ಬೆಳಗಾವಿ-10:”ಕ್ವಿಟ್ ಇಂಡಿಯಾ ಮೂಮ್ಮೆಂಟ್” ನೆನಪಿಗಾಗಿ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ಕಾಂಗ್ರೆಸ್ ಭವನದಲ್ಲಿ “ಕ್ರಾಂತಿ ಜ್ಯೋತಿ” ದಿನಾಚರಣೆಯನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ವಿನಯ ನಾವಲಗಟ್ಟಿ ಅವರ ನೇತೃತ್ವದಲ್ಲಿ ಆಚರಿಸಲಾಯಿತು. ಮೋಹನ್ ರಡ್ಡಿ, ರಾಜೇಂದ್ರ ಪಾಟೀಲ್, ಇಮ್ರಾನ್ ತಪಾಕಿರೆ, ವಿಕಿ ಸಿಂಗ್, ಮಾರುತಿ ಜೋಇ, ರಾಜು ಸಿಂಘ, ಅಕ್ಟರ್ ಸಡೇಕರ್ ಹಾಗು ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಂದು ಭಾರತವನ್ನು ಸ್ವತಂತ್ರ ಮಾಡಲು ಹಿರಿಯರು “ಭಾರತ್ ಛೋಡೋ ಆಂದೋಲನ” ಮಾಡಿದರು. ಇಂದು ಭಾರತದ ಜನರ ಮನಸ್ಸುಗಳನ್ನ ಒಂದು ಮಾಡಲು “ಭಾರತ್ ಜೋಡೋ ” ಆಂದೋಲನ ವನ್ನ ಭಾರತದಾ ಧ್ಯಂತ ಪಾದಯಾತ್ರೆ ಮುಖಾಂತರ ನಮ್ಮ ನಾಯಕ ರಾಹುಲ್ ಗಾಂಧಿ ಯವರು ಮಾಡಿದರು. ನಾವು ಜನರನ್ನ ಕೂಡಿಸುವ ಕೆಲಸ ಮಾಡಿದರೆ ವಿರೋಧಿ ಗಳೂ ಒಡೆಯುವ ಕೆಲಸ ಮಾಡುತ್ತಾರೆ. ಇದನ್ನ ನಾವೆಲ್ಲರೂ ಒಕ್ಕೊರಲಿನಿಂದ ಖಂಡಿಸ ಬೇಕು ಎಂದು ವಿನಯ ನಾವಲಗಟ್ಟಿ ಸಭೆಯಲ್ಲಿ ಮಾತನಾಡಿದರು.