ಬೆಳಗಾವಿ-೧೩:ಬೆಳಗಾವಿ ರಾಮತೀರ್ಥನಗರದಲ್ಲಿರುವ ಶ್ರೀ ಕಾರ್ಯ ಸಿದ್ಧಿ ಆಂಜನೇಯ ದೇವಸ್ಥಾನ ದ ಕಳಸಾರೋಹಣ ಕಾರ್ಯಕ್ರಮ ಇದೇ ರವಿವಾರ ದಿನಾಂಕ ೧೫ ರಂದು ಬೆಳಗಿನ ೧೧ ಗಂಟೆಗೆ ಜರುಗಲಿದೆ . ನಗರದ ಕಾರಂಜಿ ಮಠದ ಶ್ರೀ ಗುರು ಸಿದ್ಧ ಮಹಾಸ್ವಾಮೀಜಿ ಕಳಸರೋಹಣ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಆಸಿಫ್ ಸೇಠ್, ನಿವ್ರತ್ತ ಜಿಲ್ಲಾಧಿಕಾರಿ, ಎಮ್ ಜಿ ಹಿರೇಮಠ, ನಿವ್ರತ್ತಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ಪಾಟೀಲ, ಅತಿಥಿಗಳಾಗಿ ಹನುಮಂತ ಕೊಂಗಾಲಿ, ವಿನಯ ನಾವಲಗಟ್ಟಿ, ಎನ್ ಬಿ ನಿರ್ವಾಣಿ, ಸುರೇಶ ಯಾದವ, ರಾಜೇಂದ್ರ ಗೌಡಪ್ಪಗೋಳ, ಡಾ ಕಿರಣ ಉರಬಿನಹಟ್ಟಿ ಪಾಲ್ಗೊಳ್ಳಲಿದ್ದು, ಭಾನುವಾರ
ಬೆಳಿಗ್ಗೆ ೬-೦೦ಗಂಟೆಗೆ ದೇವಸ್ಥಾನದಲ್ಲಿ ಮಹಾಪೂಜೆ ,ರುದ್ರಾಭಿಷೇಕ
೮-೦೦ಗಂಟೆಗೆ ಅದ್ಯಕ್ಷರಾದ ಸುರೇಶ ಉರಬಿನಹಟ್ಟಿ ಅವರ ಮನೆಯಲ್ಲಿ ಕುಂಭಗಳನ್ನಿಟ್ಟು ಕಳಸಕ್ಕೆ ಪೂಜೆ . ನಂತರ ಕುಂಭಗಳ
ಸುಮಂಗಲೆಯರಿಗೆ ಉಡಿ ತುಂಬುವದು.
೧೦-೦೦ ಗಂಟೆಗೆ ಪ್ರಮುಖ ಬೀದಿಗಳಲ್ಲಿ ಕಳಸದ ಕುಂಭಮೇಳ ಮೆರವಣಿಗೆ. ಜರುಗಲಿದ್ದು, ಕುಂಭಮೇಳದಲ್ಲಿ ಪಾಲ್ಗೊಳ್ಳಲು ಶ್ರೀಮತಿ ಶಾಂತಾ ಕರಾಳೆ ಮೊ. ೯೬೮೬೦೩೭೩೪೯,
ಶ್ರೀಮತಿ, ಕಾವ್ಯಾ ಚಿಟಗಿ ಮೊ.೯೪೮೧೭೪೨೧೮೫ ಸಂಪರ್ಕಿಸುವಂತೆ ಕೋರಿದೆ.
೧೧-೦೦ ಕ್ಕೆ ದೇವಸ್ಥಾನದಲ್ಲಿ ಕಾರಂಜಿ ಶ್ರೀಗಳ ಅಮ್ರತ ಹಸ್ತದಿಂದ ಕಳಸಾರೋಹಣ. ನಂತರ ಮಹಾಪ್ರಸಾದ ಸೇವೆ ಜರುಗಲಿದ್ದು ಈ ಭಕ್ತಿ ಪೂರ್ವಕ ಕಾರ್ಯಕ್ರಮದಲ್ಲಿ ಸರ್ವರೂ ಪಾಲ್ಗೊಳ್ಳಲು ದೇವಸ್ಥಾನದ ಕಮಿಟಿ ಕೋರಿದೆ.