23/12/2024
IMG-20240618-WA0015

ಬೆಳಗಾವಿ-೧೮: ಗೊತ್ತು ಗುರಿ ಇಲ್ಲದೆ ಬೇಕಾ ಬಿಟ್ಟಿ ಗ್ಯಾರೆಂಟಿ ಘೋಷಿಸಿ ಅಧಿಕಾರಕ್ಕೆ ಬಂದ‌ ರಾಜ್ಯ ಕಾಂಗ್ರೇಸ್ ಸರ್ಕಾರ ಪ್ರತಿಯೊಂದ ದರ ಏರಿಕೆ ಮಾಡಿ ಜನಸಾಮಾನ್ಯರ ಜೇಬಿಗೆ ಕೈ ಹಾಕಿ ರಾಜ್ಯದ ಜನತೆಗೆ ಬೆಲೆ ಏರಿಕೆ ಗ್ಯಾರೆಂಟಿ ನೀಡಿದ ಕ್ರಮ ಖಂಡನೀಯ ತಕ್ಷಣ ಡಿಸೈಲ್ ಮತ್ತು ಪೆಟ್ರೋಲ ದರ ಏರಿಕೆ ಹಿಂಪಡೆಯದಿದ್ದರೆ ಕಾಂಗ್ರೆಸ್ ಸರ್ಕಾರ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.

ಸೋಮವಾರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು,
ರಾಜ್ಯ ಸರ್ಕಾರ ಪೆಟ್ರೋಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆಯನ್ನು ಶೇ25.92 ರಿಂದ ಶೇ 29.84 ಕ್ಕೆ, ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆಯನ್ನು ಶೇ. 14.34 ರಿಂದ ಶೇ. 18.44 ಕ್ಕೆ ಹೆಚ್ಚಳ ಮಾಡಿ ಜನಸಾಮನ್ಯರಿಗೆ ನಿತ್ಯ ಜೀವನಕ್ಕೆ ಹೊರೆಯಾಗಿಸಿದೆ.
ತೆರಿಗೆ ಹೆಚ್ಚಳದಿಂದ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 3ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳವಾಗಿದೆ.
2021ನವೆಂಬರ್ 4, ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅತಂರ ರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಾದರು ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಕ್ರಮವಾಗಿ 5 ರೂ. ಮತ್ತು 10 ರೂ. ಇಳಿಕೆ ಮಾಡಿತ್ತು. ಇದಾದ ಬೆನ್ನಲ್ಲೇ ಆಗಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್ 7 ರೂಪಾಯಿಗೆ ಇಳಿಸಿತ್ತು. ಆ ಸಮಯದಲ್ಲಿ ದರ ಕಡಿತಗೊಳಿಸುವಂತೆ ಉದ್ದುದ್ದು ಭಾಷಣ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಅಧಿಕಾರವಧಿಯಲ್ಲಿ ಭಾಗ್ಯಗಳಿಗಾಗಿ ಬರಿದಾದ ಬೊಕ್ಕಸ ತುಂಬಿಕೊಳ್ಳಲು ಜನಸಾಮನ್ಯರಿಗೆ ಆರ್ಥಿಕ ಹೊಡೆತ ನೀಡುತಿದ್ದಾರೆ.
ಇವರು ಅಧಿಕಾರಕ್ಕೆ ಬಂದ ನಂತರ
ಎಂ.ಎಸ್.ಎಂ.ಇ ಕೈಗಾರಿಕೆಗಳ ಮಾಸಿಕ ವಿದ್ಯುತ್ ದರದಲ್ಲಿ
ಶೇ.25 ರಿಂದ 50ರಷ್ಟು ಹೆಚ್ಚಳವಾಗಿದ್ದು ಸಣ್ಣ ಕೈಗಾರಿಕೆಗಳು ಇವರ ಕ್ರಮದಿಂದ ಮುಚ್ಚುವ ಸ್ಥಿತಿಗೆ ಬಂದಿವೆ.
ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ ಪ್ರತಿ ಯೂನಿಟ್‌ಗೆ 20 ಪೈಸೆಯಿಂದ 50 ಪೈಸೆ ಇರುತ್ತಿತ್ತು. ಆದರೆ ಈ ಬಾರಿ ಪ್ರತಿ ಯೂನಿಟ್‌ಗೆ 2.55 ರೂ. ಹೆಚ್ಚಿಸಲಾಗಿದೆ.
ರೈತರ ಪಂಪಸೆಟ್‌ಗಳಿಗೆ 30ರಿಂದ 40ಸಾವಿರ ರೂಪಾಯಿಗಳಲ್ಲಿ ಆಗುವ ವಿದ್ಯುತ್ ಟಿ.ಸಿ ಕಾರ್ಯ ಇಂದು 1.50 ಲಕ್ಷದಿಂದ 3ಲಕ್ಷ ರೂ.ಗೆ ಏರಿಕೆ ಮಾಡಲಾಗಿದ್ದು ರೈತರ ಕೃಷಿ ಭೂಮಿಯನ್ನ ನೀರಾವರಿ ವಂಚಿತರನ್ನಾಗಿ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಧೋರಣೆಗೆ ರೈತರು ರೋಸಿ ಹೊಗಿದ್ದಾರೆ.
ನಿವೇಶನ, ಕಟ್ಟಡ, ಭೂಮಿ ಮತ್ತಿತರ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನ
ಅಕ್ಟೋಂಬರ 2023 ರಿಂದ ಶೇ. 20 ರಿಂದ ಶೇ 50 ರವರೆಗೂ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಹೆಚ್ಚಿಸಲಾಗಿದ್ದು ರೈತರು ಹಾಗೂ ಸಾಮನ್ಯ ಜನತೆ ಆಸ್ತಿ ಖರೀದಿ ಮಾಡದಂತೆ ಕಾಂಗ್ರೆಸ್ ಸರ್ಕಾರ ಷಡ್ಯಂತ್ರ ನಡೆಸಿದೆ.
ದಿನ ನಿತ್ಯದ ವ್ಯವಹಾರಕ್ಕಾಗಿ ಮಾಡಿಕೊಳ್ಳುತಿದ್ದ
ಅಗ್ರಿಮೆಂಟ್ ಬಾಂಡ/ ಇಂಡಿಮಿನಿಟಿ ಬಾಂಡ/ಬ್ಯಾಂಕ್ ಗ್ಯಾರಂಟಿ ಪತ್ರದ ಮುದ್ರಾಂಕವನ್ನು 200ರೂ ದಿಂದ 5೦೦ ರೂ, ಏರಿಕೆ ಮಾಡಲಾಗಿದೆ.
ರೈತರ ಸಾಲಕ್ಕಾಗಿ ಹೈಪೊಥಿಪಿಕೇಶನ್ ಅಗ್ರಿಮೆಂಟ್ 10 ಲಕ್ಷ ದವರಗೆ ಇದ್ದ 0.1% ರಿಂದ ೦.5 % ಏರಿಕೆ ಮಾಡಲಾಗಿದೆ.
ಜನರಲ್ ಪವರ್ ಆಫ್ ಅಟಾರ್ನಿ 200 ರೂ ರಿಂದ 1000 ರೂ. ಗೆ ಏರಿಕೆ ಮಾಡಲಾಗಿದೆ.
ಸ್ಪೇಶಲ್ ಪವರ್ ಆಫ್ ಅಟಾರ್ನಿ 100 ರೂ ರಿಂದ 500 ರೂ. ಗೆ ಏರಿಕೆ ಮಾಡಲಾಗಿದೆ.
ಲೇಟರ್ ಆಫ್ ಗ್ಯಾರಂಟಿ 200 ರೂ ರಿಂದ 500 ರೂ. ಗೆ ಏರಿಕೆ ಮಾಡಲಾಗಿದೆ.
ಅಫಿಡವಿಟ್ 20 ರೂ ರಿಂದ 100 ರೂ. ಗೆ ಏರಿಕೆ ಮಾಡಲಾಗಿದೆ.
ವಾಣಿಜ್ಯ ಮಳಿಗೆ, ಮನೆಗಳ ಖರೀದಿ ದರ (ಸ್ಕೇರ್ ಮೀಟರ್) 1000 ದಿಂದ ಈಗ 5೦೦೦ ರೂ ಏರಿಕೆಯಾಗಿದೆ.‌
ಹಾಲಿನ ದರ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಮಾಡಿದ್ದಾರೆ. ಆದರ ರೈತರಿಗೆ ಹಾಲಿನ ಪ್ರೋತ್ಸಾಹ ಧನ ನೀಡದೆ ತಮ್ಮ ಬಕಸೂರನ ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ಇಂದಿನ ಕಾಂಗ್ರೆಸ್ ಸರ್ಕಾರ ಹೈನುಗಾರರಿಗೆ ಕಳೆದ 8ತಿಂಗಳ703 ಕೋಟಿ ರೂ ಪ್ರೋತ್ಸಾಹ ಧನ ನೀಡಿಲ್ಲ.
ಬರಗಾಲದಲ್ಲೂ ಬಿತ್ತನ ಬೀಜ ದರವನ್ನು ಶೇ 3೦ ಕ್ಕಿಂತ ಹೆಚ್ಚು ಏರಿಕೆಮಾಡಿ ಕೃಷಿ ಚಟುವಟಿಕೆಗಳನ್ನು ಹತ್ತಿಕ್ಕುವ ಕಾರ್ಯಮಾಡಿದ ಶ್ರೇಯಸ್ಸು ಈ ಕಾಂಗ್ರೆಸ್ ಸರ್ಕಾರಕ್ಕೆ ಇದೆ. ಹೀಗೆ ಬೆಲೆ ಏರಿಕೆ ಗ್ಯಾರೆಂಟಿ ನಿಡುತ್ತಿದೆ.
ಅಬಕಾರಿ ಸುಂಕ ಶೇ 10 ರಷ್ಟು ಹೆಚ್ಚಳ ಮಾಡಿ ರಾಜ್ಯದ ಜನತೆಯನ್ನ ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಡಿಸೈಲ್ ಮತ್ತು ಪೆಟ್ರೋಲ ದರ ಹಿಂಪಡೆಯದಿದ್ದರೆ ಬಿಜೆಪಿ ಬಿದಿಗಿಳಿದು ಉಗ್ರ ಹೋರಾಟ ಮಾಡಲಿದೆ. ಜನರೆ ಈ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!