23/12/2024

ಬೆಳಗಾವಿ-06:ಪಿಪಲ್ ಟ್ರಿ ಶಿಕ್ಷಣ ಸಂಸ್ಥೆಯ ಬಿಬಿಎ ಕಾಲೇಜಿನಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಬೆಳಗಾವಿಯ ಬ್ರಹ್ಮಾಕುಮಾರಿ ಪ್ರತಿಭಾ ಇವರು ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಅಧ್ಯಾತ್ಮಿಕತೆ ಮಹತ್ವ ಮತ್ತು ಅಧ್ಯಾತ್ಮಿಕದೊಂದಿಗೆ ಎಕಾಗ್ರತೆಯ ಬೆಳವಣಿಗೆ ಹೇಗೆ ? ಅದ್ಯಾತ್ಮವನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಜೀವನದಲ್ಲಿ ಹೇಗೆ ಸಾಧನೆ ಮಾಡುವುದು ? ವಿದ್ಯಾರ್ಥಿಗಳು ಮತ್ತು ಉಪನ್ಯಾಶಕರಿಗೆ ಅಧ್ಯಾತ್ಮ ದಾರಿ ದೀಪದಂತೆ ಕಾರ್ಯ ನಿರ್ವಹಿಸುವುದು ಹಾಗೂ ನೈತಿಕತೆಯ ಬೆಳವಣಿಗೆಗೆ ಕಾರಣವಾಗುತ್ತದೆ ಎಂಬುದರ ಕುರಿತಾಗಿ ವಿವರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಪಿಪಲ್ ಟ್ರಿ ಮಹಾವಿದ್ಯಾಲಯದ ಡೀನ ಶ್ರೀ ಸಂತೋಷ ಗುರುವಯ್ಯನವರ, ಪದವಿ ಶಿಕ್ಷಣ ವಿಭಾಗದ ಪ್ರಾಚಾರ್ಯರಾದ ಶ್ರೀ ಅವಿನಾಸ ಅಕ್ಕಿ, ಪದವಿ ಪೂರ್ವ ಶಿಕ್ಷಣದ ಪ್ರಾಚಾರ್ಯರಾದ ಶ್ರೀ ಉಮೇಶ ಬೆಳಗುಂದಿ, ಹಾಗೂ ಎಲ್ಲ ವಿದ್ಯಾರ್ಥಿಗಳು, ಉಪನ್ಯಾಶಕರು, ಕಛೇರಿ ಸಿಬ್ಬಂದಿ ಮತ್ತು ಸಹಾಯಕ ಸಿಬ್ಬಂದಿ ಉಪಸ್ಥಿತರಿದ್ದರು.

error: Content is protected !!