11/01/2025 12:28:50 AM
IMG-20240107-WA0041

ಬೆಳಗಾವಿ-07 : ಒಂದು ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಯು ಬೆಳೆಯಬೇಕೆಂದರೆ ಆ ಸಂಸ್ಥೆಯ ಆಡಳಿತ ಪಾರದರ್ಶಕತೆ ಹೊಂದಿರಬೇಕು ಹಾಗೂ ಸಮಾಜದ ನಂಬಿಕೆಯಿAದ ಕೂಡಿರಬೇಕು. ಆಗ ಮಾತ್ರ ಒಂದು ಒಳ್ಳೆಯ ಶಿಕ್ಷಣ ಸಂಸ್ಥೆ ಬೆಳೆಯಬಹುದು ಎಂದು ಹಿರಿಯ ನ್ಯಾಯವಾದಿ ಹಾಗೂ ಅಕಾಡೆಮಿ ಆಫ್ ಕಂಪ್ಯಾರೇಟಿವ್ ಫಿಲಾಸಫಿ ಅಂಡ್ ರಿಲಿಜನ್ (ಎಸಿಪಿಆರ್) ಕಾರ್ಯದರ್ಶಿ ಎಂ.ಬಿ,.ಝಿರಲಿ ಅವರು ಅಭಿಪ್ರಾಯಪಟ್ಟರು.

ಶುಕ್ರವಾರ ಸಾಯಂಕಾಲ ಭರತೇಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ದಿ.ಕೊಮಲಣ್ಣಾ ದೊಡ್ಡಣ್ಣವರ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ೧೫ ನೇ ಸಂಸ್ಥಾಪಕರ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು ಒಳ್ಳೆಯ ಗುಣಗಳನ್ನು ಹೊಂದಿದ ಸಂಸ್ಥೆಯ, ಉತ್ತಮ ಆಡಳಿತಗಾರರು, ಹಾಗೂ ಪಾರದರ್ಶಕತೆಯ ಮೂಲಕ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಭರತೇಶ ಶಿಕ್ಷಣ ಸಂಸ್ಥೆಯು ಕಳೆದ ೬೦ ವರ್ಷಗಳಿಂದ ನಿರಂತರ ಜ್ಞಾನಾರ್ಜನೆ ಕಾರ್ಯ ಮಾಡುತ್ತ ಬಂದಿದ್ದು, ಇಂದು ಉತ್ತರ ಕರ್ನಾಟಕದಲ್ಲಿ ಅತ್ಯಂತ ವಿಶ್ವಾಸಾರ್ಹ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಅವರು ತಿಳಿಸಿದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ನಿಡಸೋಶಿ ಮಠದ ಡಾ.ನಿಜಲಿಂಗೇಶ್ವರ ಸ್ವಾಮೀಜಿಗಳು ಆರ್ಶಿವಚನ ನೀಡುತ್ತ , ತಾವು ಮಂಗಳೂರಿನಲ್ಲಿದ್ದಾಗ ಸ್ವಚ್ಛ ಭಾರತ ಅಭಿಯಾನವನ್ನು ಕೈಗೊಂಡ ಹಿನ್ನಲೆಯಲ್ಲಿ ಇಂದಿಗೂ ಸಹ ಮಂಗಳೂರು ನಗರ ಸ್ವಚ್ಛವಾಗಿದೆ. ಎಲ್ಲರೂ ಸಹ ಸ್ವಚ್ಛತೆ ಕಡೆ ಹೆಚ್ಚಿನ ನೀಡುವುದರಿಂದ ಆರೋಗ್ಯವಂತ ಸಮಾಜವನ್ನು ನಿರ್ಮಿಸಬಹುದು ಎಂದು ಹೇಳಿದ ಅವರು ನಿಡಸೋಶಿಯಲ್ಲಿ ಕೈಗೊಂಡ ವಿವಿಧ ಉಪಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಸಮಾರಂಭದಲ್ಲಿ ಪ್ರತಿ ವರ್ಷದಂತೆ, ಅತ್ಯುತ್ತಮ ಶಿಕ್ಷಕ, ಶಿಕ್ಷಕೇತರ, ಸಹಾಯಕ ಸಿಬ್ಬಂದಿ, ಡಾಕ್ಟರೇಟ್, ನಿವೃತ್ತ ಸಿಬ್ಬಂದಿ, ೨೫ ವರ್ಷಗಳ ಸೇವೆ, ಹಳೆಯ ವಿದ್ಯಾರ್ಥಿಗಳು, ಭರತೇಶ್ ಗೌರವ್ ಮತ್ತು ಜೀವಮಾನ ಸಾಧನೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿಶಿಷ್ಟ ಸೇವೆಗಾಗಿ ಭರತೇಶ್ ಸಂಸ್ಥೆಯ ವಿವಿಧ ಸಿಬ್ಬಂದಿಗೆ ನಗದು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಡಾ.ಜಿನದತ್ತ ದೇಸಾಯಿ ಅವರು ವಹಿಸಿ ಅಧ್ಯಕ್ಷೀಯ ಭಾಷಣ ಮಾಡಿದರು. ಸಂಸ್ಥೆಯ ಉಪಾಧ್ಯಕ್ಷ ಶ್ರೀಪಾಲ ಖೆಮಲಾಪೂರೆ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಡಾ.ಸಾವಿತ್ರಿ ದೊಡ್ಡಣ್ಣವರ ಅತಿಥಿಗಳನ್ನು ಸ್ವಾಗತಿಸಿದರು. ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹೀರಾಚಂದ ಕಲಮನಿ ಮತ್ತು ಅನುಪಮಾ ಶಿರಹಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಅಶೋಕ ದಾನವಾಡೆ ವಂದಿಸಿದರು. ಸಾಮಾನ್ಯ ಸಭೆಯ ಸದಸ್ಯರು, ಆಡಳಿತ ಸದಸ್ಯರು, ಹಿತೈಷಿಗಳು, ಆಹ್ವಾನಿತರು, ಅತಿಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

error: Content is protected !!