ಅವರಿಗೆ 73 ವರ್ಷ ವಯಸ್ಸಾಗಿತ್ತು. ಗೋಕಾಕ ನಗರದ ಸಮೀಪವಿರುವ ಶಿಂಗಳಾಪೂರ (ಟಕ್ಕೆ) ಗ್ರಾಮದ ನಿವಾಸಿಯಾದ ಅವರು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಕವನ, ಲೇಖನ, ಚುಟುಕು ಸಾಹಿತ್ಯ ರಚಿಸುತ್ತಿದ್ದರು. ಎರಡೂ ಭಾಷೆಗಳ ಮೇಲೆ ಪ್ರಭುತ್ವ ಹೊಂದಿದ ಸೂರಜ ರಫಾಯಿ ಅವರನ್ನು ಜನ ಸೂರಜ ರಫಾಯಿಯಂದೇ ಗುರುತಿಸುತ್ತಿದ್ದರು. ಅವರ ಹೆಸರು ಸೈಯ್ಯದ ಮೊಹಮ್ಮದ ಬ್ರೂಮ ರಫಾಯಿ ಆಗಿತ್ತು. ಕಳೆದ ಒಂದು ವರ್ಷದಿಂದ ಅನಾರೋಗ್ಯಕ್ಕೀಡಾಗಿ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು.
ಗೋಕಾಕ ಹಾಗು ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುತ್ತಿದ್ದ ಎಲ್ಲ ಕವಿಗೋಷ್ಠಿ, ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ಅವರು ಕೆಲ ರಸಮಂಜರಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಹಾಸ್ಯದ ಹೊನಲು ಹರಿಸುತ್ತಿದ್ದರು.
ಸೂರಜ ರಫಾಯಿ ನಿಧನದಿಂದ ಗೋಕಾಕ ಭಾಗದ ಸಾಂಸ್ಕೃತಿಕ ಲೋಕಕ್ಕೆ ತುಂಬಿ ಬರಲಾಗದ ಹಾನಿಯಾಗಿದೆ ಎಂದು ಹಿರಿಯ ಲೇಖಕ, ಕವಿ ಮಹಾಲಿಂಗ ಮಂಗಿ ಅಭಿಪ್ರಾಯಪಟ್ಟಿದ್ದಾರೆ.
ದಿವಂಗತರ ಕುಟುಂಬಿಕರನ್ನು ಭೇಟಿ ಮಾಡಿದ ಮಹಾಲಿಂಗ ಮಂಗಿ ಅವರಿಗೆ ಸಾಂತ್ವನ ಹೇಳಿದರು.
ಸೂರಜ ರಫಾಯಿ ಅವರ ಪತ್ನಿ ಅನೇಕ ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ಸೂರಜ ರಫಾಯಿ ತಮ್ಮ ಹಿಂದೆ ಎರಡು ಗಂಡು, ಮೂರು ಹೆಣ್ಣು ಮಕ್ಕಳು, ನಾಲ್ಕು ಜನ ಸಹೋದರರು, ನಾಲ್ವರು ಸಹೋದರಿಯರನ್ನು, ಅನೇಕ ಮೊಮ್ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ದಿ. 11ರ ರಾತ್ರಿ ನೆರವೇರಿತು.