ಬೈಲಹೊಂಗಲ-01:ಭಾರತಾಂಭೆಯ ರಕ್ಷಣೆಗೆ ಸೇರಿದ ಸೈನಿಕರ ಜೀವನ, ದೇಶಕ್ಕಾಗಿ ಸಮರ್ಪಿತವಾಗಿರುತ್ತದೆ. ವೈರಿಗಳ ಗುಂಡಿನ ಕಾಳಗದಲ್ಲಿ ಜೀವವನ್ನು ಪಣಕ್ಕಿಟ್ಟು ಸತತ ಹೋರಾಟಮಾಡುವ ಅವರ ಧೈರ್ಯ, ಶೌರ್ಯ ಮತ್ತು ಅವರ ಸಾಹಸ ಸಮಾಜಕ್ಕೆ ಮಾರ್ಗದರ್ಶನವಾಗಿವೆ ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.
ಪಟ್ಟಣದ ವಿಜಯ ಸೋಶಿಯಲ್ ಕ್ಲಬ್ ದಲ್ಲಿ ನಡೆದ ಕ್ಯಾಪ್ಟನ್ ಸುಭಾಷ್ ಕೊಳ್ಳಿ ಅವರು 30ವರ್ಷಗಳ ಕಾಲ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ನಿಮಿತ್ಯ ಹಮ್ಮಿಕೊಂಡಿದ್ದ ಸೇವಾನಿವೃತ್ತ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ತಾಯ್ನಾಡಿನ ರಕ್ಷಣೆಗಾಗಿ ಸೈನ್ಯ ಸೇರಿ ಸೇವಾ ನಿವೃತ್ತಿಯವರೆಗೆ ಸುದೀರ್ಘವಾಗಿ ವೈರಿಗಳ ಜೋತೆ ಸದಾ ಹೋರಾಟ ನಡೆಸಿ ಸುರಕ್ಷಿತವಾಗಿ ಮನೆಗೆ ಬಂದ ನಂತರ ತಮ್ಮ ಕುಟುಂಬದ ಜೋತೆ ಸುಖಜೀವನ ನಡೆಸುವದರೊಂದಿಗೆ ಸಮಾಜ ಸೇವೆಗೆ ಸೈನಿಕರ ಬದುಕು ಮುಡಿಪಾಗಿರಬೇಕು. ತಂದೆ, ತಾಯಿ ಹೆಂಡತಿ ಮಕ್ಕಳು ಹಾಗೂ ಬಂಧುಗಳ ಪ್ರೀತಿ ವಾತ್ಸಲ್ಯದಿಂದ ವಂಚಿತವಾದರು ದೇಶ ಸೇವೆ ಮಾಡುವ ಮಹಾದಾಸೆಯಿಂದ ಭಾರತಾಂಭೆಯ ರಕ್ಷಣೆಗಾಗಿ ಸೈನ್ಯ ಸೇರುವ ಸೈನಿಕರ ಶಿಸ್ತು ಬದ್ದ ಜೀವನ ನಾಗರಿಕ ಸಮಾಜದಲ್ಲಿ ಬದುಕುವ ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾದದ್ದು. ಅವರ ಸಮಯ ಪ್ರಜ್ಞೆ ಕೆಲಸದ ಅಚ್ಚುಕಟ್ಟುತನ, ದೇಹ ದೃಢತೆಯ ಉತ್ತಮ ಆರೋಗ್ಯವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ದಿನದ 24 ಘಂಟೆಗಳ ಕಾಲ ಗಡಿಯಲ್ಲಿ ಮಳೆ, ಮೈ ಕೊರೆಯುವ ಮೈನಸ್ 24ಡಿಗ್ರಿ ಚಳಿಯಲ್ಲಿ 48ಡಿಗ್ರಿ ಬಿಸಿಲಿನಲ್ಲಿ ಸದಾ ಗಡಿಕಾಯುವ ಫಲದಿಂದ ಇಂದು ದೇಶದ ಜನತೆ ನೆಮ್ಮದಿ ಜೀವನ ಸಾಗಿಸುತಿದ್ದೆವೆ. ಪ್ರಪಂಚದಲ್ಲಿ ಇಂದು ಭಾರತದ ಸೈನ್ಯ ಅತ್ಯಂತ ಉಚ್ಚಸ್ಥಿತಿಗೆ ಬಂದಿದೆ. ಅಂತಹ ಬಲಾಡ್ಯ ಸೈನ್ಯದಲ್ಲಿ ಸಿಪಾಯಿಯಾಗಿ ಕ್ಯಾಪ್ಟನ್ ಹುದ್ದೆಯವರೆಗೆ ಸೈನ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಪಟ್ಟಣಕ್ಕೆ ಆಗಮಿಸಿದ ಸುಭಾಷ ಕೊಳ್ಳಿಯವರ ನಿವೃತ್ತಿ ಜೀವನ ಸುಖಸಮೃದ್ದಿಯಿಂದ ಕೂಡಿರಲಿ. ಸೈನ್ಯ ಸೇರಲು ಬಯಸುವ ಯುವಕರಿಗೆ ಹಾಗೂ ಸೈನ್ಯದಲ್ಲಿರುವ ಸೈನಿಕರ ಪದನ್ನೋತ್ತಿಗೆ ಅವರ ಮಾರ್ಗದರ್ಶನ ನೀಡಲಿ. ಸಮಾಜಕ್ಕೆ ಅವರ ಸೇವೆ ಅತ್ಯಂತ ಅವಶ್ಯಕವಾಗಿದ್ದು ಆ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಲಿ ಎಂದರು.
ಮಾಜಿ ಪುರಸಭಾಧ್ಯಕ್ಷ ರಾಜು ಜನ್ಮಟ್ಟಿ, ಶಿಕ್ಷಕ ದೊಡ್ಡನಾಯ್ಕ ಜಿಡ್ಡಿಮನಿ, ಮಲ್ಲಿಕಾರ್ಜುನ ಕೊಳ್ಳಿ ಮಾತನಾಡಿ,
ದೇಶದಲ್ಲಿ ರಕ್ಷಣೆಗಾಗಿ ಸೈನಿಕ, ಅನ್ನಕ್ಕಾಗಿ ರೈತ, ಆರೋಗ್ಯಕ್ಕಾಗಿ ವೈಧ್ಯ ಮತ್ತು ಶಿಕ್ಷಣಕ್ಕಾಗಿ ಶಿಕ್ಷಕರು ಸಲ್ಲಿಸುವ ಇವರ ಕಾರ್ಯಾ ಅತ್ಯಂತ ಶ್ಲಾಘನೀಯ ಎಂದರು.
ವೇದಿಕೆಯ ಮೇಲೆ ಕ್ಯಾಪ್ಟನ್ ಸುಭಾಷ ಅವರ ತಂದೆ, ತಮ್ಮಣ್ಣ ತಾಯಿ ನೀಲವ್ವ, ಅವರ ಧರ್ಮಪತ್ನಿ
ಮಾಜಿ ಸೈನಿಕರ ಸಮನ್ವಯ ಸಮೀತಿ ಅಧ್ಯಕ್ಷ ಬಿ.ಬಿ.ಬೋಗೂರ,ಚನ್ನಬಸಪ್ಪ ದಳವಾಯಿ, ಪಾರವ್ವ ದಳವಾಯಿ ಇದ್ದರು.
ಪಟ್ಟಣದ ಪ್ರಮುಖ ಬಿದಿಯಲ್ಲಿ ತೆರೆದ ಜೀಪಿನಲ್ಲಿ ನಿವೃತ್ತ ಕ್ಯಾಪ್ಟನ್ ಸುಭಾಷ ಹಾಗೂ ಧರ್ಮಪತ್ನಿ ಮಂಜುಳಾ ದಂಪತಿಗಳ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಮಾಜಿ
ಯೋಧರು, ಕೊಳ್ಳಿ ಬಂಧುಗಳು ಸಾಥ ನೀಡಿದರು.
ವಿನಾಯಕ ದೇಶನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವಂತಪ್ಪ ತೊರಗಟ್ಟಿ ಸ್ವಾಗತಿಸಿದರು.
ಶಿಕ್ಷಕ ಮಹಾಂತೇಶ ಪಿರಗೊಜಿ
ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ರವಿ ಪರವಿನಾಯ್ಕ, ಮಲ್ಲಪ್ಪ ದಳವಾಯಿ, ಚನ್ನಬಸಪ್ಪ ತಲ್ಲೂರ, ಸೋಮಪ್ಪ ತೊರಣಗಟ್ಟಿ, ಸೋಮಪ್ಪ ವಾಳದ, ಟಿ.ಬಿ.ಮಾವಿನಕಟ್ಟಿ, ಮಂಜುನಾಥ ಬಾಗೆವಾಡಿ, ಯಲ್ಲಪ್ಪ ಗಡದವರ, ರುದ್ರಪ್ಪ ಪೀರಗೋಜಿ, ದೇಮಪ್ಪ ಶಿರಗಾಂವಿ, ಸುರೇಶ ಕಮ್ಮಾರ, ಶೇಖರ ನವಲಗಟ್ಟಿ, ಶಂಕರ ಬೇವಿನ, ಬಸವಾಣೆಪ್ಪ ಹೊಂಗಲ, ಬಸವರಾಜ ತಲ್ಲೂರ, ಬಸಪ್ಪ ಚಂಡೂರಿ, ಈರಪ್ಪ ಗಾಳಿ, ಮಲ್ಲಿಕಾರ್ಜುನ ಹಡಸನ್ನವರ, ಎಲ್.ಎಸ್.ಪಾಟೀಲ, ಚನ್ನಪ್ಪ ಬೇವಿನಕೊಪ್ಪ, ಮಲ್ಲವ್ವ ಕಾಡನ್ನವರ , ಬಿ.ಬಿ.ವಾಲಿಕಾರ, ಎಮ್.ಆಯ್.ಕುಂಬಾರ, ಜಿ.ಎಸ್.ಸಾಧೂನವ ಸೇರಿದಂತೆ
ನೂರಾರು ನಿವೃತ್ತ ಸೈನಿಕರು ನೂರಾರು ಜನ ಸಾರ್ವಜನಿಕರು ಉಪಸ್ಥಿತಿರಿದ್ದರು.