23/12/2024
collage_1_0-1727779629232

ʻಸತ್ಯʼ ಧಾರಾವಾಹಿ ಯ ನಟಿ ಗೌತಮಿ ಜಾಧವ್‌ ಮೊದಲ ದಿನವೇ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಮ್ಮ ಬದುಕಿಗೆ ಮಹತ್ವದ ತಿರುವು ಕೊಟ್ಟ ಸತ್ಯ ಸೀರಿಯಲ್ ನಲ್ಲಿ ಬಳಿಸಿದ ವಿಗ್ ಕುರಿತಾದ ವಿಷಯಕ್ಕೆ ಅತ್ತಿದ್ದಾರೆ.

IMG 20241001 WA0000 -

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ಮನೆಯಲ್ಲಿ ಮೊದಲ ದಿನ ರಾತ್ರಿ ಗೌತಮಿ ತಮ್ಮ ವಿಗ್‌ ತೆಗೆದಿದ್ದಾರೆ. ಈ ವೇಳೆ ನಾನು ಜನರಿಗೆ ಈ ರೀತಿ ಕಾಣಲು ಇಷ್ಟ ಪಡುವುದಿಲ್ಲ ಎಂದು ಅಳುತ್ತಿದ್ದಾರೆ.

ನಟಿ ಗೌತಮಿ ಜಾಧವ್‌ ತಮ್ಮ ಕುರಿತ ಆ ನಿಜವನ್ನು ಜನರ ಮುಂದೆ ಬಹಿರಂಗ ಪಡಿಸಲು ಇಷ್ಟವಿರದೇ ಕಣ್ಣೀರು ಹಾಕಿದ್ದಾರೆ. ಅಂದುಕೊಂಡಂತೆ ಗೌತಮಿ ಬಾಯ್‌ಕಟ್‌ ಹೊಂದಿಲ್ಲ. ಇದು ಸತ್ಯ ಸೀರಿಯಲ್‌ಗಾಗಿ ಧರಿಸುತ್ತಿದ್ದ ವಿಗ್‌ ಆಗಿದೆ.

ಬಿಗ್‌ ಬಾಸ್‌ ಮನೆಗೆ ವಿಗ್ ಧರಿಸಿ ಸತ್ಯ ಲುಕ್‌ನಲ್ಲೇ ಎಂಟ್ರಿ ಕೊಟ್ಟಿದ್ದರು. ಆದರೆ ನಟಿ ಗೌತಮಿ ಜಾಧವ್‌ ಸುಂದರವಾದ ಉದ್ದ ದಪ್ಪ ಕೂದಲನ್ನು ಹೊಂದಿದ್ದಾರೆ. ಆದರೆ ಗೌತಮಿ ವಿಗ್ ತಗೆಯುತ್ತಿದ್ದಂತೆ ಮನೆಯಲ್ಲಿದ್ದ ಆಟಗಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಗೌತಮಿ ಈಗ ಮೊದಲ ದಿನದ ರಾತ್ರಿ ಮೇಕಪ್‌ ರಿಮೂವ್‌ ಮಾಡುವ ವೇಳೆ ವಿಗ್‌ ತೆಗೆದಿದ್ದಾರೆ. ಗೌತಮಿಯನ್ನು ಡೇರ್‌ ಡೆವಿಲ್ ಲುಕ್‌ನಲ್ಲೇ ಇಷ್ಟಪಟ್ಟಿದ್ದ ಫ್ಯಾನ್ಸ್‌ ಇದನ್ನು ಕಂಡು ಕೊಂಚ ಬೇಸರಗೊಂಡಿರುತ್ತಾರೆ.

error: Content is protected !!