23/12/2024
IMG-20240730-WA0004

ಬೆಳಗಾವಿ-30:  ಭಾರತೀಯ ಸಂಪ್ರದಾಯದಲ್ಲಿ ಗುರುಗಳಿಗೆ ವಿಶೇಷ ಗೌರವ ಮತ್ತು ಸ್ಥಾನವಿದೆ.‌ ಗುರು ಎಂದರೆ ಒಬ್ಬ ವ್ಯಕ್ತಿ ಅಲ್ಲ, ಗುರು ಎಂದರೆ ಒಂದು ಶಕ್ತಿ. ಒಬ್ಬ ಗುರು ಪ್ರಕೃತಿಯಲ್ಲಿರುವ ಮರ, ಗಾಳಿ, ನದಿಯಂತೆ ನಿಸ್ವಾರ್ಥಿಯಾಗಿರುತ್ತಾನೆ ಎಂದು ನೀಲಾಂಬರಿ ವಣಕುದರಿ ಎಂದು ಹೇಳಿದರು.

ಗುರುದೇವ ರಾನಡೆ ಮಂದಿರದ ಸಭಾಗ್ರಹದಲ್ಲಿ ಕ್ರಾಂತಿ ಮಹಿಳಾ ಮಂಡಳ ಹಿಂದವಾಡಿ ಹಾಗೂ ಉಮಾ ಸಂಗೀತ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾದ ಗುರುಪೂರ್ಣಿಮೆಯ ಹಿನ್ನೆಲೆಯಲ್ಲಿ ಗುರು ವಂದನಾ ಹಾಗೂ ಆಧ್ಯಾತ್ಮಿಕ ಚಿಂತನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ನಮಗೆ ನಡೆ-ನುಡಿ‌ ಆಚಾರ ವಿಚಾರಗಳನ್ನು ಕಲಿಸುವ ಮೊದಲು ಗುರು ತಾಯಿಯಾದರೇ, ನಾವು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಪ್ರಾಮುಖ್ಯತೆ ಪಡೆಯಲು ಗುರುಗಳ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಯಾರು ಶಿಕ್ಷಣದಂದ ವಂಚಿತರಾಗಾಬಾರದು. ಶಿಕ್ಷಣದಿಂದಲೇ ದೊಡ್ಡ ದೊಡ್ಡ ಹುದ್ದೆಗಳು ಗಿಟ್ಟಿಸಿಕೂಳ್ಳಬಹುದು. ದೇಶದ ಪ್ರಗತಿಗೆ ಶಿಕ್ಷಣವೇ ಆಧಾರ ಸ್ತಂಭವಾಗಿದೆ. ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಅಳವಡಿಸಿಕೊಳ್ಳುಬೇಕು ಎಂದರು.

ಮಕ್ಕಳಗಾಗಿ ತಂದೆ-ತಾಯಿ ತನ್ನ ಜೀವನವನ್ನೇ ಮುಡುಪಾಗಿಡುತ್ತಾಳೆ. ಅವರ ತ್ಯಾಗ- ಶ್ರಮಕ್ಕೆ ನಾವು ಗೌರವಯುತ್ತವಾಗಿರಬೇಕು. ಗುರುಗಳು ತಮ್ಮಲ್ಲಿರುವ ಎಲ್ಲ ವಿದ್ಯೆಯನ್ನು ಧಾರೆಯರೆದು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುತ್ತಾರೆ . ಹೀಗಾಗಿ ಯಾವಾಗಲೂ ನಾವುಗಳು ಪ್ರತಿನಿತ್ಯ ತಂದೆ ತಾಯಿಗಳಿಗೆ ಹಾಗೂ ಗುರುಗಳಿಗೆ ವಿಧೇಯರಾಗಿ ನಿತ್ಯವೂ ಅವರನ್ನು ನೆನೆಸಿಕೊಂಡು ಅವರಿಗೆ ನಮಿಸಬೇಕು ಎಂದರು.

ಈ ವೇಳೆ ಭರತ ನಾಟ್ಯ ಕ್ಷೇತ್ರದಲ್ಲಿಗುರುಗಳಾಗಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ವಿದೂಷಿ ಡಾ. ಪೂಜಾ ನಾಗಲಿಕರ, ಸಂಗೀತ ಕ್ಷೇತ್ರದಲ್ಲಿ ಗುರುಗಳಾಗಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ಜಿತೇಂದ್ರ ಸಾಬನ್ನವರ, ಅಶೋಕ ಕಟ್ಟಿ, ನಿತಿನ ಸುತಾರ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅನಿತಾ ಜಕ್ಕನ್ನವರ, ಮಮತಾ ಅಂಟಿನ ಇವರ ಪ್ರಾರ್ಥನಾ ಗೀತೆ ಹಾಡಿದರು. ಉಮಾ ಸಂಗೀತ ಪ್ರತಿಷ್ಠಾನದ ಅಧ್ಯಕ್ಷೆ ಮಂಗಲ ಮಠದ ಸ್ವಾಗತಿದರು.
ಕಾರ್ಯದರ್ಶಿ ರೇಣುಕಾ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಮೈನಾ ಕುಲಕರ್ಣಿ ಪ್ರಿಯಾ ಕುಲಕರ್ಣಿ ಅಥಿತಿಗಳನ್ನು ಪರಿಚಯಿಸಿದರು. ಗೀತಾ ಎಮ್ಮಿ ನಿರೂಪಿಸಿದರು. ಸುಲೋಚನಾ ವಸ್ತ್ರದ ವಂದಿಸಿದರು. ಇತರರು ಹಾಜರಿದ್ದರು.

error: Content is protected !!