ಬೆಳಗಾವಿ-೨೯:ಬೆಳಗಾವಿಯ ಪ್ರತಿಷ್ಠಿತ ಅನ್ನಪೂರ್ಣೇಶ್ವರಿ ಹ್ಯೂಮ್ಯಾನಿಟಿ ಫೌಂಡೇಶನ್ ಕಳೆದ ಹಲವಾರು ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡು ಅನ್ನದಾನ, ಶಿಕ್ಷಣ, ಆರೋಗ್ಯ, ಹೀಗೆ ಹತ್ತು ಹಲವಾರು ಸಾರ್ವಜನಿಕ ವಲಯದಲ್ಲಿ ತಮ್ಮ ಫೌಂಡೇಶನ್ ವತಿಯಿಂದ ಸಮಾಜಕ್ಕೆ ಉತ್ತಮ ಸಮಾಜ ರೂಪಿಸುವಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ನಿರ್ಗತಿಕ ಮಹಿಳೆಗೆ ಜೀವನಕ್ಕಾಗಿ ಸ್ಟಾಲ್ ಅನ್ನು ಸ್ಥಾಪಿಸಲು ತಂಡವು ಕೊಡುಗೆ ನೀಡಿದೆ. ಹೀಗೆ ಹತ್ತು ಹಲವಾರು ಸಾಮಾಜಿಕ ಸೇವೆಯನ್ನು ಮಾಡುತ್ತಿರುವ ಪ್ರತಿಷ್ಠಾನವು ಕರ್ನಾಟಕದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಲೆ. ಸಾಹಿತ್ಯ, ವೈದ್ಯಕೀಯ, ಶಿಕ್ಷಣ, ಸಮಾಜ ಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 33 ಸಾಧಕರನ್ನು ಗುರುತಿಸಿ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ವೀರ ರಾಣಿ ಕಿತ್ತೂರ್ ಚೆನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ದಿವ್ಯಸನ್ನಿಧಿ ಶ್ರೀ ನೀಲಕಂಠ ಮಹಾಸ್ವಾಮಿಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಕಾಶ ಹಲಗೇಕರ.ಶ್ರೀಮತಿ ಮಾಧುರಿ ಜಾಧವ ಉಪಸ್ಥಿತಿರಿದ್ದರು.