23/12/2024
IMG-20240922-WA0089

ಬೆಳಗಾವಿ-೨೨:ವಾ.ಕ.ರಾ.ರ.ಸಾರಿಗೆ ಸಂಸ್ಥೆ ನೌಕರರ ಸಹಕಾರಿ ಪತ್ತಿನ ಸಂಘದ 36 ನೆ ವಾರ್ಷಿಕ ಸರ್ವಸಾದರನ ಸಭೆಗೆ ಸದಸ್ಯರಿಗೆ ಸಂಘದ ಅಧ್ಯಕ್ಷರಾದ ಸಿದರಾಯಿ ಶಿಗಿಹಳ್ಳಿ ರವರು ಕರೆ ನೀಡಿದ್ದರು

ಸಭೆಗೆ ಆಗಮಿಸಿದ್ದ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ದಿ ನೌಕರರ ಸಹಕಾರಿ ಪತ್ತಿನ ಸಂಘದ ನಿರ್ದೇಶಕರು ಸದಸ್ಯರು 2023-2024 ನೆ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಕಣಬರಗಿ ರಸ್ತೆ ರಾಮತೀರ್ಥ ನಗರ ಸಮುದಾಯ ಭವನದಲ್ಲಿ ಜ್ಯೋತಿ ಬೆಳಗಿಸುವ ಮುಖಾಂತರ ಕಾರ್ಯಕ್ರಮ ಪ್ರಾರಂಭಿಸಲಾಯಿತು . ಈ ಕಾರ್ಯಕ್ರಮದಲ್ಲಿ SSlC ಹಾಗೂ PUC ಯಲ್ಲಿ ಶೇಕಡಾ 80% ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನಗದು ಪುರಸ್ಕಾರ ಜೊತೆ ಪ್ರಮಾಣ ಪತ್ರವನ್ನು ನೀಡಲಾಯಿತು ತದನಂತರ ಸಭೆಯಲ್ಲಿ ಸಹಕಾರಿ ಪತ್ತಿನ ಸಂಘದ ಅಬಿವೃದ್ಧಿ ಕಾರ್ಯಗಳ ಬಗ್ಗೆ ಲಾಭ ನಷ್ಟ ಮತ್ತು ಸಾಲ ಮರುಪಾವತಿ ಹಾಗೂ ಠೇವಣಿಗಳ ಬಗ್ಗೆ ಸದಸ್ಯತ್ವದ ಅಭಿಯಾನದ ಬಗ್ಗೆ ಎಳೆಎಳೆಯಾಗಿ ಸಂಘದ ಸದಸ್ಯರು ಸಭೆಯಲ್ಲಿ ಚರ್ಚೆ ಮಾಡಿದರು ಸದಸ್ಯರು ನಿರ್ದೇಶಕರು ಸಂಘದ ಮುಂದಿನ ಒಳ್ಳೆಯ ಬೆಳವಣಿಗೆ ಒಳ್ಳೆಯ ವಿಚಾರಗಳನ್ನು ವ್ಯಕ್ತಪಡಿಸಿದರು ಅದರಂತೆ ಪ್ರತಿ ಒಬ್ಬರು ಒಮ್ಮತ ಸೂಚಿಸಿದರು ಹಾಗೂ ಸಭೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿ ಒಬ್ಬರು ಬಾಗವಹಿಸಿ ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ
ಸಂಘದ ಎಲ್ಲ ನಿರ್ದೇಶಕರು ಸದಸ್ಯರು ಹಾಗೂ ಸಂಘದ ಅಧ್ಯಕ್ಷರಾದ ಸಿದರಾಯಿ ಶಿಗಿಹಳ್ಳಿ ಹಾಜರಿದ್ದರು.

error: Content is protected !!