09/01/2025 11:36:21 PM
IMG-20240801-WA0006

* *ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ ಯುವ ನಾಯಕ*
ಗೋಕಾಕ-01: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಗೋಕಾಕ್ ನಗರದ ಲೋಳಸರ್ ಬ್ರಿಡ್ಜ್ ಹಾಗೂ ನಗರದೊಳಗೆ ನೀರು ಆವರಿಸಿರುವ ಸ್ಥಳಗಳಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿದ ಮೃಣಾಲ್ ಮಾಹಿತಿ ಪಡೆದರು.

ಮಳೆಯಿಂದ ಆಗಿರುವ ನಷ್ಟದ ಬಗ್ಗೆ ಮಾಹಿತಿ ಪಡೆದ ಮೃಣಾಲ್ ಹೆಬ್ಬಾಳಕರ್, ಸಂಕಷ್ಟದಲ್ಲಿರುವ ಜನರಿಗೆ ಧೈರ್ಯ ತುಂಬಿದರು. ಮನೆಮಠ ಕಳೆದುಕೊಂಡಿರುವ ಸಂತ್ರಸ್ಥರು ಮೃಣಾಲ್ ಹೆಬ್ಬಾಳಕರ್ ಅವರ ಬಳಿ ಅಳಲು ತೋಡಿಕೊಂಡರು. ಸಂಕಷ್ಟದಲ್ಲಿರುವ ಜನರಿಗೆ ಸರ್ಕಾರ ಎಲ್ಲಾ ರೀತಿಯಲ್ಲೂ ನೆರವು ನೀಡುತ್ತಿದ್ದು, ಮಳೆ ನಿಂತ ಬಳಿಕ ಮತ್ತಷ್ಟು ಪರಿಹಾರ ಒದಗಿಸುವ ಭರವಸೆ ನೀಡಿದರು.

ಆರೋಗ್ಯದ ಕಾಳಜಿ ವಹಿಸುವಂತೆ ಸಂತ್ರಸ್ಥರಿಗೆ ಮನವಿ ಮಾಡಿದ ಮೃಣಾಲ್ ಹೆಬ್ಬಾಳಕರ್, ಮಕ್ಕಳೊಂದಿಗೆ ಕೆಲಕಾಲ ಬೆರತು ಭರವಸೆ ತುಂಬಿದರು. “ಸಂಕಷ್ಟದಲ್ಲಿರುವ ಜನರಿಗೆ ಸರ್ಕಾರ ಎಲ್ಲಾ ರೀತಿಯಲ್ಲೂ ನೆರವು ನೀಡುತ್ತಿದ್ದು, ಜನರು ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಬೇಕು’ ಎಂದು ಮೃಣಾಲ್ ಹೆಬ್ಬಾಳಕರ್ ಮನವಿ ಮಾಡಿದರು.

ಈ ವೇಳೆ ಗೋಕಾಕ್ ಕಾಂಗ್ರೆಸ್ ಮುಖಂಡ ಡಾ.ಮಹಾಂತೇಶ್ ಕಡಾಡಿ, ಚಂದ್ರಶೇಖರ ಕೊಣ್ಣೂರ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

error: Content is protected !!