ಬೆಳಗಾವಿ-೧೮:ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಜಹಂಸಗಡದ ಯುವಕ ವಿಘ್ನೇಶ್ ಮಹಾದೇವ ಪವಾರ (21) ಭಾನುವಾರ ಚಿಕಿತ್ಸೆ ಫಲಿಸದೆ ನಿಧನರಾದರು.
ವಿಘ್ನೇಶ್ ಪವಾರ ಪತ್ರಕರ್ತ ಮಹಾದೇವ ಪವಾರ ಅವರ ಚಿರಂಜೀವಿ,ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಮೃತ ವಿಘ್ನೇಶ್ ತಮ್ಮ ಹಿಂದೆ ತಂದೆ, ತಾಯಿ ಹಾಗೂ ಓರ್ವ ಸಹೋದರಿ ಸೇರಿದಂತೆ ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ.