ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ –ಜಗದೀಶ್ ಶೆಟ್ಟರ
ಬೆಳಗಾವಿ-೦೮:ಬೆಳಗಾವಿಯನ್ನು ಔದ್ಯೋಗಿಕವಾಗಿ ಮೂಲಭೂತ ಸೌಕರ್ಯ ಒದಗಿಸುವಿಕೆ,ರಸ್ತೆಗಳ ನಿರ್ಮಾಣ, ರೈಲ್ವೆ,ವಿಮಾನಯಾನಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ, ನೆನೆಗುದಿಗೆ ಬಿದ್ದಿರುವ ವಿವಿಧ ಯೋಜನೆಗಳನ್ನು ಪೂರ್ಣಗೊಳಿಸುವುದು ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ ಎಂದು ಭಾನುವಾರ ದಿ.೮ ರಂದು ಲಿಂಗಾಯತ ಸಂಘಟನೆ ವತಿಯಿಂದ ಬೆಳಗಾವಿಯ ಹಳಕಟ್ಟಿ ಭವನದಲ್ಲಿ ಹಮ್ಮಿಕೊಳ್ಳಲಾದ ಸಂಸದರಸನ್ಮಾನ ಸಮಾರಂಭದಲ್ಲಿ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬೆಳಗಾವಿ ವಿಶೇಷ ಜಿಲ್ಲೆ ವಿಶೇಷವಾಗಿ ಧಾರ್ಮಿಕ ಸಾಮರಸ್ಯದ ದೃಷ್ಟಿಕೋನದಲ್ಲಿ ಯುವ ಸಮೂಹವನ್ನು ಸಹ ಸದಾಚಾರದಲ್ಲಿ ನಡೆಯುವಂತಾಗಲು ಬಸವಣ್ಣನವರ ವಚನಗಳ ಪ್ರೇರಣೆ ಆಗುವ ನಿಟ್ಟಿನಲ್ಲಿ ಯುವ ಜನತೆಯನ್ನು ಸಂಘಟಿಸಲು ಮತ್ತು ಒಳ್ಳೆಯ ಮಾರ್ಗದಲ್ಲಿ ನಡೆಯುವಂತಾಗಲು ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ಸಾಮೂಹಿಕ ಪ್ರಾರ್ಥನೆ,ಸತ್ಸಂಗಗಳು, ವಿವಿಧ ಜನಪರ ಕಾಳಜಿಯ ಕಾರ್ಯಕ್ರಮಗಳು ನಿಜಕ್ಕೂ ಸಮಾಜಕ್ಕೆ ಮಾದರಿ ಎಂದು ಸಂಘಟನೆಯ ವಿವಿಧ ಕಾರ್ಯಕ್ರಮಗಳ ಕುರಿತು ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ಮಾತನಾಡಿ ಅಪಾರ ಅನುಭವ ಹೊಂದಿರುವ ಮುತ್ಸದ್ದಿ ರಾಜಕಾರಣಿ ಆಗಿರುವ ಜಗದೀಶ ಶೆಟ್ಟರ ರವರು ಹುಬ್ಬಳ್ಳಿಯವರು ಎಂಬ ಭಾವ ಎಲ್ಲರಲ್ಲಿದೆ ಅದನ್ನು ಹೋಗಲಾಡಿಸಿ ಬೆಳಗಾವಿಗೆ ಹತ್ತಿರವಾಗಿ ಎಲ್ಲಾ ರಂಗಗಳ ಸಮಸ್ಯೆಗಳನ್ನು ಮನಗಂಡು ಅವುಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಶ್ರಮಿಸುವರೆಂಬ ವಿಶ್ವಾಸ ನಮ್ಮೆಲ್ಲರಿಗಿದೆ ಎಂದು ವಿಶ್ವಾಸ ವ್ಯಕ್ತಪಡಿಸುವುದರ ಜೊತೆಗೆ ಸಂಘಟನೆ ವತಿಯಿಂದ ಆಗಬೇಕಾಗಿರುವ ಕೆಲಸಗಳ ಕುರಿತಾದ ಮನವಿಯನ್ನು ಮಾನ್ಯ ಸಂಸದರಿಗೆ ಅರ್ಪಿಸಿದರು. ಇದೇ ಸಂದರ್ಭದಲ್ಲಿ ಸಾಹಿತಿ ಎಂ.ವೈ ಮೆಣಸಿನಕಾಯಿ ರವರು ಬರೆದ ‘ನಮ್ಮ ರಾಷ್ಟ್ರೀಯ ಹಬ್ಬಗಳು’ ಕೃತಿ ಲೋಕಾರ್ಪಣೆ ಸಮಾರಂಭ ಜರುಗಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಅನಿಲ ಬೆನಕೆ ನಗರಸೇವಕರಾದ ರಾಜಶೇಖರ ಡೋಣಿ,ಹನುಮಂತ ಕೊಂಗಾಲಿ, ಮುರುಗೇಂದ್ರಗೌಡ ಪಾಟೀಲ, ಶಶಿಭೂಷಣ ಪಾಟೀಲ, ಶಂಕರ ಗುಡಸ, ಆನಂದ ಕರ್ಕಿ , ಅ. ಬ. ಇಟಗಿ, ವಿ. ಕೆ. ಪಾಟೀಲ,ಮಹಾಂತೇಶ ತೋರಣಗಟ್ಟಿ, ಶಿವಾನಂದ ತಲ್ಲೂರ, , ಬಿ ಬಿ ಮಠಪತಿ, ವಿ ಕೆ ಪಾಟೀಲ ವಿರುಪಾಕ್ಷಿ ದೊಡ್ಡಮನಿ, ಬಾಬು ತಿಗಡಿ ಶಿವಾನಂದ ನಾಯ್ಕ ಸೇರಿದಂತೆ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಸಂಗಮೇಶ ಅರಳಿ ಸ್ವಾಗತಿಸಿದರು. ಶ್ರೀಕಾಂತ ಶಾನವಾಡ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಸತೀಶ ಪಾಟೀಲ ನಿರೂಪಿಸಿದರು. ಕೊನೆಯಲ್ಲಿ ಸುರೇಶ ನರಗುಂದ ವಂದಿಸಿದರು