ಬೈಲಹೊಂಗಲ-೧೪: ಯಾಂತ್ರಿಕ ಲೊಕದಲ್ಲಿ ನಡೆಯುವ ಅಪರಾಧಗಳನ್ನ ಆಧುನಿಕ ತಂತ್ರಜ್ಞಾನದಿಂದ ತನಿಖೆ ಮಾಡಿ ನಿಖರವಾದ ಅಪರಾಧಿಗಳನ್ನ ಕಂಡುಹಿಡಿಯಲು ಪೊರನಿಕ್ಸ್ ವಿಜ್ಞಾನ ಅತ್ಯಂತ ಮಹತ್ವದ್ದಾಗಿದೆ ಎಂದು ಸಂಪನ್ಮೂಲದ ವ್ಯಕ್ತಿ ಫಣಿಂದ್ರ ಬಿ.ಎನ್. ಹೇಳಿದರು.
ಪಟ್ಟಣದ ನ್ಯಾಯವಾದಿಗಳ ಸಭಾಭವನದಲ್ಲಿ ಬೈಲಹೊಂಗಲ, ಕಿತ್ತೂರು, ಸವದತ್ತಿ ವಕೀಲರ ಸಂಘ, ಅದಿವ್ಯಕ್ತ್ ಪರಿಷತ್ ಬೆಳಗಾವಿ, ಹಾಗೂ ಕಾನೂನು ಸೇವಾ ಪ್ರಾಧಿಕಾರ ಬೈಲಹೊಂಗಲ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ಪೊರನಿಕ್ಸ್ ವಿಜ್ಞಾನದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಪ್ರತಿದಿನ ಅಪರಾಧಗಳ ಸಂಖ್ಯೆ ಹೆಚ್ಚುತ್ತಿವೆ. ಅಪರಾಧಿಗಳ ಮನೊಭಾವನೆ ಪ್ರತಿಯೊಂದ ಕ್ರೈಂಗಳಲ್ಲಿ ಬೇರೆ ಬೇರೆಯಾಗಿದ್ದು ಒಂದೆ ಒಂದು ಸುಳಿವು ದೊರೆಯದಂತೆ ಅಪರಾಧ ಎಸಗಿದಾಗ ಪತ್ತೆಕಾರ್ಯ ಅತ್ಯಂತ ಕಠಿಣವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಅಪರಾಧಿಗಳನ್ನ ಹುಡಕುವ ಗುರುತರ ಜವಾಬ್ದಾರಿ ಪೊರನಿಕ್ಸ್ ವಿಜ್ಞಾನದ ಪರಿಣಿತರ ಮೇಲೆ ಇರುತ್ತದೆ. ಕೈ ಬರಹ, ಹಣಕಾಸು ಅವ್ಯವಹಾರ, ದರೋಡೆ, ಅತ್ಯಾಚಾರ. ಕೊಲೆ, ಸುಲಿಗೆಗಳಂತಹ ಪ್ರಕರಣಗಳ ಪತ್ತೆಗೆ ಹಾಗೂ ಸಮೂಹ ಮಾಧ್ಯಮದ ದೃಶ್ಯಗಳು, ಧ್ವನಿ ಮುದ್ರಣಗಳ‌್ನು ನ್ಯಾಯಾಲಯ ಸಾಕ್ಷಿಯಾಗಿ ಪರಿಗಣಿಸಲು, ಮಾಡಬೇಕಾದ ಕ್ರಮಗಳ ಬಗ್ಗೆ ನ್ಯಾಯವಾದಿಗಳಿಗೆ ಪೊರನಿಕ್ಸ್ ಜ್ಞಾನ ಅವಶ್ಯಕವಾಗಿ ಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಮ್.ಆರ್.ಮೆಳವೆಂಕಿ ಮಾತನಾಡಿ, ಜುಲೈ ತಿಂಗಳಿನಿಂದ ಬದಲಾಗುತ್ತಿರುವ ಭಾರತೀಯ ಕಾನೂನಗಳಿಗೆ ಅನಗುಣವಾಗಿ ನ್ಯಾಯಾಲಯದ ಕಾರ್ಯಕಲಾಪಕ್ಕೆ ಹೊಂದಿಕೊಳ್ಳಲು ನ್ಯಾಯವಾದಿಗಳು ಸತತ ಅಧ್ಯಯನ ಮತ್ತು ನ್ಯಾಯಿಕ ಶಾಸ್ತ್ರದ ಜ್ಞಾನ ಅತ್ಯವಶ್ಯಕವಾಗಿದೆ. ಕಕ್ಷಿದಾರರಿಗೆ ತ್ವರಿತ ಮತ್ತು ನಿಖರ ನ್ಯಾಯದಾನದಲ್ಲಿ ಪೊರನಿಕ್ಸ್ ವಿಜ್ಞಾನದ ಅವಶ್ಯಕತೆ ಇರುವದರಿಂದ ನ್ಯಾಯವಾದಿಗಳು ಬೆಂಗಳೂರುನಲ್ಲಿರುವ ಪೊರನಿಕ್ಸ್ ಅಧ್ಯಯನ ಕೇಂದ್ರದಿಂದ ತಮ್ಮ ದೂರಶಿಕ್ಷಣವನ್ನು ಪಡೆದಕೊಳ್ಳುವಂತೆ ಮನವಿ ಮಾಡಿದರು.
ಅದಿವ್ಯಕ್ತ ಪರಿಷತ್ ಉತ್ತರ ಪ್ರಾಂತೀಯ ಖಜಾಂಚಿ ನ್ಯಾಯವಾದಿ, ಚಿದಾನಂದ ಸಂಬೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯ ಮೇಲೆ ಸವದತ್ತಿ ತಾಲೂಕಾ ನ್ಯಾಯವಾದಿ ಸಂಘದ ಅಧ್ಯಕ್ಷ ಎಮ್.ಎನ್.ಮುತ್ತಿಣ, ಚನ್ನಮ್ಮನ ಕಿತ್ತೂರು ತಾಲೂಕಿನ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಡಿ.ಬೊಗೂರ, ಸಂಘದ ಉಪಾಧ್ಯಕ್ಷ ಎ.ಎಮ್.ಸಿದ್ರಾಮನಿ, ಸಾಹಯಕ ಸರ್ಕಾರಿ ಅಭಿಯೋಜಕರು ಗುರನಾಥ ಶಿರೂರ ಇದ್ದರು.
ನ್ಯಾಯವಾದಿ ಸಂಘದ ಪ್ರಧಾನ ಕಾರ್ಯದರ್ಶಿ ವಿಠಲ ಕಟದಾಳ ಸ್ವಾಗತಿಸಿದರು. ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ಎಸ್.ಎಸ್.ಆಲದಕಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಸಿ.ಎಸ್.ಚಿಕ್ಣಣಗೌಡರ, ಡಿ.ಎಸ್.ಅಷ್ಟಗಿಮಠ, ಸುಜಾತಾ ಚಿಕ್ಕಮಠ, ಎಮ್.ಎಮ್.ಅಬ್ಬಾಯಿ, ಎಸ್.ವಾಯ್.ಪಾಟೀಲ, ಉಮಾ ಬುಲಾಕೆ, ಎಸ್.ವಿ ಸಿದ್ದಮನಿ, ಪ್ರೇಮಾ ಬಡಿಗೇರ, ಮಂಜುನಾಥ ಸೋಮಣ್ಣವರ, ಆರ್.ಜಿ. ಗಂಗಣ್ಣವರ, ರಮೇಶ ಕುರಬರ, ಶಾಂತಾ ಸಿದ್ರಾರಮಣ್ಣವರ, ಎ.ಎಫ್.ಪಟ್ಟಿಹಾಳ, ಎ.ಎಮ್.ಕಾರೇಕಾಜಿ, ಕೆ.ಎಸ್.ಕುಲಕರ್ಣಿ, ಪಿ.ಬಿ.ದೇಸಾಯಿ, ಎಸ್.ವಿ.ಹಿರೆಮಠ, ಯು.ಆರ್.ದೊಡ್ಡೆಣ್ಣವರ, ಆರ್.ಬಿ.ರುದ್ರಾಪೂರ, ಜಗದೀಶ ಜಗಜಂಪಿ, ಎ.ಬಿ.ಇನಾಂದಾರ್, ಜೆ.ಎಸ್.ಹುಕ್ಕೆರಿಮಠ, ಡಿ.ಎಸ್.ಬೊಂಗಾಳೆ, ಆರ್.ಎಸ್.ಗೌಡರ, ಬಸವರಾಜ ಅಂಬೋಜಿ, ಎಮ್.ಎಮ್.ಅಲ್ಲಯ್ಯನವರ, ಆನಂದ ತುರಮರಿ ಸೇರಿದಂತೆ ಸವದತ್ತಿ ಚನ್ನಮ್ಮಕಿತ್ತೂರ ತಾಲೂಕಿನ ನುರಾರು ನ್ಯಾಯವಾದಿಗಳು ಇದ್ದರು.