ಬೆಳಗಾವಿ-25: ಜೈನ್ ಇಂಜಿನಿಯರಿಂಗ್ ಕಾಲೇಜ್ ನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊ. ಮಾಧವಿ ಸೋನ್ವಾಲ್ಕರ್ ಅವರು ವಿಶ್ವೇಶ್ವರಯ್ಯ ತಾಂತ್ರಿಕ (ವಿಟಿಯು) ವಿಶ್ವವಿದ್ಯಾನಿಲಯದಿಂದ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿ ಪಡೆದಿದ್ದಾರೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 24 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕುಲಪತಿ ಪ್ರೊ. ವಿದ್ಯಾಶಂಕರ್, ಕುಲ ಸಚಿವರು ಪ್ರೊ. ಬಿ.ಈ ರಂಗಸ್ವಾಮಿ ಮತ್ತು ಕುಲ ಸಚಿವರು (ಮೌಲ್ಯಮಾಪನ) ಪ್ರೊ. ಟಿ ಎನ್. ಶ್ರೀನಿವಾಸ್ ಅವರು ಪ್ರೊ. ಮಾಧವಿ ಸೋನ್ವಾಲ್ಕರ್ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಿದರು.
ಪ್ರೊ. ಮಾಧವಿ ಸೋನ್ವಾಲ್ಕರ್ ಅವರು “ಎಫೆಕ್ಟ್ ಆ ಸಲೈನ್ ವಾಟರ್ ಆನ್ ದಿ ಸ್ಟ್ರೆಂಗ್ತ್ ಆ ಲ್ಯಾಪ್ ಜಾಯಿಂಟ್ ಇನ್ ಪಾಲಿಮರ್ ಕಂಪೋಸಿಟ್ಸ್ ಅಂಡರ್ ಕಂಟ್ರೋಲ್ಡ್ ಟೆಂಪರೇಚರ್ ಕಂಡಿಷನ್ಸ್ ಫಾರ್ ಮರೀನ್ ಆಂಡ್ ಓಫ್ಶೋರೆ ಅಪ್ಲಿಕೇಶನ್” ಬೆಳಗಾವಿʼ ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ (ವಿಟಿಯು) ವಿಶ್ವವಿದ್ಯಾನಿಲಯ ಪಿಹೆಚ್ ಡಿ ಪದವಿ ಪ್ರದಾನ ಮಾಡಿದೆ. ಡಾ. ಬಿ.ವಿ ಹುಬ್ಬಳ್ಳಿ ಅವರು ಇವರಿಗೆ ಮಾರ್ಗದರ್ಶಕರಾಗಿದ್ದರು.
ಪ್ರೊ. ಮಾಧವಿ ಸೋನ್ವಾಲ್ಕರ್ ಅವರು ಪಿಹೆಚ್ ಡಿ ಪಡೆದಿದ್ದಕ್ಜೆ ಕುಟುಂಬ ಸದಸ್ಯರು, ಹಿತೈಷಿಗಳು ಸಂತಸ ವ್ಯಕ್ತಪಡಿಸಿದ್ದಾರೆ.