ಪುಸ್ತಕ ಪರಿಚಯ
ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ ಸಮಗ್ರ ಚಿತ್ರಣ ನೀಡುವ ಕೃತಿ
ನೀನು ಇಹಪರಗಳಲ್ಲಿ ಕೀರ್ತಿ ಶೇಷನಾಗಬೇಕಿದ್ದರೆ ಒಂದೊಳ್ಳೆಯ ಗ್ರಂಥವನ್ನಾದರೂ ಬರೆ ಇಲ್ಲವೆ, ಒಂದೊಳ್ಳೆಯ ಗ್ರಂಥಕ್ಕೆ ವಸ್ತು ವಿಷಯವಾದರೂ ಆಗು ಎನ್ನುವ ಮಹಾನುಭಾವರ ಉದ್ಗಾರದಂತೆ ನಮ್ಮ ನಾಡಿನ ಹಿರಿಯ ಪತ್ರಕರ್ತರೂ, ಸಾಹಿತಿಗಳೂ ನೇಸರಗಿ ಗ್ರಾಮದ ಚನ್ನಮಲ್ಲಪ್ಪ ಯಲ್ಲಪ್ಪ ಮೆಣಸಿನಕಾಯಿ(ಸಿ.ವಾಯ್.ಮೆಣಸಿನಕಾಯಿ) ಅವರು “ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ” ಎನ್ನುವ ಸುಮಾರು ಐದು ನೂರು ಎಂಬತ್ತು ಪುಟ ವ್ಯಾಪ್ತಿಯ ಒಂದೊಳ್ಳೆಯ ಗ್ರಂಥವನ್ನು ಪ್ರಕಟಿಸಿ ನಾಡು ನುಡಿಯನ್ನು ಪ್ರೀತಿಸುವ ಪ್ರತಿಯೊಬ್ಬರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಇತಿಹಾಸದ ಪುಟದಲ್ಲಿ ತಮ್ಮ ಹೆಸರನ್ನು ಚಿರಸ್ಥಾಯಿ ಯಾಗಿರಿಸಿದ್ದಾರೆ. ಶ್ರೀ ಸಿ. ವಾಯ್. ಮೆಣಸಿನಕಾಯಿಯವರು ವೃತ್ತಿಯಿಂದ ಪತ್ರಕರ್ತರು ನಾಡಿನ ಪತಿಷ್ಠಿತ ಪತ್ರಿಕೆಗಳಾದ ವಿಜಯ ಕರ್ನಾಟಕ, ಉದಯವಾಣಿ, ಪ್ರಜಾವಾಣಿಯ ವರದಿಗಾರರಾಗಿ , ಅಂಕಣ ಬರೆಹಗಾರರಾಗಿ ಮೌಲಿಕ ಸೇವೆ ಸಲ್ಲಿಸಿದವರು .ಸಲ್ಲಿಸುತ್ತಿರುವವರು. ಬರೆಹ ಕೃಷಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಇವರು ಈಗಾಗಲೇ ಕವನ ಸಂಕಲನ, ಕಥಾಸಂಕಲನ, ಮಕ್ಕಳ ನೀತಿ ಕತೆ ಸಂಕಲನಗಳನ್ನು ಪ್ರಕಟಿಸಿದ್ದುಂಟು. ಪ್ರಸ್ತುತ ಗಂಭೀರ ಚಿಂತನ ಕೃತಿಯ ಒಂದು ಚಾರಿತ್ರಿಕ ಗ್ರಂಥ. ಚಾರಿತ್ರಿಕ ಗ್ರಂಥ ರಚನೆ ಸವಾಲಿನದು. ಅದು ವ್ಯಾಪಕ ಅಧ್ಯಯನ, , ತಾರ್ಕಿಕ ಆಲೋಚನೆ, ಚಿಕಿತ್ಸಕ ದೃಷ್ಟಿಕೋನ, ಸತ್ಯಾ ಸತ್ಯತೆಯನ್ನು ಒರೆಗೆ ಹಚ್ಚಿನೋಡುವ ಕೌಶಲ್ಯ, ಅಗಾಧ ತಾಳ್ಮೆ, ನಿರಂತರದ ಕ್ಷೇತ್ರ ಕಾರ್ಯ, ದತ್ತ ಅಂಶಗಳ ಪರಿಶೀಲನೆಗಳನ್ನು ಬೇಡುತ್ತದೆ ಸಮಯ ಶಕ್ತಿ ಶ್ರಮ. ಅದೊಂದು ತಪಸ್ಸು ಇದ್ದಂತೆ. ಕೃತಿ ರಚನೆಗೆ ಮೀಸಲಾಗಿಟ್ಟು ಇಂತಹ ಸಂಶೋಧನಾತ್ಮಕ ಚಾರಿತ್ರಿಕ ಕೃತಿ ರಚಿಸಿದ್ದು ಸಣ್ಣ ಮಾತಲ್ಲ. ಇದು ನಮ್ಮ ವಿಶ್ವವಿದ್ಯಾಲಯಗಳು ಕೊಡುವ ಪಿಎಚ್.ಡಿ ಸಂಶೋಧನಾ ಪ್ರಬಂಧಕ್ಕೆ ಕಡಿಮೆಯಿಲ್ಲ. ಇದನ್ನು ನಾನು ಮಾತ್ರವಲ್ಲ ಈ ಕೃತಿಗೆ ಶುಭ ಹಾರೈಕೆ ನೀಡಿರುವ ಕಿತ್ತೂರ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಶ್ರೀಗಳು, ನಾಗನೂರ ರುದ್ರಾಕ್ಷಿಮಠದ ಅಲ್ಲಮ ಪ್ರಭು ಶ್ರೀಗಳು, ಬೈಲಹೊಂಗಲ ಮೂರುಸಾವಿರಮಠದ ಪ್ರಭು ನೀಲಕಂಠ ಶ್ರೀಗಳು, ಮುನವಳ್ಳಿಯ ಸೋಮಶೇಖರ ಮಠದ ಮೂರುಘೇಂದ ಮಹಾಸ್ವಾಮಿಗಳು, ಮುನ್ನುಡಿ ಬರೆದ ಇನ್ನೊಬ್ಬ ಚಾರಿತ್ರಿಕ ಕಾದಂಬರಿಕಾರ ಶ್ರೀ ಯ. ರು. ಪಾಟೀಲ, ಬೆನ್ನುಡಿ ನೀಡಿದ ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಡಾ. ಬಸವರಾಜ ಜಗಜಂಪಿ ಮುಂತಾದವರು ಒಮ್ಮತವಾಗಿ ಉದ್ಗರಿಸಿದ್ದಾರೆ.
ಸ್ವತಂತ್ರ ಜಿಲ್ಲೆಯಾಗಬಲ್ಲ ಎಲ್ಲ ಅರ್ಹತೆ ಇರುವ ಬೈಲಹೊಂಗಲ ತಾಲೂಕಿನ ಸಾಂಸ್ಕೃತಿಕ ದಿಂದ ಲೋಕದ ಸಮಗ್ರ ನೋಟ ನೀಡುವ ಈ ಸಂಶೋಧನಾತ್ಮಕ ಮಾಹಿತಿಪೂರ್ಣ ಕೃತಿಯಲ್ಲಿ ಹತ್ತು ಸುಧೀರ್ಘ ಅಧ್ಯಾಯಗಳಿವೆ. ಕೊನೆಗೆ ಆಕರ ಸೂಚಿ ಇದೆ. ಪ್ರಸ್ತಾವನೆ ಪ್ರಾಚೀನತೆ ಇತಿಹಾಸ ಎನ್ನುವ ಶೀರ್ಷಿಕೆಯ ಮೊದಲ ಅಧ್ಯಾಯದಲ್ಲಿ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ಇಲಾಖೆ ಸಂಪುಟ ೨೦೧೧ ರಲ್ಲಿ ಬೆಳಗಾವಿಯಲ್ಲಿ ಜರುಗಿದ ವಿಶ್ವಕನ್ನಡ ಸಮ್ಮೇಳನದ ಸವಿನೆನಪಿನಲ್ಲಿ ಡಾ. ಸರಜೂ ಕಾಟ್ಕರ್ ಅವರು ಸಂಪಾದಿಸಿದ ಬೆಳಗಾವಿ ಸಂಸ್ಕೃತಿ ಎನ್ನುವ ಬೃಹತ್ ಸಂಸ್ಮರಣ ಗ್ರಂಥ, ಬೆಳಗಾವಿಯಲ್ಲಿ ಜರುಗಿದ್ದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸವಿ ನೆನಪಿನಲ್ಲಿ ಪ್ರಕಟವಾದ ಬೆಳಗಾವಿ ಬೆಳಕು, ಡಾ. ಸಿ. ಬಿ. ಗಣಾಚಾರಿ ಅವರ ರಾಜಕೀಯ ಮತ್ತು ಧರ್ಮ ಸಂಶೋಧನ ಗ್ರಂಥ, ಡಾ. ಗೋಪಾಲ, ಡಾ. ಷಡಕ್ಷರಯ್ಯ ಅವರು ಸಂಪಾಧಿಸಿದ ಕಿತ್ತೂರ ಸಂಸ್ಥಾನದ ಇತಿಹಾಸ ಮತ್ತು ಸಂಸ್ಕೃತಿ, ಡಾ. ಬಾಳಪ್ಪ ಚಿನಗುಡಿ ಅವರ ಬೆಳವಡಿ ಮಲ್ಲಮ್ಮನ ಸಂಸ್ಥಾನ ಡಾ. ಮಲ್ಲಿಕಾರ್ಜುನ ಲಠ್ಠೆ ಅವರ ಉತ್ತರ ಕರ್ನಾಟಕದ ಜಾನಪದ ಕವಿ ಚರಿತ್ರೆ, ಡಾ. ಶಿ. ಬಾ. ಪಾಟೀಲ, ಡಾ. ಬಾಹುಬಲಿ ಹಂದೂರ, ಶ್ರೀಮತಿ ಅನ್ನಪೂರ್ಣ ಕನೋಜರ ಮಕ್ಕಳ ಸಾಹಿತಿಗಳು, ಡಾ. ಸೂರ್ಯನಾಥ ಕಾಮತ್ ಸಂಪಾದಿಸಿದ ಗೆಜೆಟಿಯರ್ ಆಫ್ ಕರ್ನಾಟಕ ಡಾ. ಸಿ.ಕೆ.ಮನೋಜ ಪಾಟೀಲರ ಬೆಳಗಾವಿ ಮಾರ್ಗದರ್ಶಿ, ನಾವಲಗಿ ಅವರು ಬರೆದ ಕಿತ್ತೂರು ಇತಿಹಾಸ ಮುಂತಾದ ಗ್ರಂಥಗಳಲ್ಲಿ ಬೈಲಹೊಂಗಲದ ವಿವಿಧ ರಂಗಗಳ ಕುರಿತಾದ ವಿವರಗಳಿವೆ ಎನ್ನುವ ಲೇಖಕರು ತಾಮ್ರ ಶೀಲಾ ಮತ್ತು ಕಬ್ಬಿಣದ ಬೃಹತ್ ಶೀಲಾ ಸಂಸ್ಕೃತಿಯನ್ನು ಒಳಗೊಂಡು ನಂದ,ಮೌರ್ಯ,ಶಾAತ ವಾಹನ, ಬಾದಾಮಿ ಚಾಲುಕ್ಯ ರಾಷ್ಟçಕೂಟ , ಕಲಚುರಿ, ದೇವಗಿರಿ, ಯಾದವ, ವಿಜಾಪುರದ ಆದಿಲ್ ಶಾಹಿ, ವಿಜಯನಗರ ಅರಸರು, ಬೆಳಗಾವಿ ಜಿಲ್ಲೆಯ ಪ್ರಸ್ತುತ ಸಾಹಿತ್ಯ ಶಾಸನಗಳು, ದೇಶ ಆಳಿದ್ದು ಇವರ ಕಾಲದ ಕುರುಹು ಶಾಸನ ಅವಶೇಷಗಳು ಪತ್ತೆಯಾಗಿದ್ದನ್ನು ವಿವರಿಸಿದ್ದಾರೆ. ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿ ಸಂಸ್ಥಾನವನ್ನು ಆಳಿದ ಅರಸರ ವಂಶಾವಳಿ ಈಶ ಪ್ರಭು ಬೆಳವಡಿ ಸಂಸ್ಥಾನದ ಚಾರಿತ್ರಿಕ ಹಿನ್ನೆಲೆ, ಈಶಪ್ರಭು ಮತ್ತು ಮಲ್ಲಮ್ಮರ ಜೀವನ, ಈ ಸಂಸ್ಥಾನದ ಐತಿಹಾಸಿಕ ಯುದ್ಧಗಳು ಆರ್ಥಿಕ, ಇತಿಹಾಸ, ನೀರಾವರಿ, ಕೃಷಿ, ವ್ಯಾಪಾರ, ವಾಣಿಜ್ಯ, ಕೈಗಾರಿಕೆಗಳ ಕುರಿತು ಮಾಹಿತಿಪೂರ್ಣ ವಿವರಗಳನ್ನು ನೀಡಿದ್ದುಂಟು.
ಜಾನಪದ ಹಾಡು ಮತ್ತು ಬ್ರಿಟಿಷ ದಾಖಲೆಗಳನ್ನು ಆಧರಿಸಿ ಬ್ರಿಟಿಶ್‌ರಿಗೆ ಸಿಂಹ ಸ್ವಪ್ನವಾಗಿದ್ದ ಚೆನ್ನಮ್ಮನ ಬಲಗೈ ಬಂಟನೆAದೇ ಪ್ರಸಿದ್ಧವಾದ ಸಂಗೊಳ್ಳಿ ರಾಯಣ್ಣ, ಕಿತ್ತೂರಿನ ಮೇಲೆ ದಾಳಿ ಮಾಡಿದ್ದ ಬ್ರಿಟಿಷ್ ಸೈನ್ಯಾಧಿಕಾರಿ ಥ್ಯಾಕರೆನ ಮೇಲೆ ಗುಂಡಿನ ಮಳೆಗರೆದ, ಚನ್ನಮ್ಮನ ಅಂಗ ರಕ್ಷಣೆಗೆ ತನ್ನ ದೇಹ ಸಮರ್ಪಿಸಿದ ಗುರಿಕಾರ ಅಮಟೂರ ಬಾಳಪ್ಪ ಕಿತ್ತೂರ ರಕ್ಷಣೆಗೆ ಹೋರಾಡಿದ ಬಿಚ್ಚುಗತ್ತಿ ಚನ್ನಬಸಪ್ಪ ಗಜವೀರ, ವೀರ ಒಡ್ಡರ ಯಲ್ಲಣ್ಣರ ಸಂಕ್ಷಿಪ್ತ ಜೀವನ ಸಾಧನೆಗಳ ಪರಿಚಯವನ್ನು ಲೇಖಕರು ಉತ್ತಮ ಶೈಲಿಯಲ್ಲಿ ಕೂತುಹಲಕಾರಿಯಾಗಿ ನೀಡಿದ್ದಾರೆ. ಕಿತ್ತೂರು ಮತ್ತು ಬೈಲಹೊಂಗಲಕ್ಕಿರುವ ಅವಿನಾಭಾವ ಸಂಬAಧದ ಕುರಿತು ತಿಳಿಸುವ ಲೇಖಕರು ಚನ್ನಮ್ಮ ತನ್ನ ಕೊನೆಯ ದಿನಗಳನ್ನು ಕಳೆದದ್ದು ಬೈಲಹೊಂಗಲದ ಜೈಲಿನಲ್ಲಿ ಹಾಗೂ ಸಂಪಗಾವವು ಕಿತ್ತೂರಿನ ೪ ದೊರೆಗಳ ರಾಜಧಾನಿ ಆಗಿತ್ತು. ಬೈಲಹೊಂಗಲ ತಾಲೂಕಿನ ಅನೇಕ ಗ್ರಾಮಗಳು ಕಿತ್ತೂರು ಸಂಸ್ಥಾನದ ವ್ಯಾಪಾರ ಕೇಂದ್ರಗಳಾಗಿದ್ದವು. ದೇಶನೂರ ಅರಸ ಕಟ್ಟಿಸಿದ ನಿರಂಜನ ಮಹಲ್ ಇದೆ ಎಂದು ಮುಂತಾಗಿ ಹೇಳಿದ್ದುಂಟು.
ಕಿತ್ತೂರಿನ ಬೈಲಹೊಂಗಲ ತಾಲೂಕಿನ ವಿವಿಧ ಗ್ರಾಮಗಳಲ್ಲಿ ದೊರೆತಿರುವ ಶಾಸನಗಳಲ್ಲಿ ಕಾಣಸಿಗುವ ವಿವಿಧ ಕ್ಷೇತ್ರ ಕಾರ್ಯಕ್ಕೆ ಸಂಬAಧಿಸಿದ ವಿವರಗಳನ್ನು, ಸತ್ಕಾರ್ಯಗಳಿಗೆ ಆಹುತಿಯಾದ ಯುದ್ಧಗಳಲ್ಲಿ ವೀರ ಮರಣ ಹೊಂದಿದ ತಾಲೂಕಿನ ವೀರರ ಸ್ಮರಣೆಯನ್ನು ಮಾಡಿಕೊಡುವ ದೊಡವಾಡ ಸಂಗಪ್ಪಜ್ಜನ ದೇವಾಲಯದ, ಕುರಗುಂದ ವೀರಗಲ್ಲುಗಳ ಪರಿಚಯವನ್ನು ಲೇಖಕರು ತುಂಬ ಸೊಗಸಾಗಿ ನೀಡಿದ್ದಾರೆ. ಎರಡನೆಯ ಅಧ್ಯಾಯದಲ್ಲಿ ಬೈಲಹೊಂಗಲದ ಸುತ್ತುಮುತ್ತಲಿನ ನಿಸರ್ಗ ನಿರ್ಮಿತ ಮಾನವ ನಿರ್ಮಿತ ಗುಡ್ಡ, ಗವಿಗಳ ಕುರಿತು ವಿಶೇಷವಾಗಿ ಕಣ್ಮನ ಸೆಳೆಯುವ ಕೊಳದೂರ ಗುಹೆ, ದೇಶನೂರ ಕರೆಮ್ಮನ ಕೊಳ್ಳದ ವಿಶೇಷತೆಯನ್ನು ಸಚಿತ್ರವಾಗಿ ಕಟ್ಟಿ ಕೊಡುವದರ ಜೊತೆಗೆ ತಾಲೂಕಿನ ಪ್ರಮುಖ ಮಠವಾದ ನಾಗನೂರಿನ ರುದ್ರಾಕ್ಷಿ ಮಠ ಅದರ ಪೀಠ ಪರಂಪರೆ ಕಾಯಕಯೋಗಿ ಡಾ. ಶಿವಬಸವ ಮಹಾಸ್ವಾಮೀಜಿಯವರ, ಶೈಕ್ಷಣಿಕ ಸೇವೆ, ಪ್ರಸಾದ ನಿಲಯ ಸ್ಥಾಪನೆ ಕನ್ನಡ ಸೇವೆ, ಡಾ. ಪ್ರಭು ಮಹಾಸ್ವಾಮಿಜಿ, ಡಾ. ಸಿದ್ಧರಾಮ ಮಹಾಸ್ವಾಮೀಜಿ, ಡಾ. ಅಲ್ಲಮ ಪ್ರಭು ಮಹಾ ಸ್ವಾಮೀಜಿಯವರ ಶೈಕ್ಷಣಿಕ ಸಾಮಾಜಿಕ ಕೊಡುಗೆ, ಅಂತೆಯೇ ಬೈಲಹೊಂಗಲದ ಮೂರು ಸಾವಿರ ಮಠದ ಪೀಠಾಧಿಪತಿ ಗಂಗಾಧರ ಶ್ರೀಗಳ ಶೈಕ್ಷಣಿಕ ಸೇವೆ ಇಂದಿನ ಪೀಠಾಧಿಪತಿ ಪ್ರಭು ನೀಲಕಂಠ ಸ್ವಾಮೀಜಿಯವರ ಧಾರ್ಮಿಕ ಸೇವೆ, ಸಂಗೊಳ್ಳಿಯ ಶ್ರೀ ಗುರು ಸಿದ್ಧಲಿಂಗೇಶ್ವರ ಸಂಸ್ಥಾನ ಮಠ, ನೇಗಿನಾಳದ ಶ್ರೀ ಜಗದ್ಗುರು ಮಡಿವಾಳೇಶ್ವರ ಮಠ ದೇಶನೂರಿನ ವಿರಕ್ತ ಮಠ, ಬೈಲಹೊಂಗಲದ ರಾಮಲಿಂಗೇಶ್ವರ ಗುಡಿ, ಶಿರಡಿ ಸಾಯಿಬಾಬಾ ಮಂದಿರ, ಮರಡಿ ಬಸವೇಶ್ವರ ಸಂಪಗಾವ ಕಾಟಾಪುರಿ ಮಠ, ಮುರಕಿ ಭಾವಿಯ ನೀಲಾಂಬಿಕಾ ದೇವಸ್ಥಾನ, ಮರಡಿ ನಾಗಲಾಪುರದ ಅಕ್ಕನಾಗಲಾಂಬಿಕೆ ಗುಡಿ, ವಕ್ಕುಂದ ತ್ರಿಕೂಟೇಶ್ವರ ದೇವಸ್ಥಾನ, ಮದನಭಾವಿಯ ಶ್ರೀ ಚನ್ನವೃಷಬೇಂದ್ರ ಮಠ, ನೇಸರಗಿ ಜೋಡುಗುಡಿ, ಚನ್ನವೃಷಬೇಂದ್ರ ದೇವರ ಕೊಂಡ ಲೀಲಾ ಮಠ, ನಯಾನಗರದ ಸುಖ ಸಿದ್ಧ ಶಾಂತಾನAದ ದೇವಾನಂದ ಮಠ, ದೇಶನೂರ ಸ್ನಾನಿಕ ಅರುಳಪ್ಪರ ವಿರಕ್ತಮಠ, ತಾಲೂಕಿನ ಕೆಳದಿ ಹಿರೇಮಠದ ಶಾಖಾ ಮಠಗಳು ಈ ಮಠದ ಗುರುಪರಂಪರೆ ದೇವಾಲಯಗಳ ಶಿಲ್ಪದ ಪ್ರಸ್ತಾಪ ಮಾಡಿ ಈ ಮಠ ಮಂದಿರಗಳು ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುತ್ತಿದ್ದು ಅನೇಕ ಮಠ ಮಾನ್ಯ ಗುಡಿಗಳು ಉತ್ತಮ ಪ್ರವಾಸಿ ಸ್ಥಾನಗಳಾಗುವ ಲಕ್ಷಣ ಹೊಂದಿವೆ . ಅವುಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯು ಪ್ರಾಚ್ಯವಸ್ತು ಇಲಾಖೆ ಪ್ರವಾಸೋದ್ಯಮ ಇಲಾಖೆ ಸರ್ಕಾರದ ಮೇಲಿದೆ ಎಂದು ತಿಳಿಸಿ ಸರ್ಕಾರದ ಗಮನ ಸೆಳೆದಿದ್ದಾರೆ. ಬೈಲಹೊಂಗಲದ ಭೌಗೋಳಿಕ ಪರಿಸರ ವೈಶಿಷ್ಟ್ಯಗಳ ಕುರಿತು ಮಾಹಿತಿ ನೀಡಿದ್ದಾರೆ.
ಮೂರನೇಯ ಅಧ್ಯಾಯದಲ್ಲಿ ಬೈಲಹೊಂಗಲ ಪುರಸಭೆಯ ಪ್ರಗತಿ ಕಾರ್ಯಗಳು, ತಾಲೂಕಿನ ಗ್ರಾಮಗಳ ಹೆಸರಿನ ಬಂದ ಉತ್ಪತ್ತಿ ಭೌಗೋಲಿಕ ಪರಿಸರ ಜನಸಂಖ್ಯೆ ವೃತ್ತಿ ವೈವಿಧ್ಯತೆ ಕಚೇರಿ, ಬ್ಯಾಂಕು, ಶಾಲೆ ಕಾಲೇಜು, ಮಠ ದೇವಸ್ಥಾನ, ರಾಜಕಾರಣಿ , ಸಾಹಿತಿಗಳ ಮಾಹಿತಿಯೊಂದಿಗೆ ತಾಲೂಕಿನ ಒಟ್ಟು ೮೩ ಗ್ರಾಮಗಳ ಪರಿಸರ, ಬೆಳೆ , ವ್ಯಾಪಾರ , ವಹಿವಾಟು, ಶೈಕಣಿಕ, ಧಾರ್ಮಿಕ ಸಂಸ್ಥೆ ಅಲ್ಲಿಯ ಪ್ರಮುಖ ವ್ಯಕ್ತಿಗಳ ಕುರಿತು ಅತ್ಯಂತ ಕಡಿಮೆ ಶಬ್ದಗಳಲ್ಲಿ ವಿವರಣೆ ನೀಡಿದ್ದು ವಿಶೇಷ. ಪ್ರತಿಯೊಂದು ಗ್ರಾಮಗಳ ಸಮಗ್ರ ಚಿತ್ರಣವನ್ನು ಕನ್ನಡಿಯಲ್ಲಿ ತೋರಿಸಿದಂತೆ ತೋರಿಸಿದ್ದು ನಿಜಕ್ಕೂ ಅವರ ನಿರೂಪಣಾ ಶೈಲಿಯ ಶ್ರೇಷ್ಟತೆಗೆ ಕನ್ನಡಿ ಹಿಡಿಯುತ್ತದೆ. ಗ್ರಾಮಗಳ ಸಂಕ್ಷಿಪ್ತ ಪರಿಚಯ ಸಚಿತ್ರವಾಗಿದೆ ಗ್ರಾಮದ ಕುರಿತಾದ ಯಾವ ಅಂಶವನ್ನೂ ಕೈಬಿಡದಿರುವುದು ಸೋಜಿಗ. ಲೇಖಕರ ಸಮೀಕ್ಷೆಯ ಕೌಶಲ್ಯಕ್ಕೆ ತಾಲೂಕಿನ ಕೋಟೆ, ಕೊತ್ತಗಳು, ವಾಡೆ, ದೇಶಗತಿ ಮನೆತನ, ಸ್ಮಾರಕ ಭಾವಿಗಳ ವಿಶೇಷವಾಗಿ ಬೈಲಹೊಂಗಲ ಸಂಪಗಾವ, ಬೆಳವಡಿ, ರುದ್ರಗಡ ಕೋಟೆ , ನೇಗಿನಹಾಳ ವಾಡೆಗಳ ಸ್ಥಿತಿಗತಿಯ ಚಿತ್ರಣದೊಂದಿಗೆ ಬೈಲಹೊಂಗಲ ನಾಡಗೌಡ್ರ ಪಾಟೀಲ ದೇಸಗತಿ ಮನೆತನಗಳ ವಿವರ ನೀಡಿದ್ದಾರೆ.
ಅಂತೆಯೇ ಬೈಲಹೊಂಗಲದಲ್ಲಿಯ ರಾಣಿ ಚನ್ನಮ್ಮಳ ಸಮಾಧಿ, ವನ್ನೂರ ಗ್ರಾಮದಲ್ಲಿಯ ಮಲ್ಲಸರ್ಜನ ಸಮಾಧಿ ಮತ್ತು ದೇಶನೂರದಲ್ಲಿಯ ನಿರಂಜನ ಮಹಲ್ ಅಸ್ತವ್ಯಸ್ತ ಸ್ಥಿತಿಯ ಚಿತ್ರಣ ನೀಡಿ, ಅದರ ಸ್ವಚ್ಛತೆ ಅಭಿವೃದ್ಧಿಗೆ ಪ್ರಾಚ್ಯವಸ್ತು ಹಾಗೂ ಪುರಾತತ್ವ ಇಲಾಖೆ ಮತ್ತು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಶ್ರಮಿಸಿ ಅದನ್ನು ಪ್ರವಾಸಿ ತಾಣಗಳನ್ನಾಗಿ ಮಾಡಬೇಕು ಎಂದು ಸೂಚಿಸುತ್ತಾರೆ. ಸಂಗೊಳ್ಳಿಯಲ್ಲಿರುವ ರಾಣಿ ರುದ್ರಮ್ಮಳ ಸಮಾಧಿ, ತಿಗಡಿಯಲ್ಲಿಯ ಶರಣೆ ಕಲ್ಯಾಣಮ್ಮನ ಸಮಾಧಿಯ ಕುರಿತು ಕೆಲ ಕುತೂಹಲ ಹುಟ್ಟಿಸುವ ರೋಚಕ ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ. ಅಂತೆಯೇ ತಾಲೂಕಿನ ಮುಸ್ಲಿಂ ಸ್ಮಾರಕಗಳು, ಬೈಲಹೊಂಗಲದಲ್ಲಿರುವ ಚೆನ್ನಮ್ಮ ಪೂಜೆಗೆ ಬಳಸುತ್ತಿದ್ದ ನೀರಿನ ಭಾವಿ, ವನ್ನೂರ ದೇಶನೂರ ಹುಡೆದ ಭಾವಿಗಳ ದುಃಸ್ಥಿತಿಯತ್ತ ನಮ್ಮ ಗಮನ ಸೆಳೆಯುವರು. ಐದನೆಯ ಅಧ್ಯಾಯದಲ್ಲಿ ತಾಲೂಕಿನ ಜನರು ಭಕ್ತಿಭಾವ ಸಂಪನ್ನರಾಗಿದ್ದು ಎಲ್ಲ ಕಡೆಗೆ ಆಚರಿಸುವ ಪಂಚ ಗಣೇಶ ಚೌತಿ, ದೀಪಾವಳಿ, ಹೋಳಿ ಹುಣ್ಣಿವೆ, ಮುಂತಾದ ಹಬ್ಬಗಳನ್ನು ಆಚರಿಸುವದಾಗಿ ತಿಳಿಸಿ, ಆಯಾ ಹಬ್ಬಗಳ ಮಹತ್ವವನ್ನೂ ತಿಳಿಸಿದ್ದು ವಿಶೇಷ. ತಾಲೂಕಿನ ಜನರು ಸೇವಿಸುವ ಆಹಾರ ಪದಾರ್ಥ ತಿಂಡಿ ತಿನಿಸುಗಳ ಅಚ್ಚುಕಟ್ಟಾದ ಪಟ್ಟಿ ನೀಡಿ, ವೈವಿಧ್ಯತೆಯನ್ನು ತುಂಬ ವಿಶೇಷವಾಗಿ ಇಡುತ್ತಾರೆ. ಇಲ್ಲಿಯ ತಿನಿಸುಗಳ ಬಗ್ಗೆ ಬರೆಯುತ್ತಾರೆ. ಉದಾ: ಜನರು ಚಪಾತಿಯು ಅವರ ದಿನ ನಿತ್ಯದ ಊಟದ ಒಂದು ಖಾದ್ಯ ಎಂದು ನಗರವಾಸಿಗಳಿಗೆ ದಿನನಿತ್ಯದ ಹಳ್ಳಿಯ ಜನಕ್ಕೆ ಆಗಾಗ ಮಾಡುವ ವಿಶೇಷ ಅಡುಗೆ ಅಂತ ಅಷ್ಟೇ ಹೇಳದೆ ಅವರು ತಯಾರಿಸುವ ಚಪಾತಿಯ ಪ್ರಕಾರಗಳನ್ನು ಸಾದಾ ಪದರಿನ ಚಪಾತಿ, ಉಗಿಮ್ಯಾಲಿನ ಚಪಾತಿ, ಬಾಳಿಗೆ ಮ್ಯಾಲಿನ ಚಪಾತಿ, ಸಕ್ಕರೆ, ಖಾರದ, ದಶಮಿ ಮುಂತಾದವನ್ನು ಹೆಸರಿಸುತ್ತಾರೆ. ಇದು ಅವರ ಸೂಕ್ಷ್ಮ ನಿರೀಕ್ಷಣೆ ವಿವರ ನೀಡುವಲ್ಲಿ ಅವರಿಗಿರುವ ಆಸಕ್ತಿಗೆ ಸಾಕ್ಷಿ. ಅಂತೆಯೇ ತಾಲೂಕಿನ ಬೇರೆ ಬೇರೆ ಊರುಗಳಲ್ಲಿ ನೆರವೇರುವ ಪ್ರಮುಖ ಜಾತ್ರೆ ರಥೋತ್ಸವ, ಪ್ರವಚನ ಕಲಾರಾಧನೆಗಳ ಸುಂದರ ಚಿತ್ರಣ ನೀಡಿದ್ದಾರೆ. ಸಂದರ್ಭದಲ್ಲಿ ನಡೆಯುವ ಕಾವ್ಯಗಳಲ್ಲಿ ನಾಟಕ ರಮ್ಯ ಎನ್ನುವ ಕಾಳಿದಾಸನ ಉದ್ಗಾರವನ್ನು ಪ್ರಸ್ತಾಪಿಸಿ ಈ ಹಿಂದೆ ಬೈಲಹೊಂಗಲದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಇಂದು ಪ್ರದರ್ಶನಗೊಳ್ಳುತ್ತಿರುವ ನಾಟಕಗಳ ಸ್ವರೂಪ, ಬದಲಾವಣೆಗಳ ಕುರಿತು ಚರ್ಚಿಸಿ ಲೋಕಸೇವಾ ಸಂಗೀತ ನಾಟಕ ಮಂಡಳಿ, ವಿದ್ಯಾದರ್ಶಕ ಸಂಗೀತ ನಾಟಕ ಮಂಡಳಿ ನೇಸರಗಿ, ಮದನಭಾವಿಯ ಸಂಯುಕ್ತ ಕಲಾ ಸಂಘ, ದೊಡ್ಡವಾಡದ ಸಮಾಜ ವಿಕಾಸ ನಾಟ್ಯ ಸಂಘ ಮುಂತಾದ ನಾಟಕ ಕಂಪನಿಗಳು ಪ್ರದರ್ಶಿಸಿದ ನಾಟಕ ಕಲಾವಿದರ ಪರಿಚಯ, ಕಂಪನಿಯ ಮಾಲೀಕರು ಅನುಭವಿಸಿದ ಕಷ್ಟ ನಷ್ಟಗಳ ವಿಹಂಗಮ ನೋಟದೊಂದಿಗೆ ಮೂಗಬಸವ ನಾಟಕದ ಪಾಟೀಲ ದೊಡ್ಡವಾಡದ ಸಿದ್ಧರಾಜ್ ಉಜ್ಜಯಿನಿಮಠ, ದೇಶನೂರಿನ ಇಮಾಮಸಾಬ್, ಪರಪ್ಪ ಮದವಾಲ್, ಅಶೋಕ್ ನೇಸರಗಿ, ಅಡವಯ್ಯ ಸ್ವಾಮಿ ಕುಲಕರ್ಣಿ, ಡಾ. ದೇವದಾಸ ಕಳಸದ, ಕಾಶಿಮಸಾಬ್ ಜಮಾದಾರ, ಪರಪ್ಪ ನಂದೆನ್ನವರ , ಈರಯ್ಯ ಮಠಪತಿ, ಶ್ರೀಧರ ಗುಜ್ಜರ್, ಕೆ.ಡಿ.ನದಾಫ್ ಮುಂತಾದ ತಾಲೂಕಿನ ರಂಗ ಕಲಾವಿದರ ನಾಟಕ ಮತ್ತು ಸಂಗೀತ ಕ್ಷೇತ್ರಗಳಿಗೆ ನೀಡಿದ ಕೊಡುಗೆಯನ್ನು ಲೇಖಕರು ಆನಂದ ಅಭಿಮಾನದಿಂದ ಪ್ರಸ್ತಾಪಿಸಿ ಬೈಲಹೊಂಗಲ ತಾಲೂಕಿನಲ್ಲಿದ್ದ ವೃತ್ತಿ ನಾಟಕ ಮಂಡಳಿ ಮತ್ತು ಜಾನಪದ ರಂಗ ತಂಡಗಳ ಮಾಹಿತಿ ನೀಡಿದ್ದಾರೆ.
ಜಾನಪದ ಸಾಹಿತ್ಯ ಎನ್ನುವ ಶಿರ್ಷಿಕೆಯ ಅಧ್ಯಾಯದಲ್ಲಿ ಲೇಖಕರು ತಾಲೂಕಿನ ಕಲಾವಿದರು, ದೊಡ್ಡಾಟ, ಸಣ್ಣಾಟ , ಲಾವಣಿ, ಗೀಗಿ ದುಂದುಮೆಯAತಹ ಜಾನಪದ ಕಲೆಗೆ ನೀಡಿದ ಕೊಡುಗೆಯೊಂದಿಗೆ ಈ ಕಲಾ ಪ್ರಕಾರಗಳ ಉದ್ದೇಶ ಸ್ವರೂಪ ಪ್ರಯೋಜನ ಮತ್ತು ಲಕ್ಷಣಗಳ ಸಂಕ್ಷಿಪ್ತ ಆದರೆ ಮಾಹಿತಿರ‍್ಣ ನೋಟ ನೀಡಿದ್ದಾರೆ. ಒಂದೊಮ್ಮೆ ತಾಲೂಕಿನಲ್ಲಿ ಮೋಜು ಮನರಂಜನೆಗೆ ಆಡುತ್ತಿದ್ದ ದೇಸಿ ಆಟಗಳು ರಂಗೋಲಿ ಚಿತ್ರಕಲೆ ತೊಗಲು ಬೊಂಬೆಯಾಟ, ಕೌದಿ ಕಸೂತಿ, ಹಚ್ಛೆ ಹಾಡು ಕಟ್ಟಿ ಅಳುವ ಆಟಗಳನ್ನು ಪರಿಚಯಿಸುವ ಆ ಆಟಗಳ ಸ್ಥಾನವನ್ನು ಕ್ರಿಕೆಟ್ ಮೊಬೈಲ್ ಗೇಮ್ಗಳು ಆಕ್ರಮಿಸಿದ್ದಕ್ಕೆ ವಿಷಾದಿಸುತ್ತಾರೆ. ತಾಲೂಕಿನ ಪ್ರಮುಖ ಜಾನಪದ ಕವಿಗಳಾದ ಸಂಗೊಳ್ಳಿ ಬಡಿಗೇರ, ಸಂಗೊಳ್ಳಿಯ ಮೋದಿನ ಸಾಬ್, ಹೊಂಗಲ ಬಸವ , ಹೊಂಗಲದ ದೂರದುಂಡಿಶ, ಬೈಲಹೊಂಗಲ ಶಾಮರಾವ್, ನೇಸರಗಿಯ ಅಡಿವೆಪ್ಪ, ಬೈಲಹೊಂಗಲ ಅಪ್ಪು, ಸಂಗ್ಯಾ ಬಾಳ್ಯಾದ ಪತ್ತಾರ ಮಾಸ್ತರ್, ಬೈಲವಾಡದ ರಾಯಪ್ಪ ಶೀಗಿಹಳ್ಳಿಯ ರಾಮರಾವ್, ಹಣ್ಣೀಕೇರಿಯ ಶಿವಾನಂದ, ಕುರಗುಂದದ ವೀರಯ್ಯ ಸ್ವಾಮಿ ಕುಲಕರ್ಣಿ, ರಾಮರಾವ್ ಕುಲಕರ್ಣಿ, ನೇಗಿನಾಳದ ಕರ‍್ತಿಶೇಷ ಕುಲಕರ್ಣಿ ಮುಂತಾದ ಜನಪದ ಕವಿ ಕಲಾವಿದರು , ದೊಡ್ಡಾಟ ಸಣ್ಣಾಟ ಲಾವಣಿ ಜನಪದ ಹಾಡು ರಚಿಸಿ ಹಾಡಿ ಜನ ಮೆಚ್ಚುಗೆ ಗಳಿಸಿದ್ದನ್ನು ಲೇಖಕರು ಅಭಿಮಾನದಿಂದ ಪ್ರಸ್ತಾಪಿಸಿ ಅವರ ವ್ಯಕ್ತಿ ಚಿತ್ರಣ ನೀಡಿದ್ದು ಗಮನಾರ್ಹವಾಗಿದೆ.
ಬೈಲಹೊಂಗಲ ತಾಲೂಕಿನ ಪ್ರಮುಖ ಸಾಹಿತಿಗಳಾದ ಗಂಗಾಧರ ಮಡಿವಾಳೇಶ್ವರ ತುರಮರಿ, ಡಾ. ಮಲ್ಲಿಕಾರ್ಜುನ ಲಠ್ಢೆ, ಡಾ. ಶಾಂತಿನಾಥ ದಿಬ್ಬದ, ಡಾ. ಬಾಳಣ್ಣ ಸೀಗಿಹಳ್ಳಿ, ಡಾ. ನೇಗಿನಾಳ, ಸರಸ್ವತಿದೇವಿ ಗೌಡರ, ಆನಂದ ಹಣಮಂತಡ, ಈನಿಂಕಿ, ಡಾ. ಫಕೀರನಾಯ್ಕ್, ಗದ್ದಿಗೌಡರ, ಸಿ. ವಾಯ್. ಮೆಣಸಿನಕಾಯಿ, ಮಲ್ಲಿಕಾರ್ಜುನ ಛಬ್ಬಿ ಮುಂತಾದ ಸಾಹಿತಿಗಳು ಮತ್ತು ಉಳುವೀಶ, ಗುರುಪಾದಸ್ವಾಮಿ ಹಿರೇಮಠ , ರಾಜೇಂದ್ರ ಹಿರೇಮಠ, ಅನ್ನಪೂರ್ಣ ಕನೋಜ, ಬಿ. ವಿ. ನೇಸರಗಿ, ಶಿವಪ್ರಸಾದ ಹುಲೆಪ್ಪನವರಮಠ, ಗೌರಾದೇವಿ ತಾಳಿಕೋಟಿಮಠ, ಸತ್ಯಾರ್ಥಿ ಮುಂತಾದ ಮಕ್ಕಳ ಕವಿಗಳ ಶೈಕ್ಷಣಿಕ, ಸಾಹಿತ್ಯಿಕ ಸಾಧನೆಗಳ ಸಮಗ್ರ. ವಿವರಗಳನ್ನು ತಮ್ಮ ನೀಡಿದ್ದಾರೆ. ಕನ್ನಡಪರ ಹೋರಾಟ, ಸಮಾಜ ಸೇವೆ, ಆರೋಗ್ಯ ಸೇವಾ ಕ್ಷೇತ್ರಗಳ ಮಿಂಚಿದ ಡಾ. ಸಿದ್ಧನಗೌಡ ಪಾಟೀಲ, ಗಡಿ ತಜ್ಞ ಡಾ. ಎಸ್. ವಿ. ಪಾಟೀಲ, ಬ.ಗಂ. ತುರಮರಿ, ಡಾ. ಮಹಾಂತೇಶ ರಾಮಣ್ಣವರ, ಮೋಹನ ಪಾಟೀಲ, ಮಂಗಳಾ ಮೆಟಗುಡ್ ಮುಂತಾದವರ ವ್ಯಕ್ತಿತ್ವ ಸಾಧನೆಗಳ ಸ್ಥೂಲ ಪರಿಚಯವು ಮುಂದಿನ ಪೀಳಿಗೆಗೆ ಲೇಖಕರು ನೀಡಿದ ಸ್ಪೂರ್ತಿಯ ಕೊಡುಗೆಯಾಗಿದೆ.
ಅಲ್ಲದೆ ತಾಲೂಕಿನ ಜನರ ಭಾಷೆಯ ಕುರಿತು ವಿಶೇಷವಾಗಿ ಬೈಗುಳಗಳ ಕುರಿತು ಉದಾಹರಣೆಯೊಂದಿಗೆ ವಿವರಿಸಿದ್ದು ರಂಜನೆಯೊದಗಿಸುತ್ತದೆ. ತಾಲೂಕಿನ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಸ್ವಾತಂತ್ರ‍್ಯ ಹೋರಾಟದಲ್ಲಿ ಪಾಲ್ಗೊಂಡು ಸ್ವಹಿತವನ್ನು ಬದಿಗಿಟ್ಟು ದುಡಿದÀ ಕನ್ನಡಕ್ಕೆ ತಮ್ಮ ಹೋರಾಟ ಮಾಡಿದ ಸ್ವಾತಂತ್ರ‍್ಯ ಯೋಧರ ಪರಿಚಯವೂ ಇದರಲ್ಲಿದೆ, ಕಿತ್ತೂರು ಸಂಸ್ಥಾನದ ಇತಿಹಾಸ ಸಂಗ್ರಹ ಜೀವನವನ್ನೇ ಸರ‍್ಪಣೆ ಮಾಡಿದ ಬೈಲಹೊಂಗಲದ ಸಂಶೋಧಕ ದೊಡ್ಡಬಾವೆಪ್ಪ ಮೂಗಿ, ಕನ್ನಡ ಹೋರಾಟಗಾರ ಸಿದ್ಧನಗೌಡ ಪಾಟೀಲ, ಗಡಿ ತಜ್ಞ ಎಸ್. ವಿ. ಪಾಟೀಲ, ಕನ್ನಡ ನಾಡು ನುಡಿಯ ಬೆಳ ವಣಿಗೆಗೆ ವಿಶೇಷ ಕೊಡುಗೆ ನೀಡಿದ ಬ.ಗಂ. ತುರಮರಿ, ವೈದ್ಯಕೀಯ ಇತಿಹಾಸದಲ್ಲಿ ಇತಿಹಾಸ ರ‍್ಮಿಸಿದ ಡಾ. ಮಹಾಂತೇಶ ರಾಮಣ್ಣವರ, ದೇಶದ ಸ್ವಾತಂತ್ರö್ಯಕ್ಕೆ ಮನೆ ಮಾರು ತೊರೆದು ಬ್ರಿಟಿಷರ ಕ್ರೌರ್ಯ ಸಹಿಸಿ ಹೋರಾಡಿದ ಕ್ರಾಂತಿವೀರ ಚೆನ್ನಪ್ಪ ವಾಲಿ, ಶ್ರೀ ಬಸಪ್ಪ ಸಿದ್ನಾಳ, ನಾಗನೂರಿನ ದಿಟ್ಟ ಮಹಿಳೆ ನಾಗಮ್ಮ ರಾಚನಾಯಿಕರ, ಏಳು ಜನ ಹುತಾತ್ಮರ ಅಪೂರ್ವ ಸಾಧನೆಯ ಚಿತ್ರಣವೂ ಇಲ್ಲಿದೆ. ಶಾಸಕರಾಗಿ ಸಂಸದರಾಗಿ ರಾಜ್ಯ ಮತ್ತು ರಾಷ್ಟç ರಾಜಕಾರಣಕ್ಕೆ ಅಪೂರ್ವ ಕೊಡುಗೆ ನೀಡಿದ ಬಾಬಾಗೌಡ ಪಾಟೀಲ, ಶಿವಾನಂದ ಕೌಜಲಗಿ, ಎಸ್. ಬಿ. ಸಿದ್ನಾಳ, ಮಹಾಂತೇಶ ಕೌಜಲಗಿ, ಡಾ. ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ ಮುಂತಾದವರ ಸಾಧನೆಯ ಪರಿಚಯದೊಂದಿಗೆ ೧೯೫೭ ರಿಂದ ೨೦೨೩ರ ವರೆಗಿನ ಬೈಲಹೊಂಗಲ ಮತಕ್ಷೇತ್ರದ ಶಾಸಕರು ಮತದಾರರ ಸಂಖ್ಯೆ ಆಯ್ಕೆಯಾದ ಪಕ್ಷ ಇತ್ಯಾದಿ ವಿವರಗಳು ರಾಜಕೀಯ ವಿವೇಚಕರಿಗೆ ಸಂಶೋಧನ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ಒದಗಿಸಬಲ್ಲವು. ಗ್ರಂಥದ ಸಂಕೀರ್ಣ ವಿಭಾಗದಲ್ಲಿ ನಾಡಿನ ಚಲನಚಿತ್ರರಂಗಕ್ಕೆ ಅಪೂರ್ವ ಕೂಡುಗೆ ನೀಡಿರುವ ನೀಡುತ್ತಿರುವ ಶಿವರಂಜನ ಬೋಳನ್ನವರ, ರಮೇಶ ಪರವಿನಾಯ್ಕರ, ಸಿ.ಕೆ.ಮೆಕ್ಕೆದ, ಕುಮಾರ ಬೋರಕ್ಕನವರ, ಸದಾಶಿವ ಬ್ರಹ್ಮಾವರ, ರಾಜಕುಮಾರ ಪತ್ತಾರ, ವಸಂತರಾವ್ ಕುಲಕರ್ಣಿ, ಉಮೇಶ್ ಹಿರೇಮಠ ಅವರ ಕಿರು ಪರಿಚಯ ಇದೆ. ಅಂತೇಯೆ ತಾಲೂಕಿನ ವಿಶೇಷ ಸಾಧನೆ ಸಿದ್ಧಿಗಳಾದ ಅತಿ ಹೆಚ್ಚು ಶಿಕ್ಷಕರನ್ನು ಹೊಂದಿದ ನೇಗಿನಾಳ ಗ್ರಾಮ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಫೀಲ್ಡ್ ಮಾರ್ಷಲ್ ಕರಿಯಪ್ಪನವರ ಭೇಟಿ, ಹಣಬರಹಟ್ಟಿ ರಾಮಲಿಂಗೇಶ್ವರ ಕೊಳ್ಳ, ಸಂಗೊಳ್ಳಿ ರಾಕ್ ಗಾರ್ಡನ್, ಹತ್ತಿ ಉದ್ಯಮ, ಮತ್ತಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರ, ಹಿರಿಯ ಚಿತ್ರಕಲಾವಿದ ಎ. ಬಿ. ಉಪ್ಪಾರ, ಪ್ರಗತಿಪರ ರೈತ ಗೌಡಪ್ಪ ಯರಡಾಲ, ಬೈಲಹೊಂಗಲದ ಸಾವಯವ ಸಂತೆ, ಕೆ.ಎಲ್.ಇ. ಸಂಸ್ಥೆಗೆ ಬಹುಪಾಲು ನಿರ್ದೇಶಕರು, ಸೈನಿಕರ ಗ್ರಾಮ ಮಾಸ್ತಮರಡಿ, ದೇಶನೂರ ನೇಕಾರರು, ಪತ್ರಿ ಬಸವೇಶ್ವರ ಅನುಭವ ಮಂಟಪ, ಬೈಲವಾಡದ ಸಿದ್ಧ ಬಸವೇಶ್ವರ ಮಠ, ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಮತ್ತು ವೀರಜ್ಯೋತಿ ಯಾತ್ರೆ ಮುಂತಾದ ವಿವರಣೆ ನೀಡಿದ್ದಾರೆ. ಶ್ರೀಗಳ ಗ್ರಂಥದ ಕೊನೆಯಲ್ಲಿ ಸಾಹಿತಿ ಪತ್ರಕರ್ತ ಶ್ರೀ ಸಿ. ವಾಯ್. ಮೆಣಸಿನಕಾಯಿ ಅವರ ಕೃತಿಗಳ ಕುರಿತು ಪೂಜ್ಯರು ಗಣ್ಯರು ವ್ಯಕ್ತಪಡಿಸಿದ ಅಭಿಪ್ರಾಯಗಳು ಮತ್ತು ಈ ಗ್ರಂಥ ರಚಿಸಲು ಬಳಸಿಕೊಂಡ ಆಕರ ಆಧಾರ ಗ್ರಂಥ ಸೂಚಿಯನ್ನು ಅಚ್ಚುಕಟ್ಟಾಗಿ ಒಪ್ಪವಾಗಿ ನೀಡಿದ್ದು ಶ್ರೀ. ಸಿ. ವಾಯ್. ಮೆಣಸಿನಕಾಯಿ ಅವರ ಸಂಶೋಧನ ಶಿಸ್ತು ಮತ್ತು ಅಧ್ಯಯನದ ಹರವಿಗೆ ಕನ್ನಡಿ ಹಿಡಿಯುತ್ತದೆ. ವಿದ್ಯಾರ್ಥಿ ಸಂಶೋಧಕರಿಗೆ, ರಾಜಕೀಯ ವಿವೇಚಕರಿಗೆ, ಕಲ್ಯಾಣ ಯೋಜನೆ ರೂಪಿಸುವವರಿಗೆ, ಸಾಹಿತ್ಯ, ಕಲೆ, ಕ್ರೀಡೆ, ಸಂಸ್ಕೃತಿ, ಚಿಂತಕರಿಗೆ ಸಾಹಿತ್ಯ ಸಮ್ಮೇಳನಗಳ ಆಯೋಜಕರಿಗೆ, ಸಾರ್ವಜನಿಕರಿಗೆ, ಸರಕಾರಿ ಅಧಿಕಾರಿಗಳಿಗೆ ತುಂಬ ಉಪಯುಕ್ತ ಕರಾರುವಕ್ಕಾದ ನಿಖರ ಮಾಹಿತಿ ನೀಡುವ ಈ ಕೈಪಿಡಿಯನ್ನು ನಮ್ಮ ಕೈಗಿತ್ತು ಉಪಕರಿಸಿದ ಸಾಹಿತಿ ಶ್ರೀ. ಸಿ.ವಾಯ್. ಮೆಣಸಿನಕಾಯಿ ಅವರ ಶ್ರಮ ಮತ್ತು ಉತ್ತಮ ಮನಸ್ಸಿಗೆ ಸಾವಿರದ ಶರಣು.
ಲೇಖನ-
ಡಾ. ಗುರುದೇವಿ ಉ. ಹುಲೆಪ್ಪನವರಮಠ
ವಿಶ್ರಾಂತ ಇಂಗ್ಲಿಷ್ ಪ್ರಾಧ್ಯಾಪಕಿ, ಬೆಳಗಾವಿ
ಮೊ. ಸಂ: ೯೮೪೫೭೫೧೬೨೧
**
ಪುಸ್ತಕದ ಹೆಸರು- ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ
ಪ್ರಕಾಶಕರು- ಶ್ರೀರಾಮ್ ಬುಕ್ ಸೆಂಟರ್ ಮಂಡ್ಯ
ಪುಟ-೫೮೦
ಬೆಲೆ-೭೦೦
ಪ್ರಕಟನೆ ವರ್ಷ-೨೦೨೪