮತ್ತೆ ಮರುಕಳಿಸಿದರೆ ಬೈಲಹೊಂಗಲ ಉಪವಿಭಾಗದ ಜನತೆ ತಕ್ಕ ಉತ್ತರ ಕೊಡಲು ಸಿದ್ದರಿದ್ದಾರೆ. ತಮ್ಮ ರಾಜಕೀಯ ಉದ್ದೇಶಕ್ಕಾಗಿ ಅಸ್ತಿತ್ವಕ್ಕಾಗಿ ಜನರಿಗೆ ತಪ್ಪು ಸಂದೇಶ ನೀಡಿದರೆ ಸಹಿಸಲಾಗುವದಿಲ್ಲ. ಜಿಲ್ಲಾ ವಿಭಜನೆ ಕೈ ಬಿಡಿ. ಇಲ್ಲವೆ 7ತಾಲೂಕಗಳನ್ನೊಳಗೊಂಡ ಬೈಲಹೊಂಗಲ ಉಪ ವಿಭಾಗವವನ್ನು ಮೊದಲು ಜಿಲ್ಲೆಯನ್ನಾಗಿಸಿ ರಾಜಕೀಯ ನಾಯಕರು ವಾಸ್ತವಿಕವಾಗಿ ಮಾತನಾಡಿ ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಅಕ್ರೋಶ ವ್ಯಕ್ತಪಡಿಸಿದ್ದಾರೆ.