ಬೆಳಗಾವಿ ೧೬- ಕಲಾವಿದರ ಸಹಾಯಾರ್ಥವಾಗಿ ಇದೇ ದಿ. ೧೬ ಅಂದರೆ ನಾಳೆ ರವಿವಾರದಂದು ಒಂದೇ ದಿನ ಮದ್ಯಾಹ್ನ ೩ ಹಾಗೂ ಸಾಯಂಕಾಲ ೬ ಗಂಟೆಗೆ ಎರಡು ಪ್ರದರ್ಶನಗಳನ್ನು ನಗರದ ಕನ್ನಡ ಭವನ ಸಂಯೋಜನೆಯಲ್ಲಿ ‘ಮುದುಕನ ಮದುವೆ’ ಹಾಸ್ಯ ನಾಟಕವನ್ನು ನೆಹರೂನಗರ ರಾಮದೇವ ಹೊಟೇಲ ಹತ್ತಿರವಿರುವ ಕನ್ನಡ ಭವನದಲ್ಲಿ ಪ್ರದರ್ಶನಗೊಳ್ಳಲಿದೆ. ಸಹಾಯಧನ ಎರಡು ನೂರು ರೂಪಾಯಿ ಇದ್ದು ಟಿಕೆಟ್ ಕೊಂಡು ನಾಟಕವನ್ನು ನೋಡಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಹಾಸ್ಯನಟ ಆನಂದ ಪತ್ತಾರ ಕೋರಿದ್ದಾರೆ.