23/12/2024
IMG-20240809-WA0012

ಅಥಣಿ-10 : ಶ್ರಾವಣ ಮಾಸದಲ್ಲಿ ಮೊದಲಿಗೆ ಬರುವ ನಾಗರ ಪಂಚಮಿ ಹಬ್ಬವನ್ನು ಅಥಣಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಅಥಣಿ ಸಿದ್ದೇಶ್ವರ ದೇವಸ್ಥಾನದ ಹತ್ತಿರ ಇರುವ ನಾಗಮಂದಿರದಲ್ಲಿ ನಾಗದೇವತೆಗೆ ವಿಶೇಷ ಪೂಜೆ, ರುದ್ರಾಭಿಷೇಕ, ಹಾಲು ಎರೆಯುವ ಕಾರ್ಯಕ್ರಮ ಜರುಗಿದವು.

ಮಹಿಳೆಯರು ಹೊಸ ಉಡುಗೆಗಳನ್ನು ಕೊಟ್ಟು ನಾಗ ದೇವರಿಗೆ ಸಂಪ್ರದಾಯದಂತೆ ಹಾಲೆರೆದು, ಎಳ್ಳು, ಉಂಡಿ, ಕಡಬ, ಹೋಳಿಗೆ ತಯಾರಿಸಿ ನೈವೇದ್ಯ ಸಮರ್ಪಿಸಿದರು.

ಪಟ್ಟಣದ ಶಿವಯೋಗಿ ವೃತ್ತದಲ್ಲಿರುವ ಶ್ರೀ ನಾಗದೇವತಾ ಮಂದಿರದಲ್ಲಿ ವಿಶೇಷ ಪೂಜೆ, ಅಭಿಷೇಕ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಮುತ್ತು ರಾತ್ರಿ ಮನೋರಂಜನ ಕಾರ್ಯಕ್ರಮ ಜರುಗಿದವು.

ಜೋಕಾಲಿ ಜಿಕಿ ಸಂಭ್ರಮಿಸಿದ ಮಹಿಳೆಯರು : ಎತ್ತರವಾದ ಗಿಡಗಳಿಗೆ ಮತ್ತು ಕಂಬಗಳನ್ನು ನಿಲ್ಲಿಸಿ ಕಟ್ಟಲಾಗಿರುವ ಹಗ್ಗದ ಜೋಕಾಲಯನ್ನು ಜೀಕುವ ಮೂಲಕ ಮಹಿಳೆಯರು ಸಂಭ್ರಮಿಸಿದರು.

ಯುವಕರು ಜೋಕಾಲಿ ಜಿಕೂವುದು, ಗಾಳಿಪಟ ಹಾರಿಸುವುದು, ದೂರಕ್ಕೆ ಲಿಂಬೆಹಣ್ಣು ಎಸೆಯುವುದು, ಕಣ್ಣು ಕಟ್ಟಿಕೊಂಡು ಗುರುತು ಪಡಿಸಿದ ಸ್ಥಳಕ್ಕೆ ಹೋಗುವುದು ಇನ್ನಿತರ ಮನರಂಜನ ಆಟಗಳನ್ನು ಆಡುವ ಮೂಲಕ ಪಂಚಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು ಎಂದು ತಿಳಿದುಬಂದಿದೆ.

error: Content is protected !!