23/12/2024
IMG-20240730-WA0005

ಬೆಳಗಾವಿ-30:ಕ್ಯಾಲ್ಸಿಯಂಯುಕ್ತ ಉತ್ತಮ ಪೌಷ್ಠಿಕ ಆಹಾರ ಕೊರತೆಯಿಂದ ವಿವಿಧ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಜನತೆ ಆಹಾರ ವಿಹಾರದ ಕಡೆಗೆ ಹೆಚ್ಚಿನ‌ ಗಮನ ಕೊಡುವುದು ಇಂದಿನ ಅವಶ್ಯಕತೆ ಎಂದು ಶ್ರೀ ಆರ್ಥೋ ವೈದ್ಯಕೀಯ ನಿರ್ದೇಶಕ ಐ. ದೇವಗೌಡ ತಿಳಿಸಿದರು.

ನಗರದ ಮಚ್ಛೆ KSRP ಮೈದಾನದಲ್ಲಿ ಪೊಲೀಸ್ ಸಿಬ್ಬಂಧಿ ಹಾಗೂ ಕುಟುಂಬಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ಯಾಲ್ಸಿಯಂಯುಕ್ತ ಪೌಷ್ಠಿಕಾಂಶ ಕೊರತೆಯಿಂದ ಬೆನ್ನುನೋವು, ಮೊಣಕಾಲು ನೋವು, ನರದೌರ್ಬಲ್ಯ, ಅಶಕ್ತತನದಂತಹ ಹಲವಾರು ರೋಗ ಸಮಸ್ಯೆಗಳು ಉಂಟಾಗುತ್ತವೆ ಎಂದು ದೇವಗೌಡ ತಿಳಿಸಿದರು.
ಉತ್ತಮ ಆಹಾರ ವಿಹಾರ ಇಲ್ಲದೇ ಇದ್ದರೆ ಸಕ್ಕರೆ ಕಾಯಿಲೆ, ಬೊಜ್ಜುತನ, ಹೃದಯರೋಗ, ಗ್ಯಾಸ್ಟ್ರಿಕನಂತಹ ಹೊಟ್ಟೆರೋಗಗಳೂ ಕಾಡುತ್ತವೆ.
ಪೌಷ್ಠಿಕಯುಕ್ತ ಸಂಪೂರ್ಣ ಆಹಾರ ಸೇವಿಸಿ, ದಿನನಿತ್ಯ ನಿಯಮಿತ ನಡಿಗೆ ವ್ಯಾಯಾಮ ರೂಢಿಸಿಕೊಳ್ಳಬೇಕು, ವ್ಯಾಯಾಮದ ಜೊತೆಗೆ ಪುಷ್ಕಳ ಆಹಾರವಿದ್ದರೆ ಮಾತ್ರ ಎಲುಬಿನ ಆರೋಗ್ಯ ಗುಣಮಟ್ಟ ಸುಧಾರಿಸಲು ಸಾಧ್ಯ ಎಂದು ಕರೆ ನೀಡಿದರು.
ಸುಮಾರು ಎರಡುನೂರಕ್ಕೂ ಹೆಚ್ಚು ಸಿಬ್ಬಂಧಿಗೆ ಎಲುಬು ಸಾಂದ್ರತೆ ( Bone Mineral Density Test) ಪರೀಕ್ಷೆ ನಡೆಸಲಾಯಿತು.
ಕೆಎಸ್ ಆರ್ ಪಿ ಸಹಾಯಕ ಕಮಾಂಡಂಟಗಳಾದ ನಾಗೇಶ ಯಡಾಳ ಮತ್ತು ಚನ್ನಬಸವ, ಡಾ. ಯಾಸಿನ್ ಕಾಲಕುಂದ್ರಿ, ಡಾ. ನಿಶಾಂತ ಕಾಲಕುಂದ್ರಿ ಮತ್ತು ಇತರ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

error: Content is protected !!