ಬೆಳಗಾವಿ-೨೧:ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ಸಂಘಟನೆಯ* ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕ ಪದಾಧಿಕಾರಿಗಳ ಪದಗ್ರಹಣ ಮತ್ತು ಮುಖ್ಯ ಸಭೆ ಖಾನಾಪುರ ನಲ್ಲಿ ನಡೆಸಲಾಯಿತು. ರಾಜ್ಯಾಧ್ಯಕ್ಷರು ಮಹೇಶ ಎಸ್ ಶಿಗೀಹಳ್ಳಿ ರವರ ನೇತೃತ್ವದಲ್ಲಿ *(ಖಾನಾಪುರ ತಾಲೂಕಿನ ಗೌರವ ಅಧ್ಯಕ್ಷರಾಗಿ ರಾಜು ನಾಯಕ)* ಮತ್ತು *(ಖಾನಾಪುರ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಹನುಮಂತ ನಾಯಕ)* ಹಾಗೂ *(ಖಾನಾಪುರ ನಗರ ಅದ್ಯಕ್ಷರಾಗಿ ರುದ್ರಪ್ಪ ಮುಕಾರಿ)* *(ಉಪಾಧ್ಯಕ್ಷರಾಗಿ ಸುನಿಲ್ ಬಾಳನ್ನವರ್)* .*(ಖಾನಾಪುರ ತಾಲೂಕು ಸಹ ಕಾರ್ಯದರ್ಶಿಯಾಗಿ ಆದಿತ್ಯ ಹುಡೆದಾರ್)* ರವರನ್ನು ಆಯ್ಕೆ ಮಾಡಿ ಆದೇಶ ಪತ್ರ ವಿತರಿಸಲಾಯಿತು . ಸಂಘಟನೆಯ ತತ್ವ ಸಿದ್ಧಾಂತಗಳು ನಿಯಮಗಳ ಅಡಿಯಲ್ಲಿ ನಿಸ್ವಾರ್ಥದಿಂದ ನ್ಯಾಯಕ್ಕಾಗಿ ಹೋರಾಟ ಮಾಡಲು ಪದಾಧಿಕಾರಿಗಳು ಸಿದ್ಧರಾಗಬೇಕು ಹಾಗೂ ಕಾನೂನು ಕಾಯ್ದೆಗಳನ್ನು ತಿಳಿದುಕೊಳ್ಳಬೇಕು ಮತ್ತು ಯಾವುದೇ ಸ್ಥಳೀಯ ಸಮಸ್ಯೆಗಳು ಅನ್ಯಾಯಗಳು ಕಂಡಾಗ ಪದಾಧಿಕಾರಿಗಳು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಬೇಕು ಮತ್ತು ಪದಾಧಿಕಾರಿಗಳು ಶಿಸ್ತನ್ನು ಕಾಪಾಡಿಕೊಳ್ಳಬೇಕು ಪ್ರತಿ ಗ್ರಾಮಗಳಲ್ಲಿ ಸಂಘಟನೆ ರಚನೆ ಮಾಡಿ ಮಕ್ಕಳಿಗೆ ಶಿಕ್ಷಣ ಹಾಗೂ ಸಮುದಾಯಕ್ಕೆ ಸಿಗುವ ಸೌಲಭ್ಯಗಳು ಹಾಗೂ ಪ್ರತಿ ಒಂದು ನ್ಯಾಯಯುತವಾಗಿ ಸಿಗಬೇಕಾದ ಹಕ್ಕುಗಳನ್ನು ಪಡೆದುಕೊಳ್ಳಲು ಶ್ರಮಿಸಬೇಕು ಎಂದು ಹೇಳಿ ಇನ್ನೂ ಅನೇಕ ವಿಚಾರಗಳನ್ನು ಖಾನಾಪುರ ನೂತನ ಪದಾಧಿಕಾರಿಗಳಿಗೆ ಮತ್ತು ಯುವಕರಿಗೆ ರಾಜ್ಯಾಧ್ಯಕ್ಷರು ಮಹೇಶ ಎಸ್ ಶಿಗಿಹಳ್ಳಿ ತಿಳಿಸಿದರು. ಹಾಗೂ ಯುವ ಕರ್ನಾಟಕ ಭೀಮ್ ಸೇನೆ ರಾಜ್ಯಾಧ್ಯಕ್ಷ ಪ್ರವೀಣ್ ಮಾದರ ರವರು ಸಂಘಟನೆಯ ಮುಖ್ಯ ಅಂಶಗಳನ್ನು ಪದಾಧಿಕಾರಿಗಳಿಗೆ ತಿಳಿಸಿದರು . ಈ ಸಂದರ್ಬದಲ್ಲಿ (ಬೆಳಗಾವಿ ಜಿಲ್ಲೆಯ ಗೌರವ ಅಧ್ಯಕ್ಷರು ರಾಮ್ ಪೂಜಾರಿ)
(ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರು ಲಗಮಣ್ಣ ಹೋನ್ನಂಗಿ)
(ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜು ಸಿತಿಮನಿ) (ಬೆಳಗಾವಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಲಕ್ಷ್ಮಣ ಬಾಗಡಿ) (ಬೆಳಗಾವಿ ತಾಲೂಕು ಉಪಾಧ್ಯಕ್ಷರು ಶಕ್ತಿ ಕುಮಾರ ಪಿ ಎಸ್) (ಖಾನಾಪುರ ತಾಲೂಕ ಅಧ್ಯಕ್ಷರು ಆನಂದ್ ಊದಿ) (ಖಾನಾಪುರ ತಾಲೂಕು ನಗರ ಸೇವಕ ಹನುಮಂತ ಪೂಜಾರಿ)
(ಸ್ಥಳೀಯ ಯುವ ಮುಖಂಡ ಕುಬೇರ ನಾಯಕ್)
ಪಾಲ್ಗೊಂಡಿದ್ದರು.