ಚಿಕ್ಕೋಡಿ-06:ದಿನಾಂಕ:೧೩.೦೧.೨೦೨೪ ರಿಂದ ೧೬.೦೧.೨೦೨೪ ರವರೆಗೆ ಶ್ರೀ.ಕ್ಷೇತ್ರ ಅಮ್ಮಣಗಿ ಮಲ್ಲಿಕಾರ್ಜುನ ಜಾತ್ರೆ ಜರುಗಲಿದ್ದು ಜಾತ್ರೆಗೆ ಹೋಗುವ ಪ್ರಯಾಣಿಕರಿಗೆ ಚಿಕ್ಕೋಡಿ ವಿಭಾಗದ ಚಿಕ್ಕೋಡಿ/ಸಂಕೇಶ್ವರ/ಹುಕ್ಕೇರಿ ಘಟಕಗಳಿಂದ ವಿಶೇಷ ಹೆಚ್ಚುವರಿ ಬಸ್ಸ್ಸುಗಳ ವ್ಯವಸ್ಥೆ ಕಲ್ಪಿಸಲಾಗುವುದು.
ಸಂಕೇಶ್ವರ ಬಸ್ ನಿಲ್ದಾಣದಲ್ಲಿ ಹಾಗೂ ಶ್ರೀಕ್ಷೇತ್ರ ಅಮ್ಮಣಗಿ ಜಾತ್ರಾ ಕೇಂದ್ರದಲ್ಲಿ ಪ್ರತ್ಯೇಕ ಜಾತ್ರಾ ನಿಯಂತ್ರಣ ಬಿಂದುಗಳಲ್ಲಿ ನುರಿತ ಸಾರಿಗೆ ನಿಯಂತ್ರಕ ಸಿಬ್ಬಂಧಿ ಹಾಗೂ ಭದ್ರತಾ ಸಿಬ್ಬಂಧಿಗಳನ್ನು ನಿಯೋಜಿಸಿ ಪ್ರಯಾಣಿಕರಿಗೆ ಸುವ್ಯವಸ್ಥಿತ ವಿಶೇಷ ವಾಹನಗಳ ವ್ಯವಸ್ಥೆ ಕಲ್ಪಿಸಲಾಗುವುದು.ಯಾತ್ರಿಕರು ಇದರ ಸದುಪಯೋಗ ಪಡೆಯಬೇಕೆಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಮ್.ಆರ್.ಮುಂಜಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.