ಬೆಳಗಾವಿ-೨೨:ಭಾನುವಾರ ನಗರದಲ್ಲಿ ಪ್ರವಾದಿ ಮಹ್ಮದ್ ಪೈಗಂಬರ್ ಜನ್ಮದಿನ ನಿಮಿತ್ಯ ಭಾನುವಾರ ಈದ್ ಮಿಲಾದ್ ಮೆರವಣಿಗೆ ಸಂಭ್ರಮ ದಿಂದ ಹಬ್ಬ ಅತಂತ್ಯ ಭಕ್ತಿ ಭಾವದಿಂದ ಬೆಳಗಾವಿಯಲ್ಲಿ ಆಚರಣೆ ಮಾಡಲಾಯಿತು. ಪುಟ್ಟ.. ಪುಟ್ಟ… ಪುಟಾಣಿಗಳು ಅಪ್ಪಿಕೊಂಡ ಹಬ್ಬದ ಶುಭಾಶಯ ಕೋರಿದರು.
ನಗರದ ದರರ್ಬಾರ್ ಗಲ್ಲಿ, ಪೋರ್ಟ್ ರೋಡ್ , ರಾಣಿ ಚನ್ನಮ್ಮ ವೃತ್ತ ಸೇರಿದಂತೆ ವಿವಿಧ ಕಡೆಯಲ್ಲಿ ಇಸ್ಲಾಂ ಧರ್ಮದ ಧ್ವಜವನ್ನು ಹಾರಿಸಿದ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಇಸ್ಲಾಂ ಸಮುದಾಯದ ವಿವಿಧ ಮುಸ್ಲಿಂ ಕಮೀಟಿ ವತಿಯಿಂದ ಭವ್ಯ ಮೆರವಣಿಗೆ ಮಾಡಲಾಯಿತು.
ಮಸೀದಿಗಳಲ್ಲಿ ಸುರಕ್ಷತಾ ಕ್ರಮ ಕೈಗೊಂಡು, ಧಾರ್ಮಿಕ ಚಟುವಟಿಕೆಗಳನ್ನು ನಡೆಸಲಾಯಿತು. ಎಂದಿನಂತೆ ಐದು ಹೊತ್ತು ನಮಾಜ್ ಮಾಡಿದ ಮುಸ್ಲಿಮರು, ‘ಸರ್ವರಿಗೂ ಒಳಿತಾಗಲಿ ಮತ್ತು ಕೊರೊನಾ ಆತಂಕ ಬೇಗ ದೂರಾಗಲಿ’ ಎಂದು ದೇವರಲ್ಲಿ ಪ್ರಾರ್ಥಿಸಿದರು. ಮಸೀದಿಗಳು ಹಾಗೂ ಮುಸ್ಲಿಮರ ಮನೆಗಳಿಗೆ ದೀಪಾಲಂಕಾರ ಮಾಡಲಾಗಿತ್ತು.
ಈ ವೇಳೆ ಮುಸ್ಲಿಂ ಸಮಾಜದ ಧರ್ಮಗುರುಗಳು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮುಸ್ಲಿಂ ನಗರ ಸೇವಕರು ಭಾಗವಹಿಸಿದ್ದರು. ಮುಫ್ತಿ ಮಂಜುರ್ ಅಲಂ ಮಾತನಾಡಿ, ಇಂದು ಮಹ್ಮದ್ ಪೈಂಗಬರ್ ಹುಟ್ಟು ಹಬ್ಬದ ನಿಮಿತ್ಯ ವಿಶ್ವದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿದ್ದೇವೆ. ನಾಡಿನಲ್ಲಿ ಎಲ್ಲರೂ ಶಾಂತಿಯುತವಾಗಿ ಬಾಳೋಣ ಎಂದು ಹೇಳಿದರು.
ನಗರಾದ್ಯಂತ ಬಂದೋಬಸ್ತ್: ಹಬ್ಬದ ಆಚರಣೆಯಲ್ಲಿ ಅಹಿತಕರ ಘಟನೆ ನಡೆಯದಂತೆ ನಗರಾದ್ಯಂತ ಪೊಲೀಸ್ ರು ಬಂದೋಬಸ್ತ್ ಮಾಡಲಾಗಿತ್ತು.