ಬೆಳಗಾವಿ-೧೮: ಮಹತ್ವಾಕಾಂಕ್ಷಿ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಬಂದು ಒಂದ ವರ್ಷ ಕಳೆದಿವೆ. ಆದರೆ, ಕೇಂದ್ರ ಹಾಗೂ ರಾಜ್ಯ ಪಡಿತರ ಅಕ್ಕಿಯಲ್ಲಿ ಯೋಜನೆಗಳಲ್ಲಿ ತೊಡಕು ಉಂಟಾಗಿದ್ದು, ಪಡಿತರ ವಿತರಿಕರಿಗೆ ಪ್ರತಿ ಕ್ವಿಂಟಲ್‌ಗೆ 250 ಕಮಿಷನ್ ಸಿಗುತ್ತಿಲ್ಲ, ಇದರ ಬಗ್ಗೆ ಸರ್ಕಾರ ಸೂಕ್ಷ್ಮವಾಗಿ ಚಿಂತನೆ ನಡೆಸಬೇಕು ಎಂದು ಅಖಿಲ ಭಾರತೀಯ ಪಡಿತರ ವಿತರಕರ ಪೇಡರೇಶನ್ ರಾಷ್ಟ್ರೀಯ ಅಧ್ಯಕ್ಷರಾದ ಡಿಸಿ ಕಟಾರಿಯಾ ಪತ್ರಿಕಾಗೋಷ್ಠಿ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಬಡಜನರಿಗೆ ಪ್ರಧಾನನಮಂತ್ರಿ ಗರೀಬ ಕಲ್ಯಾಣ ಯೋಜನೆಯಡಿಯಲ್ಲಿ ದೇಶದ 80 ಕೋಟಿ ಜನರ ಹಸಿವು ನೀಗಿಸುವಲ್ಲಿ ಅನುಕೂಲವಾಗಿದೆ, ಆದರೆ, ರಾಜ್ಯಸರ್ಕಾರ ನೇರವಾಗಿ ಪಡಿತರದಾರರ ಖಾತೆ ಹಣ ಜಮಾ ಮಾಡುತ್ತಿದೆ. ಸರ್ಕಾರ ನಿಲುವಿನಿಂದ ರಾಜ್ಯ ಪಡಿತರ ವಿತರಕರ ಕಮಿಷನ್ ಕಟ್ ಆಗಿದೆ. ಸರ್ಕಾಗಳು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ ನ್ಯಾಯ ಒದಗಿಸಬೇಕು ದೇಶಾದ್ಯಂತ ಈ ಸಮಸ್ಯೆ ಎದುರಾಗಿದೆ. ಆ ರಾಜ್ಯದ ಸರ್ಕಾರಗಳು ಚಿಂತನೆ ನಡೆಸಿ ಪಡಿತರ ವಿತರಕರ ಸೂಕ್ತ ನ್ಯಾಯ ನೀಡಬೇಕು ಎಂದರು.
ಕರ್ನಾಟಕ ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ರಾಜಶೇಖರ ತಳವಾರ ಮಾತನಾಡಿ, ಆಹಾರ, ನಾಗರೀಕ ಮತ್ತು ಗ್ರಾಹಕ ವ್ಯವಹಾರ ಸಚಿವರಾದ ಪ್ರಲ್ಹಾದ ಜೋಶಿ ಅವರಿಗೆ ಮನವಿ ನೀಡಲಾಗಿದೆ. ಕೇಂದ್ರ ಸರ್ಕಾರ ಮೇಲಿನ ಭರವಸೆಯನ್ನು ಉಳಿಸಿಕೊಡಬೇಕು. ಪಡಿತರದಾರರಿಗೆ ಸಮನಾಗಿ ಕಮಿಷನ್ ಕೊಡಿಸುವಲ್ಲಿ ಪ್ರಯತ್ನಿಸಬೇಕು ಎಂದರು.
ಕೇಂದ್ರ ಸರ್ಕಾರವು ಸಹ 5 ಕೆಜಿ ಅಕ್ಕಿಯ ಜೊತೆಗೆ ಆಹಾರ ಧಾನ್ಯ ಹಾಗೂ ಬೆಲೆ ಕಾಳು, ಸಕ್ಕರೆ, ತಾಳೆ ಎಣ್ಣೆಯನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯ ಜನರ ಬೇಡಿಕೆಯಂತೆ ಕರ್ನಾಟಕದಮ ಪ್ರಮುಖ ಆಹಾರ ಧಾನ್ಯವಾದ ಗೋಧಿ ಮತ್ತು ಜೋಳ ವಿತರಿಸಬೇಕು.ಪ್ರತಿ ತಿಂಗಳು ಪಡಿತರ ವಿತರಿಕರಿಗೆ ಕಮಿಷನ್ ಬರುವಂತೆ ಸರ್ಕಾರ ಕ್ರಮಕೈಗೋಳ್ಳಬೇಕು ಎಂದು ಹೇಳಿದರು.
ದೇಶದಲ್ಲಿ 5.38 ಲಕ್ಷ ನ್ಯಾಯ ಬೆಲೆ ಅಂಗಡಿಗಳು ಕಾರ್ಯನಿರ್ವಸುತ್ತಿವೆ. ಆದರೆ, ಆಯಾ ರಾಜ್ಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿವೆ. ಹೀಗಾಗಿ ಸರ್ಕಾರಗಳು ನ್ಯಾಯ ಬೆಲೆ ಅಂಗಡಿಗಳಿಗೆ 10.15 ಲಕ್ಷ ಗಳ ವರೆಗೆ ಸರ್ಕಾರದಿಂದ ಕನಿಷ್ಠ ರಿಯಾಯತಿ ಬಡ್ಡಿದರದಲ್ಲಿ ಸಾಲ ಒದಗಿಸಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಡಿಎಂ ಹಾಲಸ್ವಾಮಿ, ಕೃಷ್ಣ ಡಿ. ನಾಯ್ಕ, ಡಿ ಜಿ ಶಿವಾನಂದಪ್ಪ, ಎಂ ಕೆ. ರಾಮಚಂದ್ರ ̧ ಉಪಾಧ್ಯಕ್ಷ ರಾಜಶೇಖರ ತಳವಾರ, ವಿಜಯಕುಮಾರ ಕೆ.ಎನ್ ., ಅಬ್ದುಲ್ ತಹಸೀಲ್ದಾರ, ಕೆ.ಎಸ್ ಪ್ರಕಾಶ, ಡಾ. ಆರ್ . ಸುಬ್ಬಣ್ಣ, ರಾಜು ಗೊಂದಿ, ರೇಣುಕಮ್ಮ ಹೆಚ್ , ರಾಮಯ್ಯ, ಮಾದಪ್ಪ, ಮರಿಸ್ವಾಮಿ, ಸಣ್ಣ ಹನುಮಂತಪ್ಪ, ನಾಗರಾಜ ಉಪರೆ, ಸಿಕೆ ಅಶೋಕ , ಕಲ್ಲೇಶಪ್ಪ ಹಾಗೂ ಇನ್ನಿತರರು ಹಾಜರಿದ್ದರು.