23/12/2024
IMG-20240108-WA0001

ಪ್ರತಿಯೊಂದು ಜೀವಿಗು ಭೂಮಿಯ ಮೇಲೆ ಬದಕುವ ಹಕ್ಕಿದೆ ವಿರೇಶ ವಿಶೇಷ ಸಾಮಾಜಿಕ ಕಾಳಜಿ: ಆಧುನಿಕ ಸಮಾಜಕ್ಕೆ ಪ್ರೇರೇಪಣೆ

 

ಇತ್ತೀಚಿನ ದಿನಗಳಲ್ಲಿ ಕೇವಲ ಸ್ವಾರ್ಥ ಬದುಕಿನಲ್ಲಿ ಆಧುನಿಕ ಸಮಾಜ ಮುಖ ಮಾಡುತ್ತಿದ್ದು ನಾನು ನನ್ನ ಕುಟುಂಬ ಆರ್ಥಿಕ ಜೀವನ ಸುಧಾರಣೆ ಆದರೆ ಸಾಕು ಎನ್ನುವ ರೂಡಿಯಿಂದ ಆಧುನಿಕ ಸಮಾಜ ಮುನ್ನಡೆಯುತ್ತಿದೆ.IMG 20240108 WA0000 -

ನಮ್ಮ ಸಮಾಜದಲ್ಲಿ ಸುತ್ತ ಮುತ್ತಲಿನ ವಾತಾವರಣ ಪರಿಸರ ಪ್ರಾಣಿ ಪಕ್ಷಿಗಳ ಅಸ್ತಿತ್ವದ ಬಗ್ಗೆ ಯಾರು ಕಾಳಜಿ ವಹಿಸದೆ ಪರಿಸರ ವಿರೋಧಿ ಚಟುವಟಿಕೆಗಳು ನಡೆಯುತ್ತಿರುವ ಸಮಾಜದಲ್ಲಿ ಸುಸ್ಥಿರ ಅಭಿವೃದ್ಧಿಯ ಗಮನ ತಿರಾ ವಿರಳವಾಗಿದೆ.

IMG 20240108 WA0010 -

ಇಂತಹದರ ಮಧ್ಯ ನಾವು ಇವತ್ತಿಗೆ ಒಬ್ಬ ವಿಶೇಷ ವ್ಯಕ್ತಿಯ ಬಗ್ಗೆ ನಾವು ತಿಳಿದುಕೊಳ್ಳನ ಕೇವಲ ಜನ ಸೇವೆ ಮಾತ್ರವಲ್ಲದೆ ಇಡೀ ಪ್ರಾಣಿ ಜೀವಿ ಸಂಕುಲಕ್ಕು ಇವರ ಸೇವೆ ವ್ಯಾಪಿಸಿದೆ‌.

ಬೆಳಗಾವಿ ನಗರದಲ್ಲಿನ ವಿರೇಶ ಹಿರೇಮಠ ಇವರು ಪರಿಸರ ಪ್ರೇಮಿ ಸಮಾಜ ಮುಖಿ ಕಾರ್ಯ ಹಾಗೂ ಧಾರ್ಮಿಕ ಆಚರಣೆಯ ವಿಶೇಷ ಕಾಳಜಿ ನೋಡಿದರೆ ಎಂತವರು ಪ್ರೇರೇಪಣೆ ಯಾಗುವುದರಲ್ಲಿ ಎರಡು ಮಾತಿಲ್ಲ.

ವೃತ್ತಿಯಿಂದ ವಿರೇಶ ಹಿರೇಮಠ ಇವರು ನಗರದ ಪ್ರತಿಷ್ಠಿತ ಆಸ್ಪತ್ರೆಯಾದ ವಿಜಯಾ ಆರ್ಥೋ ಆಂಡ್ ಟ್ರೋಮಾ ಸೆಂಟರ್ ನಲ್ಲಿ ಸಾರ್ವಜನಿಕ ಸಂಪರ್ಕದ ಮುಖ್ಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಇದರ ಜೊತೆಗೆ ಇವರ ಮಾಡುವ ಸಮಾಜ ಮುಖಿ ಕೆಲಸ ಎಂತವರ ಮನ ಮೆಚ್ಚುವಂತಹದ್ದು.

ಈಗಾಗಲೇ ಇವರಿಗೆ ಹಲವಾರು ಜಿಲ್ಲಾ ಹಾಗೂ ರಾಜ್ಯ ಮಟ್ಟದ ವಿಶೇಷ ಪ್ರಶಸ್ತಿಗಳು ದೊರೆತ್ತಿದ್ದು ಜಿಲ್ಲೆಯಲ್ಲಿ ಇವರ ಸಮಾಜ ಮುಖಿ ಕೆಲಸ ಗಮನಿಸಿ ಇವರಿಗೆ ಜಿಲ್ಲಾಡಳಿತ ಸಾಮಾಜಿಕ ಗೌರವ ಪ್ರಶಸ್ತಿ ಕೂಡ ಇವರಿಗೆ ನೀಡಿದೆ.

ವಿರೇಶ ವಿಶೇಷ ಸಾಮಾಜಿಕ ಕಾರ್ಯಗಳು:

ಮನೆಯಲ್ಲಿ ಬೇಡವಾಗಿರುವ ಹಿಂದೂ ಧರ್ಮದ ದೇವರ ಮೂರ್ತಿ, ಫೋಟೊಗಳನ್ನು ಜನರು ಗಿಡಮರಗಳು ಕೆಳಗಡೆ ಇಟ್ಟು ಹೋಗಿರುವಂತಹ ಪೋಟೋ ಗಳನ್ನ ಸಂಗ್ರಹಿಸಿ ಅದರಲ್ಲಿನ ಪ್ರೆಮ್ ಗಳನ್ನ ಮರು ಜೋಡಿಸಿ ದೇವಸ್ಥಾನಗಳಲ್ಲಿ ಅಳವಡಿಸುತ್ತಾರೆ. ಅದೇ ರೀತಿ ವಿರೂಪ ಗೊಂಡಿರುವ ಪೋಟೋ ಪ್ರೇಮಗಳನ್ನ ಶಾಸ್ತ್ರದ ಪ್ರಕಾರ ಪೂಜೆ ಮಾಡಿ ನದಿಗಳಿಗೆ ವಿಸರ್ಜನೆ ಮಾಡಿ ಬರುತ್ತಾರೆ.

ಜಿಲ್ಲೆಯಲ್ಲಿ ಇವರು ಸಂಚರಿಸಿ ಪ್ರಕೃತಿ ಉಳಿವಿಗಾಗಿ ಇಲ್ಲಿಯ ತನಕ ಸಾವಿರಾರು ಗಿಡಗಳನ್ನು ನೆಟ್ಟು ಪರಿಸರದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು ಅದರ ನೀರಿನ ಪಾಲನೆ ಪೋಷಣೆ ಸಹ ತಮ್ಮ ಬಿಡುವಿನ ಸಮಯದಲ್ಲಿ ನಿರ್ವಹಣೆ ಮಾಡುತ್ತಾರೆ.

ಇವರ ಇನ್ನೊಂದು ವಿಶೇಷವಾದ ಸಮಾಜಮುಖಿ ಕಾರ್ಯವೆನೆಂದರೆ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಶ್ವಾನ್, ಪಕ್ಷಿಗಳು ಅಪಘಾತಕ್ಕಿಡಾಗಿ ಗಾಯಗೊಂಡಿರುವ ಪ್ರಾಣಿಗಳನ್ನು ರಕ್ಷಣೆ ಮಾಡಿ ಚಿಕಿತ್ಸೆ ನೀಡುತ್ತಾರೆ. ಅದೇ ರೀತಿ ರಸ್ತೆಯಲ್ಲಿ ಅಪಘಾತಕ್ಕಿಡಾಗಿ ಮರಣ ಹೊಂದಿರುವ ಪ್ರಾಣಿಗಳನ್ನು ವಿಧಿವತ್ತಾಗಿ ಸಂಸ್ಕಾರ ಮಾಡವಂಹ ಜವಾಬ್ದಾರಿ ಇವರ ವಿಶೇಷ ಕಾರ್ಯವಾಗಿದೆ.

ಯಾವುದೇ ಫಲಾಪೇಕ್ಷ ಬಯಸದೆ ಇವರು ಈ ಎಲ್ಲಾ ಕರ್ತವ್ಯ ಗಳನ್ನು ನಿರ್ವಹಣೆ ಮಾಡುತ್ತಿರುವದರಿಂದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇವರು ಮಾಡುವ ಸಮಾಜಮುಖಿ ಸಾಮಾಜಿಕ ಜವಾಬ್ದಾರಿಯು ಒಂದೆರಡಲ್ಲ ಇವರು ತಮ್ಮ ಇಡೀ ಜೀವನವನ್ನೇ ಸಮಾಜಮುಖಿ ಕಾರ್ಯಕ್ಕಾಗಿ ಮೀಸಲಿಟ್ಟದ್ದು ಎಂತವರು ಇವರ ಕಾರ್ಯ ನೋಡಿ ಪ್ರೇರೆಪಣೆಯಾಗುವದರಲ್ಲಿ ಎರಡು ಮಾತಿಲ್ಲ.

ಯುವಕರು ದೇಶದ ಶಕ್ತಿ: ಇತ್ತೀಚಿನ ದಿನಗಳಲ್ಲಿ ಯುವಕರು ದುಷ್ಚಟಕ್ಕೆ ಬಲಿಯಾಗುತ್ತಿದ್ದು ಅದರಿಂದ ಹೊರಗಡೆ ಬಂದು ತಮ್ಮನ್ನು ತಾವು ಸಮಾಜಮುಖಿ ಕಾರ್ಯದಲ್ಲಿ ತೋಡಗಿಸಿಕೊಳ್ಳಬೇಕು ಮುಂದಿನ ಪೀಳಿಗೆಗೆ ನಾವು ನಮ್ಮ ಇಡೀ ಪರಿಸರವನ್ನು ಸ್ವಾಸ್ಥ್ಯ ಬದ್ದವಾಗಿ ಉಳಿಸಿಕೊಳ್ಳುವುದು ಮುಖ್ಯವಾಗಿದೆ.

error: Content is protected !!