ಬೆಳಗಾವಿ-25:ಬೆಳಗಾವಿ ದಂಡು ಮಂಡಳಿ ವ್ಯಾಪ್ತಿಯ ಎಲ್ಲ ನಾಗರೀಕ ಕ್ಷೇತ್ರವನ್ನು / ಜಮೀನನ್ನು ರಕ್ಷಣಾ ಸಚಿವಾಲಯದ ನಿರ್ದೇಶನಗಳಡಿ, ಬೆಳಗಾವಿ ಮಹಾನಗರ ಪಾಲಿಕೆಗೆ ಹಸ್ತಾಂತರವಾಗುವ ನಿಟ್ಟಿನಲ್ಲಿ ಪ್ರಸ್ತಾವನೆ ತಯಾರಿಸುವ ಬಗ್ಗೆ ಕಟ್ಟು ನಿಟ್ಟಿನ ಸೂಚನೆಯನ್ನು ದಂಡು ಮಂಡಳಿ ಅಧಿಕಾರಿಗಳಿಗೆ ನೀಡುವ ಬಗ್ಗೆ ಚರ್ಚಿಸಲು ಮಾನ್ಯ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಇವರನ್ನು ಬೆಳಗಾವಿ ಲೋಕಸಭಾ ಸದಸ್ಯರು ಜಗದೀಶ ಶೆಟ್ಟರ ಇವರು ನವ-ದೆಹಲಿಯಲ್ಲಿ ಬೆಟ್ಟಿ ಮಾಡಿ ಚರ್ಚಿಸುತ್ತಾ ಮನವಿಯನ್ನು ಸಹ ಅರ್ಪಿಸಿದರು.
ಬೆಳಗಾವಿ ದಂಡು ಮಂಡಳಿ ಇದರ ವ್ಯಾಪ್ತಿಯ ನೋಟಿಫೈಡ ಸಿವಿಲ್ ಏರೀಯಾ ಮಾತ್ರ ಅಧಿಕಾರಿಗಳು ಗುರುತಿಸಿ ಉಳಿದ ಸಿವಿಲ್ ಏರಿಯಾಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂರಿಸುವ ಬಗ್ಗೆ ಕರಡು ಪ್ರಸ್ತಾವನೆಯಲ್ಲಿ ಪ್ರಸ್ತಾಪ ಮಾಡಿರಲ್ಲಿಲ .ಅಂದರೆ ಕೇವಲ “ಬಜಾರ ಏರಿಯಾ” ಮಾತ್ರ ಪರಿಗಣಿಸಿ “ಬಂಗಲೋ ಏರೊಯಾ” ಮಾಡಿರಿಲ್ಲಿಲ ಈ ಕುರಿತು ದಿನಾಂಕ 06.07.2024 ರಂದು ಜರುಗಿದ ದಂಡು ಮಂಡಳಿ ಸಭೆಯಲ್ಲಿ ಖುದ್ದಾಗಿ ಹಾಜರಿದ್ದು ಗಮನಕ್ಕು ತಂದರು ಅಧಿಕಾರಿಗಳು ಸಕರಾತ್ಮಕವಾಗಿ ಸ್ಪಂದಿಸಿರಲ್ಲಿಲ ಅಲ್ಲದೆ ಸಾರ್ವಜನಿಕ ವಲಯದಲ್ಲಿ ಇದಕ್ಕೆ ತೀವೃ ವಿರೋಧ ವ್ಯಕ್ತವಾಗಿತ್ತು. ಎಂದು ಸಂಸದರು ತಿಳಿಸಿದರು.
ಈ ಹಿನ್ನಲೆಯಲ್ಲಿ ನವ-ದೆಹಲಿಯಲ್ಲಿ ಇಂದು ಸಂಸದರು ಶ್ರೀ ಜಗದೀಶ ಶೆಟ್ಟರ ಇವರು ಮಾನ್ಯ ರಕ್ಷಣಾ ಸಚಿವರು ಶ್ರೀ ರಾಜನಾಥ ಸಿಂಗ್ ಇವರನ್ನು ಬೇಟಿ ಮಾಡಿ ಸುಧೀರ್ಘವಾಗಿ ಈ ಕುರಿತು ಚರ್ಚಿಸಿ, ರಕ್ಷಣಾ ಸಚಿವಾಲಯದ ಆದೇಶಗಳಂತೆ ಬೆಳಗಾವಿ ದಂಡು ಮಂಡಳಿ ವ್ಯಾಪ್ತಿಯ ಎಲ್ಲ ಸಿವಿಲ್ ಏರೀಯಗಳನ್ನು ಗುರುತಿಸಿ “ಕರಡು ಪ್ರಸ್ತಾವನೆಯನ್ನು ತಯಾರಿಸಿ ಕರ್ನಾಟಕ ರಾಜ್ಯ ಸರಕಾರಕ್ಕೆ ಸಲ್ಲಿಸುವಂತೆ ನೋಡಿಕೊಳ್ಳಲು ವಿನಂತಿದರು.
ಎಲ್ಲ ವಿಷಯವನ್ನು ಆಲಿಸಿದ ಮಾನ್ಯ ರಕ್ಷಣಾ ಸಚಿವರು, ಸಕಾರಾತ್ಮಕವಾಗಿ ಸ್ಪಂದಿಸುತ್ತಾ ರಕ್ಷಣಾ ಸಚಿವಾಲಯದ ನಿರ್ದೇಶಗಳಡಿಯಲ್ಲಿಯೇ ಪ್ರಸ್ತಾಪಿತ ಕರಡು ಪ್ರಸ್ತಾವನೆ ತಯಾರಿಸು ಬಗ್ಗೆ ಕಟ್ಟು ಸೂಚನೆಯನ್ನು ಬೆಳಗಾವಿ ದಂಡು ಮಂಡಳಿ ಅಧಿಕಾರಿಗಳಿಗೆ ನೀಡುವುದಾಗಿ ರಾಜನಾಥ ಸಿಂಗ್ ಭರವಸೆಯನ್ನು ನೀಡಿದ್ದಾರೆ ಎಂದು ಸಂಸದರು ಜಗದೀಶ ಶೆಟ್ಟರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.