23/12/2024
IMG-20240820-WA0063

ಬೆಳಗಾವಿ-೨೦: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಾಕನೂರ ಗ್ರಾಮದಲ್ಲಿ ವಿವಿಧ ಸಂಪರ್ಕ ರಸ್ತೆ ಕಾಮಗಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.

ಕ್ಷೇತ್ರದ ಅಭಿವೃದ್ಧಿ ನಿರಂತರ. ಪ್ರತಿ ಊರಿನಲ್ಲಿ ಒಂದಿಲ್ಲೊಂದು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಅಭಿವೃದ್ಧಿಗೆ ತಕ್ಕಂತೆ ಕ್ಷೇತ್ರದ ಜನರ ಸಹಕಾರವೂ ಅಗತ್ಯ. ಎಲ್ಲರ ಸಹಕಾರವಿದ್ದರೆ ಹೆಚ್ಚು ಹೆಚ್ಚು ಯೋಜನೆಗಳನ್ನು ತರಲು ನನಗೂ ಉತ್ಸಾಹ ಬರುತ್ತದೆ. ಹಾಗಾಗಿ ಉತ್ತಮ ಕೆಲಸಗಳಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಕೇರಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ರಸ್ತೆ ನಿರ್ಮಾಣದ ಕಾಮಗಾರಿಗಳಲ್ಲಿ ಯಾವುದೇ ಲೋಪದೋಷಗಳಾಗದಂತೆ ಎಚ್ಚರವಹಿಸಲು ಗುತ್ತಿಗೆದಾರರಿಗೆ ಸೂಚಿಸಿದರು.

ಈ ಸಮಯದಲ್ಲಿ ಯುವರಾಜ ಕದಂ, ಮನು‌ ಬೆಳಗಾಂವ್ಕರ್, ಸುರೇಶ ನಾಯ್ಕ್, ಪಾಂಡುರಂಗ ನಾಯ್ಕ್, ರಾಮನಿಂಗ ಸಾವಂತ, ಪರಶುರಾಮ ಮಾಜುಕರ್, ಮಾರುತಿ ನಾಯ್ಕ್, ಕೃಷ್ಣ ನಾಯ್ಕ್, ಕಾಳು ನಾಯ್ಕ್, ನಿಂಗು ಕುಲಾಮ್, ರಾಜು ಗಾವಡೆ, ಟೋಪಣ್ಣ ನಾಯ್ಕ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

error: Content is protected !!