23/12/2024
IMG-20240803-WA0007

ಬೈಲಹೊಂಗಲ-03: ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ ಮತ್ತು ಬಾಗಲಕೋಟ ಜಿಲ್ಲೆಗಳ ಸಾವಿರಾರು ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ರೇಣುಕಾ ಸಾಗರ ಜಲಾಶಯ ಮಲಪ್ರಭಾ ನದಿ ಮೈದುಂಬಿಕೊಂಡಿದ್ದರ ಪ್ರಯುಕ್ತವಾಗಿ ಅಗಷ್ಟ್ 5 ಸೋಮವಾರದಂದು ಮುಂಜಾನೆ 10.30 ಘಂಟೆಗೆ ನಯಾನಗರ ಸೇತುವೆಯ ಹತ್ತಿರ ಜಾಲಿಕೊಪ್ಪದ ತಪೋ ಕ್ಷೇತ್ರದ ಪೂಜ್ಯ ಶಿವಾನಂದ ಗೂರೂಜಿಯವರ ಸಾನಿಧ್ಯದಲ್ಲಿ ಸಮಸ್ತ ರೈತ ಸಮುದಾಯ ಬಾಗಿನ ಅರ್ಪಿಸಲಿದ್ದಾರೆ.
ಈ ನಾಡಿನ ರೈತ ಸಮುದಾಯಕ್ಕೆ ನೀರಾವರಿ ಕಲ್ಪಿಸಿ ಎಲ್ಲರನ್ನ ಆರ್ಥಿಕವಾಗಿ ಸದೃಡತೆ ಕಲ್ಪಿಸಿದ ತಾಯಿ ಮಲಪ್ರಭೆಯ
ಮಡಿಲಿನಲ್ಲಿರುವ ನದಿ ಪಾತ್ರದ ಸಮಸ್ತ ಜನತೆ ಹೆಚ್ಷಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜೀವ ಜಲದ ಆಧಾರವಾಗಿರುವ ತಾಯಿ ಮಲಪ್ರಭೆಗೆ ಕೃತಜ್ಞತೆ ಸಲ್ಲಿಸುವಂತೆ ರಾಜ್ಯ ರೈತ ಸಂಘ ಹಾಗೂ ಕೃಷಿ ಕೂಲಿ ಕಾರ್ಮಿಕರ ಹಿತರಕ್ಷಣಾ ಸಂಘದ ಅಧ್ಯಕ್ಷ ಮಹಾಂತೇಶ ಕಮತ ಹಾಗೂ ಸವದತ್ತಿ ಎಪಿಎಂಸಿ ಮಾಜಿ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!