ಬೆಳಗಾವಿ-೧೮: ಶ್ರೀ ಶನೈಶ್ವರ ಎಜುಕೇಶನಲ್ ಆ್ಯಂಡ್ ವೆಲ್ಫೇರ್ ಸೊಸೈಟಿಯ ನಿರ್ದೇಶಕರು ಬೆಳಗಾವಿಯ ನೂತನ ಸಂಸದ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು.
ಬಿಜೆಪಿ ಯುವ ಮುಖಂಡ ಕಿರಣ್ ಜಾಧವ್ ಈ ಸಭೆಯನ್ನು ಏರ್ಪಡಿಸಿದ್ದರು.
ಉಪಾಧ್ಯಕ್ಷ ಪ್ರೊ. ಅನಿಲ್ ಚೌಧರಿ ಮತ್ತು ಸಂಜಯ್ ಭಾವಿ ಸ್ವಾಗತಿಸಿ ಜಗದೀಶ್ ಶೆಟ್ಟರ್ ಅವರನ್ನು ಶಾಲು ಹೊದಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಸಂಸದರಿಗೆ ಶನೈಶ್ವರ ಶ್ರೀಗಳ ಭಾವಚಿತ್ರ ಹಾಗೂ ಸಂಸ್ಥೆಯ ಪ್ರಗತಿ ವರದಿ ನೀಡಿದರೆ ಶಿವರಾಜ್ ಪಾಟೀಲ್ ಸಿಹಿತಿಂಡಿ ನೀಡಿದರು. ಈ ಭೇಟಿಯಲ್ಲಿ ರಮೇಶ್ ಜಾರಕಿಹೊಳಿ, ಮಹಾಂತೇಶ ದೇಸಾಯಿ, ಗೀತಾ ಕತ್ತಿ, ಕಿರಣ ಜಾಧವ, ವಿಕಾಸ ಕಲಘಟಗಿ ಸೇರಿದಂತೆ ಸಂಸ್ಥೆಯ ನಿರ್ದೇಶಕರು ಉಪಸ್ಥಿತರಿದ್ದರು.