ಬೆಳಗಾವಿ-೧೩: ಅಧಿಕಾರ,ಹಣ ಬಲ, ಗ್ಯಾರಂಟಿಗಳ ಬಲದಿಂದ ಅಧಿಕಾರಕ್ಕೆ ಬರರು ಸಾಧ್ಯವಿಲ್ಲ ಎಂದು ಬೆಳಗಾವಿ ಜನತೆ ಸಂಸತ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ನನ್ನನ್ನು ಬಹುಮತದಿಂದ ಗೆಲ್ಲಿಸಿದ ಬೆಳಗಾವಿ ಕ್ಷೇತ್ರದ ನಾನು ಪ್ರೀತಿಯಿಂದ ಅಭಿನಂದಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ನೂತನ ಸಂಸದರಾದ ಜಗದೀಶ ಶೆಟ್ಟರ ಹೇಳಿದರು.
ಗುರುವಾರದಂದು ನಗರದಲ್ಲಿ ಕತೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಜನ ಹಿಂದೆ ಕೇಂದ್ರ ಸಚಿವ ದಿ. ಸುರೇಶ ಅಂಗಡಿಯವರನ್ನು ಬೆಂಬಲಿಸಿದ್ದರೋ ಅದೇ ರೀತಿ ನನ್ನನ್ನು ಬೆಂಬಲಿಸಿದ್ದಾರೆ. ನರೇಂದ್ರ ಮೋದಿಜಿ 3 ನೇ ಬಾರಿಗೆ ಪ್ರಧಾನಿ ಆಗಬೇಕು. ದೇಶದ ಭದ್ರತೆ, ಅಭಿವೃದ್ಧಿ, ದೇಶದ ಉನ್ನತಿಗೆ ಬಿಜೆಪಿ ಹಾಗೂ ಮೋದಿಜಿ ಬೆಂಬಲಿಸಿ ಅಧಿಕಾರಕ್ಕೆ ತಂದಿದ್ದಾರೆ ಜನ ನನ್ನ ಈ ಗೆಲುವಿಗೆ ದಕ್ಷಿಣ ಕ್ಷೇತ್ರದಲ್ಲಿ ಶಾಸಕರಾದ ಅಭಯ ಪಾಟೀಲ ಅವರ ಶ್ರಮದಿಂದ 73,220 ಮತಗಳ ಮುನ್ನಡೆ ಅ ಕ್ಷೇತ್ರ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಮತಗಳನ್ನು ಒದಗಿಸುವಲ್ಲಿ ಉನ್ನತ ಕಾರ್ಯ ಮಾಡಿದ್ದಾರೆ. ಅದೇ ರೀತಿ ಕಾಂಗ್ರೆಸ ಪಕ್ಷದ ಮಂತ್ರಿಗಳ ಕ್ಷೇತ್ರವಾದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 50,229 ಮತಗಳ ಮುನ್ನಡೆ ದೊರಕಿದ್ದು ನಮಗೆ ಪ್ರೇರಣೆ ಈ ಕ್ಷೇತ್ರದಲ್ಲಿ ಹಿರಿಯ ಮುಖಂಡರಾದ ಶಂಕರಗೌಡ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ನಾಗೇಶ್ ಮನ್ನೊಳ್ಕರ, ಇನ್ನು ಅನೇಕ ಮುಖಂಡರ, ಕಾರ್ಯಕರ್ತರ ಪ್ರಯತ್ನ ಯಶಸ್ವಿಯಾಗಿದೆ. ಅದೇ ರೀತಿ ಗೋಕಾಕ ಮತ್ತು ಅರಭಾಂವಿ ಕ್ಷೇತ್ರಗಳಲ್ಲಿ 23,897 ಹಾಗೂ 21,475 ಮತಗಳ ಮುನ್ನಡೆ ಪಡೆಯಲು ಮಾಜಿ ಸಚಿವರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ವಿ ಪ ಸದಸ್ಯ ಲಖನ ಜಾರಕಿಹೊಳಿ, ಭೀಮಸಿ ಜಾರಕಿಹೊಳಿ, ಅಂಬಿರಾವ ಪಾಟೀಲ ಹಾಗೂ ಬಿಜೆಪಿ ಮುಖಂಡರ, ಕಾರ್ಯಕರ್ತರ ಶ್ರಮದಿಂದ ಗೋಕಾಕ್ ಮತ್ತು ಅರಭಾವಿ ಕ್ಷೇತ್ರದಲ್ಲಿ ಮುನ್ನಡೆ ದೊರೆಯಿತು ಎಂದರು. ಬೈಲಹೊಂಗಲ ಕ್ಷೇತ್ರದಲ್ಲಿ ಜಗದೀಶ ಮೆಟಗುಡ, ವಿಶ್ವನಾಥ ಪಾಟೀಲ, ಜೆಡಿಎಸ್ ಮುಖಂಡ ಶಂಕರ ಮಾಡಲಗಿ, ಹಾಗೂ ಕಾರ್ಯಕರ್ತರ ಶ್ರಮದಿಂದ 21,397 ಮತಗಳ ಮುನ್ನಡೆ, ಬೆಳಗಾವಿ ಉತ್ತರದಲ್ಲಿ 2401 ಮತಗಳ ಲೀಡ್ ಬಂದಿದ್ದು ಇಲ್ಲಿ ಅನಿಲ ಬೆನಕೆ ಮುಖಂಡರ ಪಾತ್ರ ದೊಡ್ಡದ್ದು. ಅದೇ ರೀತಿ ರಾಮದುರ್ಗದಲ್ಲಿ ಸಮಬಲದ ಮತದಾನವಾಗಿದೆ. ಇದಕ್ಕೆ ಮಹದೇವಪ್ಪ ಯಾದವಾಡ, ಚಿಕ್ಕರೇವಣ್ಣ, ಹಿರಿಯ ಬಿಜೆಪಿ ಮುಖಂಡರ, ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಸವದತ್ತಿ ಕ್ಷೇತ್ರದಲ್ಲಿ ಬಿಜೆಪಿಗೆ 16,591 ಮತಗಳ ಹಿನ್ನೆಡೆ ಅಗಿದ್ದು ಆದರೂ ವಿಧಾನಸಭಾ ಚುನಾವಣೆಗಿಂತ ಹೆಚ್ಚು ಬಿಜೆಪಿಗೆ ಬೆಂಬಲಿಸಿದ್ದಾರೆ. ಈ ಎಲ್ಲ ಕ್ಷೇತ್ರಗಳಲ್ಲಿ ಜನ ಮೋದಿಜಿ, ಮಾಜಿ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಹೆಸರಲ್ಲಿ ಅವರು ಮಾಡಿದ ಕೆಲಸ ಕಾರ್ಯಗಳನ್ನು ಗುರುತಿಸಿದ್ದಾರೆ. ಅವರ ಕಾಲದ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಕೆಲಸ ಮಾಡುತ್ತೇನೆ. ಕೇಂದ್ರದ ಅನೇಕ ಯೋಜನೆಗಳ ಬಗ್ಗೆ ನಾಳೆ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ, ಜೆಜೆಎಮ್ ಯೋಜನೆಗಳ ಬಗ್ಗೆ ಚರ್ಚೆ, ಸ್ಮಾರ್ಟ್ ಸಿಟಿ ಕೆಲಸ ಕಾರ್ಯ ವೀಕ್ಷಣೆ, ಬೆಳಗಾವಿ ಕೇಂದ್ರ ಸ್ಥಾನ,2 ನೇ ರಾಜಧಾನಿ ಮಾಡುವ ಸಂಕಲ್ಪ, ಬೆಳಗಾವಿ ಹುಬ್ಬಳ್ಳಿ ರೈಲು ಕಾಮಗಾರಿ ಹಿನ್ನಡೆಗೆ ಸಮಗ್ರ ಪರಿಶೀಲನೆ, ಅವಳಿ ನಗರ ಹುಬ್ಬಳ್ಳಿ ಧಾರವಾಡ ದೊಂದಿಗೆ ಬೆಳಗಾವಿ ಸೇರಿಸಿ ತ್ರಿವಳಿ ನಗರ ಬೆಳವಣಿಗೆ, ಸಾಮ್ರಾ ವಿಮಾನ ನಿಲ್ದಾಣ ಉನ್ನತಿಕರಣ, ರೈಲು ಸಚಿವರೊಂದಿಗೆ ಚರ್ಚಿಸಿ ಬೆಳಗಾವಿಗೆ ಇನ್ನು ಅನ್ನೇಕೆ ರೈಲುಗಳು ಚಲಿಸುವ ವ್ಯವಸ್ಥೆ, ಐಟಿ, ಉದ್ಯಮಕ್ಕೆ ಒತ್ತು, ಸೈನ್ಯಕ್ಕೆ ಸೇರಿದ ಭೂಮಿ ಪಡೆಯಲು ರಕ್ಷಣಾ ಸಚಿವರೊಂದಿಗೆ ಮಾತುಕತೆ, ಶ್ರೀ ಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ, ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಒತ್ತು. ಇನ್ನು ಅನೇಕ ಯೋಜನೆಗಳ ಅಭಿವೃದ್ಧಿಗೆ ಕಾರ್ಯನಿರ್ವಹಿಸುತ್ತೇನೆ. ಈ ಅಧಿಕಾರ ಮತಗಳ ಜಯದಲ್ಲಿ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಮುಖಂಡರಾದ ಎಮ್ ಬಿ. ಜಿರಲಿ, ಜಿಲ್ಲಾ ಅಧ್ಯಕ್ಷ ಶುಭಾಶಗೌಡ ಪಾಟೀಲ, ಜಿಲ್ಲಾ, ರಾಜ್ಯ ಮಟ್ಟದ ಪದಾಧಿಕಾರಿಗಳು, ಕಾರ್ಯಕರ್ತರ ಶ್ರಮದಿಂದ ಆಯ್ಕೆಯಾಗಿದ್ದು ಬೆಳಗಾವಿ ಅಭಿವೃದ್ಧಿಗೆ ಸದಾ ಸಿದ್ದನಿದ್ದೇನೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಈ ಸುದ್ದಿ ಗೋಷ್ಟಿ ಯಲ್ಲಿ ಹಿರಿಯ ಮುಖಂಡ ಶಂಕರಗೌಡ ಪಾಟೀಲ,ಎಮ್ ಬಿ ಜಿರಲಿ,ರಾಜೇಂದ್ರ ಹರಕುಣಿ , ಮಾಜಿ ಶಾಸಕರಾದ ಜಗದೀಶ ಮೆಟಗುಡ, ಮಹದೇವಪ್ಪ ಯಾದವಾದ,ಅನಿಲ ಬೆನಕೆ, ವಿಶ್ವನಾಥ ಪಾಟೀಲ, ಬುಡಾ ಮಾಜಿ ಅಧ್ಯಕ್ಷ ಗೂಳಪ್ಪ ಹೊಸಮನಿ, ಮುರುಗೇoದ್ರಗೌಡ ಪಾಟೀಲ,ಬಸನಗೌಡ ಸಿದ್ರಾಮನಿ,ಸಿ ವಿ ಪಾಟೀಲ, ಶ್ರೀನಿವಾಸ ಪಾಟೀಲ, ಭೈರಪನವರ, ಹಣಮಂತ ಕೊಂಗಾಳಿ, ಶ್ರೀಕಾಂತ ಕಡಕೋಳ,ರವಿ ಪಾಟೀಲ್, ಸೇರಿದಂತೆ ಜಿಲ್ಲಾ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತಿರಿದ್ದರು.